Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಲೋಕಸಭಾ ಚುನಾವಣಾ ಕಣದಲ್ಲಿ ಕಾಡುಗಳ್ಳ ವೀರಪ್ಪನ್ ಪುತ್ರಿ...!

01:28 PM Mar 24, 2024 IST | suddionenews
Advertisement

 

Advertisement

ಸುದ್ದಿಒನ್ : ಲೋಕಸಭಾ ಚುನಾವಣಾ ಸಮೀಪಿಸುತ್ತಿದೆ.  ಸಾಮಾನ್ಯ ವ್ಯಕ್ತಿಗಳಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಕುಖ್ಯಾತ ದಂತಚೋರ ಕಾಡುಗಳ್ಳ ವೀರಪ್ಪನ್ (ಕೂಸೆ ಮುನಿಸ್ವಾಮಿ ವೀರಪ್ಪನ್ ಗೌಂಡರ್) ಪುತ್ರಿ ಕೂಡ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

ವೀರಪ್ಪನ್ ಪುತ್ರಿ ವಿದ್ಯಾ ವೀರಪ್ಪನ್ ಅವರನ್ನು ಕೃಷ್ಣಗಿರಿ ಕ್ಷೇತ್ರದ ಅಭ್ಯರ್ಥಿ ಎಂದು ಎನ್ ಟಿಕೆ ಪಕ್ಷದ ಅಧ್ಯಕ್ಷ ಸೀಮಾನ್ ಘೋಷಿಸಿದ್ದಾರೆ. ವೀರಪ್ಪನ್ ಪುತ್ರಿ ವಿದ್ಯಾ ವೀರಪ್ಪನ್ ಕೃಷ್ಣಗಿರಿಯಲ್ಲಿ ಭಾರಿ ಬಹುಮತದಿಂದ ಗೆದ್ದು ಜನಸೇವೆ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಕಳೆದ ಸಂಸತ್ ಚುನಾವಣೆಯಲ್ಲಿ ಡಿಎಂಕೆಗೆ ಬೆಂಬಲ ನೀಡಿದ್ದರು.
ಧರ್ಮಪುರಿ ಲೋಕಸಭಾ ಚುನಾವಣೆಯಲ್ಲಿ ಡಿಎಂಕೆ ಪರವಾಗಿ ಪ್ರಚಾರ ಮಾಡಿದ್ದರು.

ಆದರೆ, ನಟ್ಟಮೇಡು ಗ್ರಾಮದಲ್ಲಿ ಸ್ಥಳೀಯರ ವಿರೋಧದಿಂದ ಮುತ್ತುಲಕ್ಷ್ಮಿ ಪ್ರಚಾರ ನಿಲ್ಲಿಸಿದರು. ಒಂದು ಹಂತದಲ್ಲಿ ಮುತ್ತುಲಕ್ಷ್ಮಿ ರಾಜಕೀಯ ಪಕ್ಷ ಸ್ಥಾಪಿಸುವ ಪ್ರಯತ್ನ ಮಾಡಿದ್ದರು. ಆದರೆ ಅವು ವ್ಯರ್ಥವಾದವು.

ಮುತ್ತುಲಕ್ಷ್ಮಿ ರಾಜಕೀಯಕ್ಕೆ ಬರದಿದ್ದರೂ ಆಕೆಯ ಮಗಳು ವಿದ್ಯಾ ವೀರಪ್ಪನ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು ಇದೀಗ ರಾಜಕೀಯ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.

Advertisement
Tags :
arena...!bengaluruchitradurgaDaughterLok Sabha electionSmugglersuddionesuddione newsVeerappanಕಣಕಾಡುಗಳ್ಳ ವೀರಪ್ಪನ್ಚಿತ್ರದುರ್ಗಪುತ್ರಿಬೆಂಗಳೂರುಲೋಕಸಭಾ ಚುನಾವಣೆಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article