For the best experience, open
https://m.suddione.com
on your mobile browser.
Advertisement

ಮಗನ ಬರ್ತ್ ಡೇ.. ಜೈಲಿಂದ ಜಾಮೀನು ಸಿಕ್ಕ ಖುಷಿ.. ನೇರ ವಿಜಯಲಕ್ಷ್ಮೀ ಮನೆಗೆ ಬಂದ ದರ್ಶನ್..!

09:24 AM Oct 31, 2024 IST | suddionenews
ಮಗನ ಬರ್ತ್ ಡೇ   ಜೈಲಿಂದ ಜಾಮೀನು ಸಿಕ್ಕ ಖುಷಿ   ನೇರ ವಿಜಯಲಕ್ಷ್ಮೀ ಮನೆಗೆ ಬಂದ ದರ್ಶನ್
Advertisement

ರೇಣುಕಾಸ್ವಾಮಿ ಕೊಲೆ‌ ಪ್ರಕರಣದಲ್ಲಿ ಐದು ತಿಂಗಳಿನಿಂದ ಜೈಲಿನಲ್ಲೇ ಇದ್ದ ದರ್ಶನ್ ಗೆ ನಿನ್ನೆ ಮಧ್ಯಂತರ ಜಾಮೀನು ಸಿಕ್ಕಿದೆ. ಇಂದು ಮಗ ವಿನೀಶ್ ಬರ್ತ್ ಡೇ ಕೂಡ. ದೀಪಾವಳಿಯಲ್ಲಿ ದರ್ಶನ್ ಬದುಕಲ್ಲಿ ಹೊಸ ಬೆಳಕು ಮೂಡಿದಂತಾಗಿದೆ. ನಿನ್ನೆ ಸಂಜೆ ಮನೆಗೆ ಹೊರಟ ದರ್ಶನ್ ರಾತ್ರಿ 11.30 ಅಷ್ಡರಲ್ಲಿ ಬೆಂಗಳೂರು ತಲುಪಿದ್ರು. ನಟ ಧನ್ವೀರ್ ಅವರೇ ಕಾರು ಡ್ರೈವ್ ಮಾಡಿಕೊಂಡು ದರ್ಶನ್ ಅವರನ್ನು ಕರೆದುಕೊಂಡು ಬಂದರು. ಬಳ್ಳಾರಿಯಿಂದ ಬರುವಾಗ ಫ್ಯಾನ್ಸ್ ಅಂತು ದರ್ಶನ್ ಇರುವ ಕಾರನ್ನು ಫಾಲೋ ಮಾಡಿಕೊಂಡೆ ಬಂದರು. ಅಭಿಮಾನಿಗಳನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸ ಪಟ್ರು.

Advertisement

ಮಗ ವಿನೀಶ್ ಅವರ ಹುಟ್ಟುಹಬ್ಬ. ಅಪ್ಪ ಮನೆಗೆ ಬರ್ತಾರೆ ಎಂದು ತಿಳಿದ ಕೂಡಲೇ ವಿನೀಶ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ದರ್ಶನ್ ಆರ್ ಆರ್ ನಗರ ಮನೆಗೆ ಹೋಗುತ್ತಾರೆಂದು ಮನೆಯ ಬಳಿ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿತ್ತು. ಆದರೆ ದರ್ಶನ್ ನೇರವಾಗಿ ತಮ್ಮ ಪತ್ನಿ ವಿಜಯಲಕ್ಷ್ಮೀ ವಾಸವಿದ್ದ ಹೊಸಕೆರೆಹಳ್ಳಿ ಅಪಾರ್ಟ್ಮೆಂಟ್ ಗೆ ಹೋದರು. ಇಂದು ದರ್ಶನ್ ಟ್ರೀಟ್ಮೆಂಟ್ ಗಾಗಿ ಆಸ್ಪತ್ರೆಗೆ ದಾಖಲಾಗಬೇಕಾಗಿದೆ.

Advertisement

ಕೋರ್ಟ್ ಷರತ್ತು ಬದ್ಧ ಮಧ್ಯಂತರ ಜಾಮೀನು ನೀಡಿದೆ. ಆರು ವಾರಗಳ ನೀಡಿರುವ ಸಮಯವನ್ನು ಸಂಪೂರ್ಣವಾಗಿ ಚಿಕಿತ್ಸೆಗೆಂದು ಬಳಸಿಕೊಳ್ಳಬೇಕು ಎಂದಿದೆ. ಹೀಗಾಗಿ ಇಂದಿನಿಂದ ಬೆನ್ನು ನೋವಿಗೆ ಚಿಕಿತ್ಸೆ ಪಡೆಯಬೇಕಿದೆ. ಈ ಮೊದಲೆಲ್ಲಾ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಸಲ ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆಂಬ ಮಾಹಿತಿಯನ್ನು ಬಿಟ್ಟು ಕೊಟ್ಟಿಲ್ಲ. ಆದರೆ ಮೈಸೂರಿನಲ್ಲೇ‌ ಚಿಕಿತ್ಸೆ ಪಡೆಯುತ್ತಾರೆ ಎಂಬ ಮಾಹಿತಿ ಇದೆ.

Advertisement

Advertisement
Advertisement
Tags :
Advertisement