Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

'ಮಾರ್ಟಿನ್' ಬಗ್ಗೆ ನೆಗಿಟಿವ್ ರಿವ್ಯೂ ಮಾಡಿ ಸುದ್ದಿಯಲ್ಲಿದ್ದ ಸುಧಾಕರ್ ಅರೆಸ್ಟ್..!

09:42 PM Oct 15, 2024 IST | suddionenews
Advertisement

 

Advertisement

 

ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಇಡೀ ವಿಶ್ವದಾದ್ಯಂತ ಸೌಂಡು ಮಾಡಲು ಪ್ರಯತ್ನ ಪಟ್ಟಿದ್ದು ಮಾರ್ಟಿನ್ ಸಿನಿಮಾ. 13 ಭಾಷೆಯಲ್ಲಿ ಇದೇ‌ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದು ತಯಾರಾಗಿತ್ತು. ಆದರೆ ರಿಲೀಸ್ ಆದ ಮೇಲೆ ಅಷ್ಟಾಗಿ ಸದ್ದು ಮಾಡಲಿಲ್ಲ. ನೂರಾರು ಕೋಟಿ ಬಂಡವಾಳ ಹಾಕಿದ್ದರಿಂದ ಥಿಯೇಟರ್ ಗೆ ಜನ ಬರಲೇಬೇಕು ಎಂಬ ಅಭಿಲಾಷೆ ಇಡೀ ತಂಡದ್ದಾಗಿರುತ್ತದೆ. ಈಗಂತು ಒಂದೇ ಒಂದು ವಾರ ಥಿಯೇಟರ್ ನಲ್ಲಿ ಸಿನಿಮಾ ಉಳಿಯುವುದೇ ಹೆಚ್ಚು. ಹೀಗಿರುವಾಗ ಆರಂಭದಲ್ಲೇ ನೆಗೆಟಿವ್ ಕಮೆಂಟ್ ಗಳು ಬಂದರೆ ಸಿನಿಮಾದ ಕಲೆಕ್ಷನ್ ಮೇಲೆ ಹೊಡೆತ ಬೀಳುತ್ತದೆ ಎಂಬ ಕಾರಣಕ್ಕೆ ಸಿನಿಮಾ ತಂಡ ನೆಗೆಟಿವ್ ಕಮೆಂಟ್ ನೀಡಬೇಡಿ ಎಂದೇ ಹೇಳುತ್ತಾರೆ. ಆದರೆ ಯೂಟ್ಯೂಬರ್ ಸುಧಾಕರ್ ಎಂಬಾತ ಮಾರ್ಟಿನ್ ಸಿನಿಮಾ ನೆಗೆಟಿವ್ ರಿವ್ಯೂ ಮಾಡಿಯೇ ಸುದ್ದಿಯಾಗಿದ್ದರು. ಇದೀಗ ಹಲ್ಲೆ ಆರೋಪದ ಮೇಲೆ ಸುಧಾಕರ್ ಅರೆಸ್ಟ್ ಆಗಿದ್ದಾರೆ.

Advertisement

ಹಲ್ಲೆ ಆರೋಪದಲ್ಲಿ ಸುಧಾಕರ್ ಭಾಗಿಯಾಗಿದ್ದರು ಎನ್ನಲಾಗಿದ್ದು, ಇದೀಗ ಮಾದನಾಯಕನಹಳ್ಳಿ ಪೊಲೀಸರು ಆತನನ್ನು ಅರೆಸ್ಟ್ ಮಾಡಿದ್ದಾರೆ. ಸುಧಾಕರ್ ವಿರುದ್ಧ ಪೊಲೀಸರು ವಾರೆಂಟ್ ಸಹ ಜಾರಿ ಮಾಡಿದ್ದರು. ಹಲ್ಲೆ ಕೇಸಿನಲ್ಲಿ ಸುಧಾಕರ್ ಅರೆಸ್ಟ್ ಆಗಿದ್ದಾರೆ. ಸುಧಾಕರ್ ವಿಚಾರಣೆ ನಡೆಸಿದ ಬಳಿಕ ಹಲ್ಲೆಯ ಮಾಹಿತಿ ಸಿಗಲಿದೆ.

ಮಾರ್ಟಿನ್ ಸಿನಿಮಾ ಬಗ್ಗೆ ನೆಗೆಟಿವ್ ವಿಮರ್ಶೆ ಮಾಡಿದ್ದಾಗಲೂ ಧ್ರುವ ಸರ್ಜಾ ಫ್ಯಾನ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಾದನಾಯಕನಹಳ್ಳಿ ಪೊಲೀಸರು ಆಗ ಠಾಣೆಗೆ ಕರೆಸಿ, ಬುದ್ದಿ ಮಾತು ಹೇಳಿ, ವಿಡಿಯೋ ಡಿಲೀಟ್ ಮಾಡಿ ಕಳುಹಿಸಿದ್ದರು. ಆದರೆ ಈಗ ಹಲ್ಲೆ ಆರೋಪದ ಮೇಲೆ ಅರೆಸ್ಟ್ ಮಾಡಿದ್ದಾರೆ.

Advertisement
Tags :
arrestedbengaluruchitradurgaMartinnegativereviewsuddionesuddione newsSudhakarಅರೆಸ್ಟ್ಚಿತ್ರದುರ್ಗನೆಗಿಟಿವ್ಬೆಂಗಳೂರುಮಾರ್ಟಿನ್ರಿವ್ಯೂಸುದ್ದಿಒನ್ಸುದ್ದಿಒನ್ ನ್ಯೂಸ್ಸುಧಾಕರ್
Advertisement
Next Article