For the best experience, open
https://m.suddione.com
on your mobile browser.
Advertisement

ಕಿಚ್ಚನ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾದ ಆರ್ಯವರ್ಧನ್ ಗುರೂಜಿ : ಅಂಥದ್ದೇನಾಯ್ತು ಗೊತ್ತಾ..?

04:44 PM Nov 17, 2023 IST | suddionenews
ಕಿಚ್ಚನ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾದ ಆರ್ಯವರ್ಧನ್ ಗುರೂಜಿ   ಅಂಥದ್ದೇನಾಯ್ತು ಗೊತ್ತಾ
Advertisement

Advertisement
Advertisement

ಬೆಂಗಳೂರು: ಕಳೆದ ಬಿಗ್ ಬಾಸ್ ಸೀಸನ್ ನಲ್ಲಿ ಆರ್ಯವರ್ಧನ್ ಗುರೂಜಿ ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಆದರೆ ಗುರೂಜಿ ಮಾತ್ರ ಸಿಕ್ಕಾಪಟ್ಟೆ ನಾಟಕ ಮಾಡುತ್ತಾ ಇದ್ದರು. ಎಲ್ಲವೂ ತಿಳಿದರು ಪೆದ್ದು ಪೆದ್ದು ರೀತಿಯಲ್ಲಿಯೇ ಆಡುತ್ತಿದ್ದರು. ಸೀಸನ್ 10ರ ವಿಚಾರವಾಗಿ ಇದೀಗ ಕಿಚ್ಚನ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Advertisement

Advertisement
Advertisement

ಪ್ರತಿ ವಾರ ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಕಿಚ್ಚನ ಚಪ್ಪಾಳೆ ಸಿಗಲಿದೆ. ಆ ಚಪ್ಪಾಳೆಗಾಗಿ ಮನೆ ಮಂದಿ ಕೂಡ ಕಾಯುತ್ತಾ ಇರುತ್ತಾರೆ. ಇದೇ ಚಪ್ಪಾಳೆಯ ಬಗ್ಗೆ ಆರ್ಯವರ್ಧನ್ ಗುರೂಜಿ ಕೆಟ್ಟದಾಗಿ ಮಾತನಾಡಿದ್ದಾರೆ. ಕಿಚ್ಚನ ಚಪ್ಪಾಳೆ ಯಾರಿಗೂ ಬೆಖಾಗಿರುವುದಿಲ್ಲ ಎಂದೇ ಹೇಳಿದ್ದರು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಸಂಬಂಧ ಸುದೀಪ್ ಅಭಿಮಾನಿಗಳು, ಚಾಮರಾಜಪೇಟೆಯ ಆರ್ಯವರ್ಧನ್ ಕಚೇರಿಗೆ ನುಗ್ಗಿ ಕ್ಷಮೆ ಕೋರುವಂತೆ ಸೂಚಿಸಿದ್ದಾರೆ.

ಸುದೀಪ್ ಅಭಿಮಾನಿಗಳ ಸಂಘದ ಅಧ್ಯಕ್ಷ ನವೀನ್ ಗೌಡ ಹಾಗೂ ಬೆಂಬಲಿಗರು ಆರ್ಯವರ್ಧನ್ ಗುರೂಜಿ ಅವರನ್ನೇ ಪ್ರಶ್ನೆ ಮಾಡಿದ್ದಾರೆ. ಕಿಚ್ಚ ಸುದೀಪ್ ಅವರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದು ಸರಿಯಲ್ಲ. ಲೇವಡಿ ಯಾಕೆ ಮಾತನಾಡುತ್ತಿದ್ದೀರಾ..? ನೇರವಾಗಿ ಸುದೀಪ್ ಅವರ ಮುಂದೆ ಬಂದು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.

ಕಿಚ್ಚನ ಚಪ್ಪಾಳೆ ಅಷ್ಟು ಸುಲಭದಲ್ಲಿ ಸಿಗುವುದಿಲ್ಲ. ಇಡೀ ವಾರವೆಲ್ಲ ನೋಡಿ ಆಟದಲ್ಲಿ, ನಡವಳಿಕೆಯಲ್ಲಿ ಉತ್ತಮ ಎನಿಸಿಕೊಂಡವರ ಪಾಲಿಗೆ ಹಾಗೂ ಇಡೀ ಮನೆಯನ್ನು ನಿಭಾಯಿಸುವಂತವರಿಗೆ ಕಿಚ್ಚನ ಚಪ್ಪಾಳೆ ಸಿಗಲಿದೆ. ಉತ್ತಮಕ್ಕಾಗಿ ಹಂಬಲಿಸುವ ಮನಗಳಿಗಿಂತ ಕಿಚ್ಚನ ಚಪ್ಪಾಳೆಗಾಗಿ ಮನೆ ಮಂದಿ ಕಾಯುತ್ತಾ ಇರುತ್ತಾರೆ.

Advertisement
Tags :
Advertisement