For the best experience, open
https://m.suddione.com
on your mobile browser.
Advertisement

ಸಸ್ಪೆನ್ಸ್ ಥ್ರಿಲ್ಲರ್ 'ಕೊಲೆಯಾದವನೆ ಕೊಲೆಗಾರ' ಟ್ರೇಲರ್ ರಿಲೀಸ್ : ಮಾರ್ಚ್ ನಲ್ಲಿ ಸಿನಿಮಾ

09:39 PM Feb 05, 2024 IST | suddionenews
ಸಸ್ಪೆನ್ಸ್ ಥ್ರಿಲ್ಲರ್  ಕೊಲೆಯಾದವನೆ ಕೊಲೆಗಾರ  ಟ್ರೇಲರ್ ರಿಲೀಸ್   ಮಾರ್ಚ್ ನಲ್ಲಿ ಸಿನಿಮಾ
Advertisement

ವಿಭಿನ್ನ ಟೈಟಲ್ ಗಳ ಮೂಲಕ ಸಿನಿಮಾಗಳು ಆಗಾಗ ಸದ್ದು‌ಮಾಡುತ್ತವೆ. ಟೈಟಲ್ ನಷ್ಟೇ ಥ್ರಿಲ್ಲಿಂಗ್ ಆಗಿ ಟ್ರೇಲರ್ ಕೂಡ ಇರಲಿರುತ್ತವೆ. ಟ್ರೇಲರ್ ನೋಡಿನೆ ಜನ ಸಿನಿಮಾಗೆ ಬರುವುದು. ಅಂತ ಪ್ರಾಮಿಸಿಂಗ್ ಟ್ರೆಲರ್ ರಿಲೀಸ್ ಮಾಡಿದೆ.

Advertisement
Advertisement

Advertisement

ಕಾರ್ಯಕ್ರಮದಲ್ಲಿ ನಿರ್ದೇಶಕ ಮಲ್ಲಿಕಾರ್ಜುನ ಹೀರೇತನದ್ ಅವರು ಮಾತನಾಡಿ, ಈ ಸಿನಿಮಾದ ಡೈರೆಕ್ಟರ್ ಅಂಡ್ ಪ್ರೊಡ್ಯೂಸರ್ ಎರಡು ನಾನೇ. ಇದರಲ್ಲಿ ನಾಲ್ಕು ಕ್ಯಾರೆಕ್ಟರ್ ಬರುತ್ತೆ. ಒಂದೊಂದು ವಿಭಿನ್ನ ಕಥೆಗಳನ್ನು ಹೇಳುತ್ತವೆ. ತುಂಬಾ ಕಷ್ಟ ಪಟ್ಟು ಈ ಸಿನಿಮಾ ಮಾಡಿದ್ದೀವಿ. ಹುಟ್ಟಿದ್ದು ಹಾವೇರಿಯಲ್ಲಿ, ಬೆಳೆದಿದ್ದೆಲ್ಲಾ ತುಮಕೂರಿನಲ್ಲಿ. ಸಿನಿಮಾದ ಮೇಲಿನ ಆಸಕ್ತಿಯಿಂದ ನಿರ್ದೇಶನ ಮಾಡಿದ್ದೀನಿ. ಬಡವರ ಮನೆ ಮಗ ಬೆಂಗಳೂರಿಗೆ ಬಂದಾಗ ಏನೆಲ್ಲಾ ಸಮಸ್ಯೆ ಎದುರಾಗುತ್ತದೆ ಎಂದು ತೋರಿಸಿದ್ದೀವಿ. ತಂದೆ-ಮಗಳ ಬಾಂಧವ್ಯವೂ ಇದರಲ್ಲಿದೆ ಎಂದು ನಿರ್ದೇಶಕರು ಕಂ ನಿರ್ಮಾಪಕರು ಮನದ ಮಾತು ಹಂಚಿಕೊಂಡಿದ್ದಾರೆ.

