ದರ್ಶನ್ ಪ್ರಕರಣಕ್ಕೆ ಬಂದ್ರು ಸ್ಟ್ರಾಂಗ್ ಲಾಯರ್ : ಸೆಲೆಬ್ರೆಟಿಗಳ ಫಸ್ಟ್ ಚಾಯ್ಸ್ ವಕೀಲರು ಇವರು..!
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತಗಲಾಕಿಕೊಂಡು ಪೊಲೀಸ್ ಕಸ್ಟಡಿಯಲ್ಲಿದ್ದಾರೆ ನಟ ದರ್ಶನ್. ನಾಳೆವರೆಗೂ ಕಸ್ಟಡಿ ವಿಸ್ತರಣೆಯಾಗಿದೆ. ಶನಿವಾರ ಮತ್ತೆ ದರ್ಶನ್ ಅಂಡ್ ಗ್ಯಾಂಗ್ ಅನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸುತ್ತಾರೆ. ಸದ್ಯಕ್ಕೆ ದರ್ಶನ್ ಅವರ ಕೇಸನ್ನು ಅನಿಲ್ ಬಾಬು ಹಾಗೂ ರಂಗನಾಥ್ ರೆಡ್ಡಿ ಎಂಬುವವರು ತೆಗೆದುಕಿಂಡಿದ್ದಾರೆ. ಕೋರ್ಟ್ ನಲ್ಲಿ ದರ್ಶನ್ ಪರವಾಗಿ ವಾದ ಮಂಡಿಸುತ್ತಿದ್ದಾರೆ. ಆದರೆ ಈಗ ದರ್ಶನ್ ಅವರ ಕೇಸಿಗೆ ಒ್ಬರು ಸ್ಟ್ರಾಂಗ್ ಲಾಯರ್ ಎಂಟ್ರಿಯಾಗುತ್ತಿದ್ದಾರೆ.
ದರ್ಶನ್ ಅವರಿಗೆ ಕಸ್ಟಡಿಯನ್ನು ವಿಸ್ತರಣೆ ಮಾಡುತ್ತಲೆ ಇದ್ದಾರೆ. ಹೀಗಾಗಿ ಅವರ ಕೇಸಿಗೆ ಕ್ರಿಮಿನಲ್ ಲಾಯರ್ ಸಿ.ವಿ. ನಾಗೇಶ್ ಎಂಟ್ರಿ ಕೊಟ್ಟಿದ್ದು, ವಾದ ಮಂಡಿಸಲಿದ್ದಾರೆ ಎನ್ನಲಾಗಿದೆ. ನಾಳೆಗೆ ದರ್ಶನ ಕಸ್ಟಡಿ ಮುಗಿಯಲಿದ್ದು, ನಾಗೇಶ್ ಕೇಸ್ ಕಂಟಿನ್ಯೂ ಮಾಡಲಿದ್ದಾರೆ.
ಮಾಹಿತಿಯ ಪ್ರಕಾರ ಅನಿಲ್ ಹಾಗೂ ರಂಗನಾಥ್ ಮ್ಯಾಜಿಸ್ಟ್ರೇಟ್ ನಲ್ಲಿ ವಾದ ಮಂಡಿಸಿದರೆ, ನಾಗೇಶ್ ಹೈಕೋರ್ಟ್ ನಲ್ಲಿ ವಾದ ಮಾಡುವ ಸಾಧ್ಯತೆ ಇದೆ. ಖ್ಯಾತ ವಕೀಲರಾದ ನಾಗೇಶ್ ಈಗಾಗಲೇ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ, ದರ್ಶನ್ ಬಳಿಮಾಹಿತಿ ಪಡರದಿದ್ದಾರೆ. ಜಾಮೀನು ಅರ್ಜಿ ಹಾಕುವುದಕ್ಕೂ ತಯಾರಿ ನಡೆಯುತ್ತಿದೆ ಎನ್ನಲಾಗಿದೆ.
ವಕೀಲರಾದ ನಾಗೇಶ್ ದಶಕಗಳಿಂದಾನು ಹೈಕೋರ್ಟ್ ನಲ್ಲಿ ಕ್ರಿಮಿನಲ್ ಮೊಕದ್ದಮೆ ನಡೆಸುತ್ತಾ ಬಂದಿದ್ದಾರೆ. ಇವರು ಮಾಜಿ ಸಚುವ ಹೆಚ್.ಡಿ.ರೇವಣ್ಣ, ಬಿಎಸ್ ಯಡಿಯೂರಪ್ಪ, ನಲಪ್ಪಾಡ್ ರಂತಹ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಟ್ಟಿದ್ದಾರೆ. ರೇವಣ್ಣ ಅವರಿಗೂ ಜಾಮೀನು ಸಿಗುವುದರಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ದರ್ಶನ್ ಪ್ರಕರಣದಲ್ಲಿ ಅವರ ಪತ್ನಿ ವಿಜಯಲಕ್ಷ್ಮೀ, ಲಾಯರ್ ನಾಗೇಶ್ ಅವರನ್ನು ಸಂಪರ್ಕಿಸಿ, ಕೇಸ್ ಒಪ್ಪಿಸಿದ್ದಾರೆ ಎನ್ನಲಾಗಿದೆ.