ಸುದೀಪ್ 'ಮ್ಯಾಕ್ಸ್' ಅಬ್ಬರ : ಫ್ಯಾನ್ಸ್ ಫುಲ್ ಖುಷಿ..!
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾ ಇಂದು ಎಲ್ಲಾ ಭಾಷೆಯಲ್ಲೂ ರಿಲೀಸ್ ಆಗಿದೆ. ಸುಮಾರು ಎರಡೂವರೆ ವರ್ಷಗಳ ಬಳಿಕ ಸುದೀಪ್ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಬೆಳಗ್ಗೆ ಏಳು ಗಂಟೆಯಿಂದಾನೇ ಶೋ ಶುರುವಾಗಿದೆ. ಸುಮಾರು 250ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಮ್ಯಾಕ್ಸ್ ಅಬ್ಬರಿಸಿದೆ.
ಇಂದು ಕ್ರಿಸ್ಮಸ್ ಹಬ್ಬದ ಜೊತೆಗೆ ಸುದೀಪ್ ಅಭಿಮಾನಿಗಳಿಗೂ ಹಬ್ಬ ಜೋರಾಗಿದೆ. ಮ್ಯಾಕ್ಸ್ ಟಿಕೆಟ್ ಕೂಡ ಸೋಲ್ಡ್ ಔಟ್ ಆಗಿತ್ತು. ಇಂದು ಥಿಯೇಟರ್ ಮುಂದೆ ಅಭಿಮಾನಿಗಳು ಸಂಭ್ರಮಿಸಿದರು. ಕುಣಿದು ಕುಪ್ಪಳಿಸಿದರು. ಮೊದಲ ಶೋ ನೋಡಿ ಬಂದವರ ಮುಖದಲ್ಲಿ ನಗು ಇತ್ತು, ಖುಷಿ ಇತ್ತು, ಎಂಜಾಯ್ ಮಾಡಿದ ತೃಪ್ತಿ ಇತ್ತು. ತಮ್ಮಿಷ್ಟದ ನಟನ ಸಿನಿಮಾ ನೋಡಿದ ಸಂತಸ ಎದ್ದು ಕಾಣಿಸುತ್ತಿತ್ತು.
ಇನ್ನು ಸುದೀಪ್ ಪತ್ನಿ ಪ್ರಿಯಾ ಕೂಡ ಥಿಯೇಟರ್ ಗೆ ಬಂದಿದ್ದರು. ಬೆಳಗ್ಗೆಯೇ ಥಿಯೇಟರ್ ನಲ್ಲಿ ಪೂಜೆ ಮಾಡಿದರು ಮ್ಯಾಕ್ಸ್ ಸಿನಿಮಾದಲ್ಲಿ ಸುದೀಪ್ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೇ ರಾತ್ರಿ ನಡೆಯುವ ಕಥೆ ಇದಾಗಿದೆ. ಸುದೀಪ್ ತಮ್ಮ ನಟನೆಯಿಂದಾನೇ ಸಿನಿಮಾವನ್ನ ಅದ್ಭುತ ಮಾಡಿದ್ದಾರೆ. ಸಿನಿಮಾದ ಬಿಜಿಎಂಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಹಾಟು ಮಾಮ ಸಾಂಗ್ ಅನ್ನಂತು ಗುನುಗುತ್ತಾ ಹೊರಗೆ ಬರುತ್ತಿದ್ದಾರೆ. ಸುದೀಪ್ ಒನ್ ಮ್ಯಾನ್ ರೀತಿ ನಟಿಸಿದ್ದಾರೆ ಎಂದೆಲ್ಲಾ ಅಭಿಮಾನಿಗಳು ಹೊಗಳಿದ್ದಾರೆ.
ಇನ್ನು ಈ ಸಿನಿಮಾವನ್ನು ತಮಿಳಿನ ವಿಜಯ್ ಕಾರ್ತಿಕೇಯನ್ ಆಕ್ಷನ್ ಕಟ್ ಹೇಳಿದ್ದಾರೆ. ಇಂದು ಕನ್ನಡದಲ್ಲಿ ರಿಲೀಸ್ ಆಗಿದ್ದು ಎರಡು ದಿನ ತಡವಾಗಿ ತಮಿಳು ಹಾಗೂ ತೆಲುಗಿನಲ್ಲಿ ಬರಲಿದೆ. ವರ್ಷದ ಕೊನೆಯಲ್ಲಿ ಒಂದೊಳ್ಳೆ ಸಿನಿಮಾ ಇದಾಗಿದೆ.