ನೈರುತ್ಯ ಪದವೀಧರ ಚುನಾವಣೆ : ಬಿಜೆಪಿ ವಿರುದ್ಧ ರಘುಪತಿ ಭಟ್ ಬಂಡಾಯ, ಪಕ್ಷೇತರ ಸ್ಪರ್ಧೆ
ಮೈಸೂರು: ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಳಬರಿಗೆ, ಒಂದಷ್ಡು ವಿವಾದಗಳಿದ್ದವರಿಗೆ ಟಿಕೆಟ್ ನಿರಾಕರಣೆ ಮಾಡಿತ್ತು. ಹೊಸ ಮುಖಗಳಿಗೆ ಮಣೆ ಹಾಕಲು ಹೋಗಿ, ಹಿರಿಯ ತಲೆಗಳು ಬಂಡಾಯವೆದ್ದಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದೆ ಈಶ್ವರಪ್ಪ ಅವರು ಬಂಡಾಯವೆದ್ದು, ಬಿಜೆಪಿ ವಿರುದ್ಧವೇ ಸ್ಪರ್ಧೆ ನಡೆಸಿದ್ದರು. ಇದೀಗ ರಘುಪತಿ ಭಟ್ ಸಮಯ.
ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ರಾಜಕೀಯ ಪಕ್ಷಗಳು ಸಜ್ಜಾಗಿವೆ. ಬಿಜೆಪಿಯಲ್ಲಿ ನೈರುತ್ಯ ಪದವಿಧರ ಕ್ಷೇತ್ರದಿಂದ ಸ್ಪರ್ಧಿಸುವ ಹೆಬ್ಬಯಕೆಯನ್ನು ಮಾಜಿ ಶಾಸಕ ರಘುಪತಿ ಭಟ್ ಇಟ್ಟುಕೊಂಡಿದ್ದರು. ಟಿಕೆಟ್ ಸಿಗುವ ನಿರೀಕ್ಷೆಯೂ ಇತ್ತು. ಆದರೆ ಇದೀಗ ಅವರ ಲೆಕ್ಕಚಾರ ಉಲ್ಟಾ ಆಗಿದೆ. ಬಿಜೆಪಿ ಬೇರೆಯವರಿಗೆ ಮಣೆ ಹಾಕಿದೆ. ಧನಂಜಯ ಅವರಿಗೆ ಟಿಕೆಟ್ ಕೊಟ್ಟಿದೆ. ಇದರಿಂದ ರಘುಪತಿ ಭಟ್ ಕೋಪಗೊಂಡಿದ್ದು, ಬೇಸರ ಹೊರ ಹಾಕಿದ್ದಾರೆ.
ನನಗೆ ಟಿಕೆಟ್ ವಂಚಿಸಿದ್ದು ಭೌಗೋಳಿಕ ಅನ್ಯಾಯ ಮತ್ತು ಕಾರ್ಯಕರ್ತರಿಗೆ ಆಗಿರುವ ದ್ರೋಹ. ತನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿದರು ಸ್ಪರ್ಧೆಯಿಂದ ಸರಿಯುವುದಿಲ್ಲ. ಯಾರಾದರೂ ಹಿರಿಯ ನಾಯಕರಿಗೆ ಕೊಟ್ಟರು ನನಗೆ ಬೇಸರವಿಲ್ಲ ಎಂದಿದ್ದಾರೆ.
ಬಾಲ್ಯದಿಂದ ಸ್ವಯಂ ಸೇವಕ, ಕಾರ್ಯಕರ್ತ. ಬಿಜೆಒಇಯ ಜಿಲ್ಲಾಧ್ಯಕ್ಷನಾಗಿದ್ದೆ. ಯಾರೇ ಅಭ್ಯರ್ಥಿಯಾಗಬೇಕು ಅಂದ್ರೆ ಬೂತ್ ಮಟ್ಟದಿಂದ ಮಾಹಿತಿ ಸಂಗ್ರಹ ಮಾಡಿ, ಆಯ್ಕೆ ಮಾಡುತ್ತಿದ್ದರು. ಆದರೆ ಇತ್ತಿಚೆಗೆ ಆ ರೀತಿ ಇಲ್ಲ. ಕೇಂದ್ರದಿಂದ ಪ್ರಭಾವ ಇರುವವರಿಗೆ ಟಿಕೆಟ್ ಸಿಕ್ತಾ ಇದೆ. ನಾನೀಗ ನಿಲ್ತಾ ಇರುವುದು ನಾನೊಬ್ಬ ಸಕ್ರಿಯ ರಾಜಕಾರಣಿ. ಶಾಸಕನಾಗಿದ್ದಾಗ ಕುಟುಂಬವನ್ನು ನೋಡದೆ ಕೆಲಸ ಮಾಡಿದ್ದೀನಿ. ಹೀಗಾಗಿ ನಾನು ನಿಲ್ಲುತ್ತಿದ್ದೇನೆ ಎಂದಿದ್ದಾರೆ. ಈ ಮೂಲಕ ಪದವೀಧರ ಕ್ಷೇತ್ರದ ಚುನಾವಣೆಯಿಂದಾನು ಬಿಜೆಪಿಗೆ ಬಂಡಾಯದ ಬಿಸಿ ತಟ್ಟಲಿದೆ.