For the best experience, open
https://m.suddione.com
on your mobile browser.
Advertisement

ಬೌದ್ಧ ಧರ್ಮದಂತೆ ಇಂದು ಶ್ರೀನಿವಾಸ್ ಪ್ರಸಾದ್ ಅಂತ್ಯಕ್ರಿಯೆ : ಚಾಮರಾಜನಗರ ಜಿಲ್ಲೆಯಾದ್ಯಂತ ಶಾಲೆಗೆ ರಜೆ..!

10:13 AM Apr 30, 2024 IST | suddionenews
ಬೌದ್ಧ ಧರ್ಮದಂತೆ ಇಂದು ಶ್ರೀನಿವಾಸ್ ಪ್ರಸಾದ್ ಅಂತ್ಯಕ್ರಿಯೆ   ಚಾಮರಾಜನಗರ ಜಿಲ್ಲೆಯಾದ್ಯಂತ ಶಾಲೆಗೆ ರಜೆ
Advertisement

ಚಾಮರಾಜನಗರ: ಹೃದಯಾಘಾತದಿಂದ ನಿನ್ನೆ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನರಾಗಿದ್ದಾರೆ. ದಲಿತ ಸೂರ್ಯ ಎಂದೇ ಖ್ಯಾತರಾಗಿದ್ದವರು ಶ್ರೀನಿವಾಸ್ ಪ್ರಸಾದ್. ಇವರ ದಿಢೀರ್ ನಿಧನ ರಾಜಕೀಯ ವಲಯಕ್ಕೆ ದಿಗ್ಬ್ರಮೆಗೊಳಿಸಿದೆ. ಯಾಕಂದ್ರೆ ಇತ್ತಿಚೆಗಷ್ಟೇ ಲೋಕಸಭಾ ಚುನಾವಣೆಗೂ ಮುನ್ನ ಬೆಂಬಲ ನೀಡಿ ಎಂದು ಸಿಎಂ ಸಿದ್ದರಾಮಯ್ಯ ಅವರು ಶ್ರೀನಿವಾಸ್ ಪ್ರಸಾದ್ ಅವರನ್ನು ಮಾತನಾಡಿಸಿಕೊಂಡು ಬಂದಿದ್ದರು. ಮಗನ ರಾಜಕೀಯ ಭವಿಷ್ಯದ ಭರವಸೆ ನೀಡಿದ್ದರು. ಆದರೆ ಇದ್ದಕ್ಕಿದ್ದ ಹಾಗೇ ಶ್ರೀನಿವಾಸ್ ಪ್ರಸಾದ್ ಎಲ್ಲರನ್ನು ಬಿಟ್ಟು ದೂರ ಹೋದರೆ ಯಾರಿಗೆ ತಾನೇ ನಂಬಲು ಸಾಧ್ಯ, ಅರಗಿಸಿಕೊಳ್ಳಲು ಸಾಧ್ಯ.

Advertisement

ಶ್ರೀನಿವಾಸ್ ಪ್ರಸಾದ್ ದಲಿತರ ಧೀಮಂತ ನಾಯಕರಾಗಿದ್ದವರು. ಚಾಮರಾಜನಗರದ ಸಂಸದರಾಗಿ, ನಂಜನಗೂಡಿನ ಶಾಸಕರಾಗಿ ಸೇವೆ ಸಲ್ಲಿಸಿದವರು. ಆದರೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು ಅವರ ಅಂತ್ಯಕ್ರಿಯೆ ಮೈಸೂರಿನಲ್ಲಿ ನಡೆಯಲಿದೆ. ಬೌದ್ಧ ಧರ್ಮದ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಯಲಿದೆ. ಮಾನಂದವಾಡಿಯಲ್ಲಿರುವ ಟ್ರಸ್ಟ್ ಆವರಣದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಶ್ರೀನಿವಾಸ್ ನಿಧನದ ಹಿನ್ನೆಲೆ ಮೈಸೂರು, ಚಾಮರಾಜನಗರ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

Advertisement

ಅಂತ್ಯಕ್ರಿಯೆಗೂ ಮುನ್ನ ಮೈಸೂರಿನ ಅಶೋಕಪುರಂನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅಂತಿಮ ದರ್ಶನ ಪಡೆದಿದ್ದಾರೆ. ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಒಬ್ಬ ಸ್ನೇಹಿತನನ್ನು ಕಳೆದುಕೊಂಡು ದುಃಖವಾಗಿದೆ ಎಂದರು. ಯಾಕಂದ್ರೆ ಬಹಳ ವರ್ಷಗಳ ಸ್ನೇಹಿತರು ಸಿಎಂ ಸಿದ್ದರಾಮಯ್ಯ ಹಾಗೂ ಶ್ರೀನಿವಾಸ್ ಪ್ರಸಾದ್. ಆದರೆ ಯಾವುದೋ ಕಾರಣಕ್ಕೋ ದೂರವಿದ್ದರು. ಇತ್ತಿಚೆಗಷ್ಟೇ ಮುನಿಸು ಮರೆತು ಮಾತನಾಡಿದ್ದರು. ಆದರೆ ಇಂದು ಸ್ನೇಹಿತನೇ ಇಲ್ಲ. ಇದು ಸಿಎಂ ಸಿದ್ದರಾಮಯ್ಯ ಅವರಿಗೆ ಅತೀವ ದುಃಖ ತಂದಿದೆ.

Tags :
Advertisement