For the best experience, open
https://m.suddione.com
on your mobile browser.
Advertisement

ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಕೆ: ಹಾವೇರಿ ಗ್ರಾಪಂ ಸದಸ್ಯೆಗೆ 7 ವರ್ಷ ಜೈಲು..!

11:30 AM Oct 16, 2023 IST | suddionenews
ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಕೆ  ಹಾವೇರಿ ಗ್ರಾಪಂ ಸದಸ್ಯೆಗೆ 7 ವರ್ಷ ಜೈಲು
Advertisement

Advertisement

ಹಾವೇರಿ : ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿದ ಆರೋಪದ ಮೇಲೆ ಹಾವೇರಿ ಗ್ರಾಮ ಪಂಚಾಯತ್ ಸದಸ್ಯೆಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಮುಕ್ತಬಾಯಿ ಬೀಸೆಗೆ ಏಳು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ಚುನಾವಣೆಗಳಲ್ಲಿ ಮೀಸಲಾತಿ ಕ್ಷೇತ್ರಗಳು ಇರುತ್ತವೆ. ಆ ಮೀಸಲಾತಿಯನ್ನು ಪಡೆಯಲು ಸುಳ್ಳು ಪ್ರಮಾಣ ಪತ್ರ ಸೃಷ್ಟಿಸಿ, ಈಗ ಅಧಿಕಾರವೂ ಇಲ್ಲ, ಆಡಳಿತವೂ ಇಲ್ಲದಂತೆ ಜೈಲು ಸೇರುವಂತೆ ಆಗಿದೆ.

ಜಿಲ್ಲೆಯ ಗುತ್ತಲ ಬಾಯಿ ಗ್ರಾಮ ಪಂಚಾಯತಿಯಲ್ಲಿ ಈ ಘಟನೆ ನಡೆದಿದೆ. ಇದೇ ಗ್ರಾಮ ಪಂಚಾಯತಿ ಸದಸ್ಯೆ ಮುಕ್ತಬಾಯಿ ಬೀಸೆ ಎಂಬಾಕೆ ಹಿಂದೂ ಗೊಂದಳಿ ಸಮುದಾಯದವರಾಗಿದ್ದಾರೆ. ಆದರೆ ಗ್ರಾಮ ಪಂಚಾಯ್ತಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದಂತೆ ಸುಳ್ಳು ಪ್ರಮಾಣ ಪತ್ರ ಮಾಡಿಸಿ, ಸಲ್ಲಿಕೆ ಮಾಡಿದ್ದಾರೆ. ತಹಶಿಲ್ದಾರರಿಗೆ ಈ ಸುಳ್ಳು ಪ್ರಮಾಣ‌ಪತ್ರವನ್ನು ಸಲ್ಲಿಸಿದ್ದರು. ಇದೀಗ ಸತ್ಯಾಂಶ ಬೆಳಕಿಗೆ ಬಂದಿದ್ದು, 7 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.

Advertisement

ಅಷ್ಟೇ ಅಲ್ಲ ಸುಳ್ಳು ಪ್ರಮಾಣ ಪತ್ರ ನೀಡಿದವರಿಗೂ ಈ ವೇಳೆ ಶಿಕ್ಷೆ ಹಾಗೂ ವಿಧಿಸಲಾಗಿದೆ. ಮಾರುತಿ ಕಿಳ್ಳಿಕ್ಯಾತರ್ ಸುಳ್ಳು ಜಾತಿ ಪ್ರಮಾಣ ಸೃಷ್ಟಿಸಲು ಸಹಾಯ ಮಾಡಿದ್ದಾರೆ. ಹೀಗಾಗಿ ಮಾರುತಿಗೂ ಏಳು ವರ್ಷಗಳ ಶಿಕ್ಷೆಯ ಜೊತೆಗೆ 37 ಸಾವಿರ ದಂಡ ವಿಧಿಸಲಾಗಿದೆ. ಮೀಸಲಾತಿಗೋಸ್ಕರ ಈ ರೀತಿ ಸುಳ್ಳು ಜಾತಿ ಪ್ರಮಾಣ ಪತ್ರ ಸೃಷ್ಟಿಸಿ, ಮೋಸ ಮಾಡಿರುವುದು ಗೊತ್ಗಾದ ಬಳಿಕ ಶಿಕ್ಷೆ ವಿಧಿಸಲಾಗಿದೆ. ಈ ನಕಲಿ ಪತ್ರದಿಂದಾಗಿ, ನಿಜವಾದ ಮೀಸಲಾತಿ ಇರುವವರಿಗೆ ಸಿಗಬೇಕಾದ ಸೌಕರ್ಯ ಪಡೆದಿದ್ದಾರೆ.

Tags :
Advertisement