Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

SSLC ಫಲಿತಾಂಶ ಪ್ರಕಟ: ಉಡುಪಿ ಫಸ್ಟ್.. ಯಾದಗಿರಿ ಲಾಸ್ಟ್

11:07 AM May 09, 2024 IST | suddionenews
Advertisement

 

Advertisement

 

ಇಂದು ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷಾ ಮಂಡಳಿಯಲ್ಲಿ ಸುದ್ದಿಗೋಷ್ಟಿ ಮೂಲಕ ಫಲಿತಾಂಶ ಪ್ರಕಟ ಮಾಡಲಾಗಿದೆ. ರಾಜ್ಯಾದ್ಯಂತ 76.91 ರಷ್ಟು ಫಲಿತಾಂಶ ಬಂದಿದೆ. ಮಂಡಳಿಯ ವೆಬ್ಸೈಟ್ ಮೂಲಕವೂ ಫಲಿತಾಂಶವನ್ನು ನೋಡಬಹುದು.

Advertisement

ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಿದ್ದು ಇದರಲ್ಲಿ ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದು, ದಕ್ಷಿಣ ಕನ್ನಡಕ್ಕೆ ಎರಡನೇ ಸ್ಥಾನ ಬಂದಿದೆ. ಯಾದಗಿರಿ ಜಿಲ್ಲೆಗೆ ಕೊನೆಯ ಸ್ಥಾನ ಸಿಕ್ಕಿದೆ. ಈ ಬಾರಿಯೂ ನಿರೀಕ್ಷೆಯಂತೆ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

 

ಬಾಗಲಕೋಟೆಯ ಅಂಕಿತ ಪ್ರಥಮ ಸ್ಥಾನ 625 ಅಂಕಕ್ಕೆ 625 ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಏಕೈಕ ವಿದ್ಯಾರ್ಥಿನಿ.

ಟಾಪರ್ಸ್ ಸ್ಥಾನದಲ್ಲಿ: ಮೇದಾ. ಪಿ ಶೆಟ್ಟಿ ಬೆಂಗಳೂರು, ಹರ್ಷಿತಾ ಡಿ.ಎಂ. ಮಧುಗಿರಿ ಈ ಇಬ್ಬರು ವಿದ್ಯಾರ್ಧಿನಿಯರು 624 ಅಂಕಗಳನ್ನು ಪಡೆದಿದ್ದಾರೆ.

Advertisement
Tags :
bengaluruchitradurgafirstLastSSLC resultSSLC ಫಲಿತಾಂಶsuddionesuddione newsudupiyadagiriಉಡುಪಿಚಿತ್ರದುರ್ಗಪ್ರಕಟಬೆಂಗಳೂರುಯಾದಗಿರಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article