For the best experience, open
https://m.suddione.com
on your mobile browser.
Advertisement

T20 WC 2024 Prize Money : T20 ವಿಶ್ವಕಪ್‌ನಲ್ಲಿ ಗೆದ್ದ ಭಾರತ, ಸೋತ ದಕ್ಷಿಣ ಆಫ್ರಿಕಾ ಸೇರಿದಂತೆ ಪ್ರತಿ ತಂಡಕ್ಕೂ ಕೋಟಿ ಕೋಟಿ ಹಣ : ಯಾವ ತಂಡಕ್ಕೆ ಎಷ್ಟು ಹಣ ; ಇಲ್ಲಿದೆ ಮಾಹಿತಿ...!

09:39 AM Jun 30, 2024 IST | suddionenews
t20 wc 2024 prize money   t20 ವಿಶ್ವಕಪ್‌ನಲ್ಲಿ ಗೆದ್ದ ಭಾರತ  ಸೋತ ದಕ್ಷಿಣ ಆಫ್ರಿಕಾ ಸೇರಿದಂತೆ ಪ್ರತಿ ತಂಡಕ್ಕೂ ಕೋಟಿ ಕೋಟಿ ಹಣ   ಯಾವ ತಂಡಕ್ಕೆ ಎಷ್ಟು ಹಣ   ಇಲ್ಲಿದೆ ಮಾಹಿತಿ
Advertisement

ಸುದ್ದಿಒನ್ : ಟೀಂ ಇಂಡಿಯಾ ಅದ್ಭುತ ಆಟದೊಂದಿಗೆ 2024 ರ T20 ವಿಶ್ವಕಪ್ ಅನ್ನು ಗೆದ್ದಿದೆ. ಈ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯದಲ್ಲಿ ಸೋಲನುಭವಿಸದ ಟೀಂ ಇಂಡಿಯಾ 17 ವರ್ಷಗಳ ನಿರೀಕ್ಷೆಗೆ ತೆರೆ ಎಳೆದಿದ್ದು, ಅದೇ ಧಾಟಿಯಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿದೆ.

Advertisement

ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಗ್ರೂಪ್ ಹಂತವಾದ ಸೂಪರ್-8ನಲ್ಲಿ ಎದುರಾಳಿಗಳನ್ನು ಸೋಲಿಸಿತು. ಇದಾದ ಬಳಿಕ ಸೆಮಿಫೈನಲ್ ನಲ್ಲೂ ಇಂಗ್ಲೆಂಡ್ ನಂತಹ ಬಲಿಷ್ಠ ತಂಡವನ್ನು ಭಾರತ ಮಣಿಸಿತ್ತು. ದಕ್ಷಿಣ ಆಫ್ರಿಕಾವನ್ನು ಫೈನಲ್ ಪಂದ್ಯದಲ್ಲಿ ಸೋಲಿಸಿ ಇದೀಗ 11 ವರ್ಷಗಳ ನಂತರ ಐಸಿಸಿ ಟ್ರೋಫಿಯನ್ನು ಗೆದ್ದಿದ್ದಾರೆ.

Advertisement

ಟೀಂ ಇಂಡಿಯಾ 17 ವರ್ಷಗಳ ನಂತರ ಟಿ20 ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿದೆ. ಇದೀಗ ಈ ಟ್ರೋಫಿಯೊಂದಿಗೆ ಐಸಿಸಿಯಿಂದ 2.45 ಮಿಲಿಯನ್ ಡಾಲರ್ ಅಂದರೆ ಸುಮಾರು 20.42 ಕೋಟಿ ಬಹುಮಾನ ಪಡೆದಿದೆ.

Advertisement

ಇದಲ್ಲದೇ ಭಾರತ ತಂಡ ಪ್ರತಿ ಪಂದ್ಯದ ಗೆಲುವಿಗೆ ಪ್ರತ್ಯೇಕವಾಗಿ 26 ಲಕ್ಷ ರೂ. ಇವೆಲ್ಲವೂ ಸೇರಿ ಈ ಟೂರ್ನಿಯ ಮೂಲಕ ಭಾರತ ತಂಡ 22.76 ಕೋಟಿ ರೂಪಾಯಿಗಳ ಸಂಭಾವನೆ ಪಡೆದಿದೆ.

