For the best experience, open
https://m.suddione.com
on your mobile browser.
Advertisement

ಬಾಹ್ಯಾಕಾಶದಲ್ಲೇ ಕ್ರಿಸ್ಮಸ್ ಆಚರಿಸಿದ ಸುನಿತಾ ವಿಲಿಯಮ್ಸ್..!

08:02 PM Dec 17, 2024 IST | suddionenews
ಬಾಹ್ಯಾಕಾಶದಲ್ಲೇ ಕ್ರಿಸ್ಮಸ್ ಆಚರಿಸಿದ ಸುನಿತಾ ವಿಲಿಯಮ್ಸ್
Advertisement

ಸುನೀತಾ ವಿಲಿಯಮ್ಸ್‌ ಹಾಗೂ ಡಾನ್ ಪೆಟ್ಟಿಟ್ ಬಾಹ್ಯಾಕಾಶದಲ್ಲಿಯೇ ಕ್ರಿಸ್ಮಸ್ ಆಚರಣೆ ಮಾಡಿದ್ದಾರೆ. ಸದ್ಯ ನಾಡಿನೆಲ್ಲೆಡೆ ಕ್ರಿಸ್ಮಸ್ ಹಬ್ಬದ ಸಂಭ್ರಮ ಮನೆ ಮಾಡಿದೆ. ತಯಾರಿಯೂ ನಡೆಯುತ್ತಿದೆ. ಹೀಗಾಗಿ ಇಬ್ಬರು ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿಯೇ ಆಚರಣೆಯನ್ನು ಮಾಡಿದ್ದಾರೆ. ಈ ಹಿಂದೆ ದೀಪಾವಳಿ ಹಬ್ಬವನ್ನು ಅಚರಣೆ ಮಾಡಿ, ನಾಸಾಗೆ ಫೋಟೋ ಕಳುಹಿಸಿದ್ದರು.

Advertisement

ಸುನೀತಾ ವಿಲಿಯಮ್ಸ್ ಕೇವಲ ಹದಿನೈದು ದಿನಕ್ಕೆಂದು ಬಾಹ್ಯಾಕಾಶಕ್ಕೆ ತೆರಳಿದ್ದರು. ಜೂನ್ ಐದರಂದು ಬಾಹ್ಯಾಕಾಶಕ್ಕೆ ತೆರಳಿದ್ದರು. ಇಲ್ಲಿಯವರೆಗೂ ಭೂಮಿಗೆ ಬರಲು ಆಗದೆ ಸಂಕಟ ಪಡುತ್ತಿದ್ದಾರೆ. ತಾಂತ್ರಿಕ ದೋಷದಿಂದ ಅಲ್ಲಿಯೇ ಉಳಿಯುವಂತೆ ಆಗಿದೆ. ಫೆಬ್ರವರಿ 2025ಕ್ಕೆ ಭೂಮಿಗೆ ಬರುವ ನಿರೀಕ್ಷೆ ಇದೆ. ನಾಸಾ ಕೂಡ ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದೆ. ಖುಷಿ ವಿಚಾರ ಏನು ಅಂದ್ರೆ ಸುನೀತಾ ವಿಲಿಯಮ್ಸ್ ತಮಗೆ ಬೇಕಾದ ಅಡುಗೆ ಮಾಡಿಕೊಳ್ಳುವ ವ್ಯವಸ್ಥೆ ಅವರಿರುವಲ್ಲಿ ಅಗಿದೆ. ಇಷ್ಟು ದಿನ ಹೈಪ್ರೋಟೀ‌ನ್ ಮಾತ್ರೆಗಳಿಂದಾನೇ ಬದುಕಿದ್ದರು.

ಇಂದು (ಮಂಗಳವಾರ) ಅಂತರಾಷ್ಟ್ರೀಯ ಬಾಹ್ಯಕಾಶ ನಿಲ್ದಾಣದಲ್ಲಿಯೇ ಕ್ರಿಸ್ಮಸ್ ಆಚರಣೆ ಮಾಡಿದ್ದಾರೆ. ಆ ಫೋಟೋಗಳನ್ನು ನಾಸಾ ಹಂಚಿಕೊಂಡಿದೆ. ಅನದರ್ ಡೇ.. ಅನದರ್ ಸ್ಲೇ ಎಂಬ ಅಡಿ ಬರಹವನ್ನು ನೀಡಲಾಗಿದೆ. ಕ್ರಿಸ್ಮಸ್ ಹಬ್ಬದ ಆಚರಣೆಯ ಜೊತೆಗೆ ವಿಶೇಷ ಅಡುಗೆಯನ್ನು ತಯಾರು ಮಾಡಿಕೊಂಡಿದ್ದಾರೆ‌. ರೊಬೊಟಿಕ್ ಕಾರ್ಬೋ ಮೆಷಿನ್ ಮೂಲಕ ಇವರು ತಮ್ಮ ಅಡುಗೆಯನ್ನು ತಾವೇ ರೆಡಿ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಆಹಾರ ತಯಾರಿಕೆಗೆ ಬೇಕಾದ ತಾಜಾ ಪದಾರ್ಥಗಳು ಕೂಡ ರವಾನೆಯಾಗುತ್ತಿದೆ. ಅಷ್ಟೇ ಅಲ್ಲ ಸುನೀತಾ ವಿಲಿಯನ್ಸ್ ಹಾಗೂ ಇನ್ನೊಬ್ಬ ಗಗನಯಾತ್ರಿಯೂ ತಮ್ಮ ಕುಟುಂಬದವರ ಜೊತೆಗೆ ವಿಡಿಯೋ ಕಾಲ್ ಮೂಲಕ ಸಂಪರ್ಕದಲ್ಲಿದ್ದಾರೆ.

Advertisement

Tags :
Advertisement