Advertisement

ನಟ ಸಿದ್ದು ಎನ್ ಆರ್ ಮಾತನಾಡಿ, ವೇದಿಕೆ ಮೇಲಿದ್ದವರೆಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಸ್ಟೋರಿ ಬಗ್ಗೆ ಏನು ಹೇಳುವುದಿಲ್ಲ. ಹೀರೋಯಿನ್ ಕಷ್ಟದಲ್ಲಿ ಸಿಕ್ಕಿ ಹಾಕಿಕೊಂಡರೆ ಹೀರೋ ಬಂದು ಕಾಪಾಡ್ತಾನೆ ಎಂಬುದು ತಲೆಯಲ್ಲಿ ಬರುತ್ತೆ. ಆದರೆ ನಮ್ಮ ಸಿನಿಮಾದಲ್ಲಿ ಒಂದೊಂದು ಸೀನ್ ಕೂಡ ಸಸ್ಪೆನ್ಸ್ ಆಗಿದೆ. ಒಂದೊಂದು ಫೋಟೋ ಕೂಡ ಒಂದೊಂದು ಕಥೆ ಹೇಳುತ್ತದೆ. ಎಲ್ಲರಿಗೂ ಒಂದಲ್ಲ ಒಂದು ಕಥೆ ಇಷ್ಟವಾಗುತ್ತದೆ. ಇಂಡಸ್ಟ್ರಿಗೆ ಬರಬೇಕೆಂದು ನಾನು ಇಷ್ಟಪಡುತ್ತಿದ್ದೆ. ಅಷ್ಟರಲ್ಲಿ ನಿರ್ದೇಶಕರು ಕೂಡ ಪರಿಚಯವಾಗಿದ್ದರು. ಹೀಗಾಗಿ ಇಬ್ಬರ ವೇವ್ಸ್ ಮ್ಯಾಚ್ ಆಗಿ, ಈ ಸಿನಿಮಾ ಮಾಡಿದ್ದೀವಿ ಎಂದಿದ್ದಾರೆ.

ನಟ ಕಿರಣ್ ಸೋಮಣ್ಣ ಮಾತನಾಡಿ, ಈ ಸಿನಿಮಾದಲ್ಲಿ ನಾನು ಪೊಲೀಸ್ ಪಾತ್ರ ಮಾಡಿದ್ದೀನಿ. ವೆಬ್ ಸೀರಿಸ್ ಮಾಡುವಾಗ ನಿರ್ದೇಶಕರ ಪರಿಚಯವಾಯಿತು. ಅಲ್ಲಿಂದ ನಮ್ಮೆಲ್ಲರ ಜರ್ನಿ ಹಾಗೇ ಸಾಗುತ್ತಾ ಇದೆ. ಫ್ರೆಂಡ್ಸ್ ಆಗಿನೇ ಎಲ್ಲರೂ ತೆರೆ ಮೇಲೂ ಕಾಣಿಸಿಕೊಳ್ಳುತ್ತೀವಿ ಎಂದಿದ್ದಾರೆ.

ಎಲ್ಲಾ ಹೊಸಬರು, ಸಿನಿಮಾ ಕ್ರೇಜ್ ಇರುವಂತವರೇ ಸೇರಿಕೊಂಡು ಕೊಲೆಯಾದವನೇ ಕೊಲೆಗಾರ ಎಂಬ ಸಿನಿಮಾವನ್ನು ಸಿದ್ಧ ಮಾಡಿಕೊಂಡಿದ್ದು, ಮಾರ್ಚ್ ತಿಂಗಳಲ್ಲಿ ರಿಲೀಸ್ ಮಾಡಲಿದ್ದಾರೆ. ಈ ಸಿನಿಮಾವನ್ನು ಅಭಯ್ ಪ್ರೊಡಕ್ಷನ್ ನಿರ್ಮಾಣ ಮಾಡಿದೆ. ಅತಿಶಯ ಜೈನ್ ಎಂ ಕೆ - ಸಂಗೀತ, ಅರವಿಂದ ರಾಜ್ - ಸಂಕಲನ, ಅಜಯ್ - ಫೈಟ್ ಮಾಸ್ಟರ್ ಆಗಿದ್ದಾರೆ. ಉಳಿದಂತೆ ಬಾಲ ರಾಜ್ವಾಡಿ, ಕಿರಣ್ ಸೋಮಣ್ಣ, ಸಿದ್ದು ಎನ್ ಆರ್, ಚಂದ್ರಿಕಾ, ಅಜಯ್ ತಾರಾಬಳಗದಲ್ಲಿದ್ದಾರೆ.

Advertisement
Tags :
Advertisement