ತೀರಾ ಹದಗೆಟ್ಟಿದೆ ಸುನೀತಾ ವಿಲಿಯಮ್ಸ್ ಆರೋಗ್ಯ : ನಾಸಾ ಕಳವಳ..!
ಬೆಂಗಳೂರು: ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿಯೇ ಸಿಲುಕಿಕೊಂಡಿದ್ದಾರೆ. ಆದರೆ ಅವರ ಇತ್ತೀಚಿನ ಫೋಟೋ ನೋಡಿದರೆ ಎಂಥವರಿಗೂ ಭಯವಾಗುವಂತೆ ಇದೆ. ತೀರಾ ಸಣ್ಣವಾಗಿದ್ದು, ಅವರ ಆರೋಗ್ಯ ಹದಗೆಟ್ಟಿರುವುದು ಕಾಣಿಸುತ್ತಿದೆ. ಫೋಟೋ ನೋಡಿದ ನಾಸಾ ಅಧಿಕಾರಿಗಳೇ ಭಯ ಪಟ್ಟಿದ್ದಾರೆ.
ಸುನೀತಾ ವಿಲಿಯಮ್ಸ್ ಸೂರ್ಯನಿಗೆ ತೀರಾ ಹತ್ತಿರವಿದ್ದ ಅದರ. ಸೂರ್ಯನ ಕಿರಣಗಳ ತಾಪಕ್ಕೆ ಸಿಲುಕಿದ್ದಾರೆ. ಮೈಕ್ರೋ ಗ್ರ್ಯಾವಿಟಿ ಇದ್ದು, ಎಲ್ಲಾ ಥರ ರೇಡಿಯಷನ್ಸ್ ಇರುತ್ತದೆ. ಕ್ಯಾನ್ಸರ್ ನಾಶಕ್ಕಾಗಿ ಈ ರೇಡಿಯೇಷನ್ಸ್ ಬಳಸಲಾಗುತ್ತದೆ. ಇಂಥಹ ರೇಡಿಯೇಷನ್ಸ್ ಮಧ್ಯೆಯೇ ಸುನೀತಾ ವಿಲಿಯಮ್ಸ್ ಬದುಕುತ್ತಿದ್ದಾರೆ. ಹೀಗಾಗಿ ನಾನಾ ರೀತಿಯ ಆರೋಗ್ಯ ಸಮಸ್ಯೆಯು ಎದುರಾಗಿದೆ. ಪ್ರೋಟೀನ್ ಟ್ಯಾಬ್ಲೆಟ್ ತೆಗೆದುಕೊಂಡು ಹೈ ಎನರ್ಜೊ ಪಡೆಯುತ್ತಿದ್ದಾರೆ. ಅವಧಿಗಿಂತಲು ಹೆಚ್ಚಿನ ಸಮಸ್ಯೆ ಅಲ್ಲಿಯೇ ಇರುವ ಕಾರಣ ಕಣ್ಣುಗಳಿಗು ತೊಂದರೆಯಾಗಿದೆ. ಮೆದುಳಿನ ಭಾಗಕ್ಕೂ ಸಮಸ್ಯೆಯಾಗಿದ್ದು, ಯೋಚನಾ ಸಾಮರ್ಥ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಬಾಹ್ಯಾಕಾಶದಲ್ಲಿ ತೇಲಿಕೊಂಡೆ ಇರುವ ಕಾರಣ ಮೂಳೆಗಳ ಸಮಸ್ಯೆಯು ಎದುರಾಗಿದೆ.
ಸುನೀತಾ ವಿಲಿಯಮ್ಸ್ ಭೂಮಿಗೆ ಬಂದರು ಅನಾರೋಗ್ಯದ ಸಮಸ್ಯೆ ಕಾಡುತ್ತದೆ. ದೇಹದ ಅಂಗಾಂಗ ಭಾಗಗಳಲ್ಲಿ ನೋವು ಕಾಡುತ್ತದೆ. ಸ್ನಾಯು ಸೆಳೆತದಿಂದ ಬಳಲುತ್ತಾರೆ ಎನ್ನಲಾಗಿದೆ. ಸುನೀತಾ ವಿಲಿಯಮ್ಸ್ ಫೋಟೋ ಕಂಡು ವಿಜ್ಞಾನಿಗಳೇ ದಿಗ್ಬ್ರಾಂತರಾಗಿದ್ದಾರೆ. ಸಿಕ್ಕಾಪಟ್ಟೆ ತೂಕ ಕಳೆದುಕೊಂಡಿರುವ ಸುನೀತಾ ವಿಲಿಯಮ್ಸ್ ಸಣಕಲು ಕಡ್ಡಿಯಂತೆ ಆಗಿದ್ದಾರೆ. ಆ ಫೋಟೋನಲ್ಲಿ ಗುಬ್ಬಚ್ಚಿಯಂತೆ ಕೂತಿದ್ದಾರೆ. ಇದನ್ನು ಹೊರಗಿನ ಜನ ನೋಡಿಯೂ ಶಾಕ್ ಆಗಿದ್ದಾರೆ. ಸುನೀತಾ ವಿಲಿಯಮ್ಸ್ ಫೆಬ್ರವರಿ 2025ಕ್ಕೆ ಭೂಮಿಗೆ ಬರುವ ಸಾಧ್ಯತೆ ಇದೆ. ಆದಷ್ಟು ಬೇಗ ಭೂಮಿಗೆ ಬರಲಿ ಎಂದೇ ದೇಶದ ಜನ ಬಯಸುತ್ತಿದ್ದಾರೆ.