For the best experience, open
https://m.suddione.com
on your mobile browser.
Advertisement

ಮಹತ್ವದ ಸಭೆ ಕರೆದ ಸುಮಲತಾ : ದರ್ಶನ್ ಮಾತಿಗೆ ಬರ್ತಾರಾ ಸಚ್ಚಿದಾನಂದ..?

12:51 PM Feb 25, 2024 IST | suddionenews
ಮಹತ್ವದ ಸಭೆ ಕರೆದ ಸುಮಲತಾ   ದರ್ಶನ್ ಮಾತಿಗೆ ಬರ್ತಾರಾ ಸಚ್ಚಿದಾನಂದ
Advertisement

ಕಳೆದ ಬಾರಿಯೂ ಮಂಡ್ಯ ಲೋಕಸಭಾ ಚುನಾವಣೆ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿತ್ತು. ಈ ಬಾರಿಯೂ ಮಂಡ್ಯ ಕ್ಷೇತ್ರ ಬಿಸಿಬಿಸಿ ಕಣವಾಗುವ ಎಲ್ಲಾ ಸಾಧ್ಯತೆಗಳು ಕಾಣಿಸುತ್ತಿವೆ. ಅದರಲ್ಲೂ ಈ ಬಾರಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ದಳಪತಿಗಳು ಭದ್ರ ಕೋಟೆಯನ್ನು ಬಿಟ್ಟುಕೊಡುವುದಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ ಮಂಡ್ಯದಿಂದ ಜೆಡಿಎಸ್ ಅಭ್ಯರ್ಥಿಯೇ ಸ್ಪರ್ಧೆ ನಡೆಸುವುದು ಪಕ್ಕಾ ಆಗಿದೆ.

Advertisement
Advertisement

ಆದರೆ ಸಂಸದೆ ಸುಮಲತಾ ಅವರು ಕೂಡ ಮಂಡ್ಯ ಬಿಟ್ಟುಕೊಡುವ ಮಾತೇ ಇಲ್ಲ ಎನ್ನುತ್ತಿದ್ದಾರೆ. ಮಂಡ್ಯದಿಂದಾನೇ ಸ್ಪರ್ಧೆ ಎನ್ನುತ್ತಿದ್ದಾರೆ. ಬಿಜೆಪಿಯಿಂದಾನೇ ಟಿಕೆಟ್ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅದಕ್ಕಾಗಿಯೇ ಈಗಾಗಲೇ ಎಲ್ಲಾ ತಯಾರಿಯೂ ನಡೆಸಿದ್ದಾರೆ. ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಬಂದಿದ್ದಾರೆ. ಇಂದು ಬೆಂಗಳೂರಿನಲ್ಲಿ ಚುನಾವಣೆ ಸಂಬಂಧ ಮಹತ್ವದ ಸಭೆ ನಡೆಸಲಿದ್ದಾರೆ. ಸಂಜೆ ವೇಳೆಗೆ ಈ ಸಭೆ ನಿಗದಿಯಾಗಿದೆ.

Advertisement

ಒಂದು ವೇಳೆ ಬಿಜೆಪಿಯಿಂದ ಟಿಕೆಟ್ ಸಿಗದೆ ಹೋದಲ್ಲಿ ಮತ್ತೆ ಪಕ್ಷೇತರ ಅಭ್ಯರ್ಥಿಯಾಗಿಯೂ ಸ್ಪರ್ಧೆ ಮಾಡಬಹುದು. ಕಳೆದ ಬಾರಿ ಇಂಡವಾಳು ಸಚ್ಚಿದಾನಂದ ಸೇರಿದಂತೆ ಹಲವರು ಸುಮಲತಾ ಬೆಂಬಲಕ್ಕೆ ನಿಂತಿದ್ದರು. ಆದರೆ ಕಳೆದ ಕೆಲ ದಿನಗಳಿಂದ ಸುಮಲತಾ ಆಪ್ತರೆನಿಸಿಕೊಂಡಿದ್ದ ಸಚ್ಚಿದಾನಂದ, ಅಂತರ ಕಾಯ್ದುಕೊಂಡಿದ್ದಾರೆ. ಮತ್ತೆ ಆಪ್ತರಿಗೆ ಗಾಳ ಹಾಕಿರುವ ಸುಮಲತಾ, ಸಚ್ಚಿದಾನಂದರ ಮನವೊಲಿಸಲು ದರ್ಶನ್ ಅವರ ಸಹಾಯ ಕೇಳಿದ್ದಾರೆ ಎನ್ನಲಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ದರ್ಶನ್ ಹಾಗೂ ಯಶ್ ಜೋಡೆತ್ತುಗಳಂತೆ ನಿಂತು ಸುಮಲತಾ ಗೆಲುವಿಗೆ ಕಾರಣವಾಗಿದ್ದರು. ಇದೀಗ ಈ ಬಾರಿಯೂ ಸುಮಲತಾ ಗೆಲುವಿಗೆ ಜೋಡೆತ್ತು ಒಂದಾಗುತ್ತಾರ ನೋಡಬೇಕಿದೆ. ಇಂದು ಸಂಜೆ ಸುಮಲತಾ ಅವರ ಬೆಂಗಳೂರು ನಿವಾಸದಲ್ಲಿ 100-150 ಬೆಂಬಲಿಗರ ಸಭೆ ನಡೆಸಲಿದ್ದಾರೆ.

Advertisement
Advertisement

Advertisement
Tags :
Advertisement