Advertisement
Advertisement

ಪ್ರಥಮ ಬಾರಿಗೆ ಫೈನಲ್ ತಲುಪಿ ರನ್ನರ್ ಅಪ್ ಆದ ದಕ್ಷಿಣ ಆಫ್ರಿಕಾ 1.28 ಮಿಲಿಯನ್ ಡಾಲರ್ (ಸುಮಾರು 10.67 ಕೋಟಿ ರೂ.) ಪಡೆದುಕೊಂಡಿದೆ. ಇದು ಚಾಂಪಿಯನ್ ತಂಡದ ಬಹುಮಾನದ ಅರ್ಧದಷ್ಟು ಇರುತ್ತದೆ. ಇದಲ್ಲದೇ 8 ಪಂದ್ಯ ಗೆದ್ದಿದ್ದಕ್ಕೆ ಪ್ರತ್ಯೇಕವಾಗಿ ಸುಮಾರು 2.07 ಕೋಟಿ ರೂ ಸೇರಿದಂತೆ ಈ ಟೂರ್ನಿಯ ಮೂಲಕ ದಕ್ಷಿಣ ಆಫ್ರಿಕಾ ಒಟ್ಟು ರೂ.12.7 ಕೋಟಿ ಗಳಿಸಿದೆ.

ಸೆಮಿಫೈನಲ್‌ನಲ್ಲಿ ಸೋತ ತಂಡಗಳಿಗೂ ಐಸಿಸಿ ರೂ.6.56 ಕೋಟಿ ಬಹುಮಾನ ಮೊತ್ತವನ್ನು ಕೊಡುತ್ತದೆ. ಇದರ ಪ್ರಕಾರ ಸೆಮಿಫೈನಲ್‌ನಲ್ಲಿ ಸೋತ ಅಫ್ಘಾನಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳಿಗೆ 6.56 ಕೋಟಿ ರೂ. ಬಹುಮಾನದ ಮೊತ್ತದ ಹೊರತಾಗಿ ಪ್ರತಿ ಪಂದ್ಯದ ಗೆಲುವಿಗೆ ಪ್ರತ್ಯೇಕವಾಗಿ ರೂ.26 ಲಕ್ಷ ನೀಡಲಾಗುವುದು.

ಸೂಪರ್-8 ಸುತ್ತಿನಿಂದ ನಿರ್ಗಮಿಸಿದ ಪ್ರತಿ ತಂಡಕ್ಕೆ 3.18 ಕೋಟಿ ರೂ ನಿಗದಿ ಪಡಿಸಲಾಗಿದೆ. ಈ ಪ್ರಶಸ್ತಿಯನ್ನು ಗೆದ್ದ ತಂಡಗಳಲ್ಲಿ ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಯುಎಸ್ಎ ಸೇರಿವೆ. ಇದಲ್ಲದೇ ಈ ತಂಡಗಳ ಪ್ರತಿ ಗೆಲುವಿಗೆ ಪ್ರತ್ಯೇಕವಾಗಿ 26 ಲಕ್ಷ ರೂ. ಪ್ರಶಸ್ತಿ ನೀಡಲಾಗಿದೆ.

ಗುಂಪು ಹಂತದ ತಂಡವನ್ನು ಬರಿಗೈಯಲ್ಲಿ ಕಳುಹಿಸಲು ICC ಅನುಮತಿಸುವುದಿಲ್ಲ. ಅಂದರೆ ಐಸಿಸಿ 9 ರಿಂದ 12ನೇ ಶ್ರೇಯಾಂಕದ ತಂಡಗಳಿಗೆ ಪ್ರತಿ ಪಂದ್ಯದ ಗೆಲುವಿಗೆ ರೂ.2.06 ಕೋಟಿಗಳನ್ನು ನೀಡುತ್ತದೆ. ಅಲ್ಲದೆ, 13ರಿಂದ 20ನೇ ಶ್ರೇಯಾಂಕದ ತಂಡಗಳಿಗೆ ಸುಮಾರು 1.87 ಕೋಟಿ ರೂ. ನೀಡುತ್ತದೆ.

Advertisement
Tags :
Advertisement