For the best experience, open
https://m.suddione.com
on your mobile browser.
Advertisement

ನಕ್ಸಲೈಟ್ ನಿಂದ ಸಚಿವ ಸ್ಥಾನದವರೆಗೂ ಸೀತಕ್ಕ ನಡೆದು ಬಂದ ದಾರಿ

06:33 AM Dec 08, 2023 IST | suddionenews
ನಕ್ಸಲೈಟ್ ನಿಂದ ಸಚಿವ ಸ್ಥಾನದವರೆಗೂ ಸೀತಕ್ಕ ನಡೆದು ಬಂದ ದಾರಿ
Advertisement

Advertisement
Advertisement

ಸುದ್ದಿಒನ್, ಹೈದರಾಬಾದ್ : ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿದೆ. ರೇವಂತ್ ರೆಡ್ಡಿ ಜೊತೆಗೆ 11 ಸಚಿವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ, ಈ 11 ಜನರಲ್ಲಿ ಸೀತಕ್ಕ ಮಾತ್ರ ತುಂಬಾ ವಿಶೇಷ. ಹಾಲಿ ಸಚಿವರ ಪೈಕಿ ಮಲ್ಲು ಭಟ್ಟಿವಿಕ್ರ ಮಾರ್ಕ, ಪೊನ್ನಂ ಪ್ರಭಾಕರ್ ಜತೆಗೆ ಸೀತಕ್ಕ ಮೊದಲ ಬಾರಿಗೆ ಸಚಿವರಾಗಿದ್ದಾರೆ.

Advertisement

ಆದರೆ, ನಕ್ಸಲೈಟ್‌ ನಿಂದ ಸಚಿವ ಸ್ಥಾನದವರೆಗೂ ಸೀತಕ್ಕ ನಡೆದು ಬಂದ ದಾರಿ ಎಲ್ಲರಿಗಿಂತಲೂ ಭಿನ್ನ. ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಮುಲುಗು ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ 33,700 ಬಹುಮತದೊಂದಿಗೆ ಗೆದ್ದು ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವುದೆಂದರೆ ಸಾಮಾನ್ಯ ವಿಷಯವಲ್ಲ.

Advertisement
Advertisement

ಸಿಎಂ ರೇವಂತ್ ರೆಡ್ಡಿ ಅವರು ಪ್ರಮಾಣ ವಚನ ಸ್ವೀಕರಿಸಿದಾಗ ಜನರು ಸಂಭ್ರಮದಿಂದ ಚಪ್ಪಾಳೆ ತಟ್ಟಿ ಬೆಂಬಲಿಸಿದ್ದಕ್ಕಿಂತಲೂ ಹೆಚ್ಚಾಗಿ ಸೀತಕ್ಕ ಪ್ರಮಾಣ ವಚನ ಸ್ವೀಕರಿಸಿದಾಗ ಜನರಿಂದ ಬಾರೀ ಪ್ರತಿಕ್ರಿಯೆ ವ್ಯಕ್ತವಾಯಿತೆಂದರೆ ಜನರಲ್ಲಿ ಆಕೆಗಿರುವ ಕ್ರೇಜ್ ಅಷ್ಟಿಷ್ಟಲ್ಲ.  ಕಾಡಿನಿಂದ ಜನರ ಮಧ್ಯೆ ಬಂದು ನಿಂತು ವಿಧಾನಸಭೆಗೆ ಮೂರು ಬಾರಿ ಆಯ್ಕೆಯಾಗುವುದೆಂದರೆ ಸುಮ್ಮನೇ ಅಲ್ಲ.
ಸಾಕಷ್ಟು ನೋವು ಮತ್ತು ಏರಿಳಿತಗಳನ್ನು ಕಂಡಿದ್ದಾರೆ.

ಧನಸಾರಿ ಅನಸೂಯ ಅಲಿಯಾಸ್ ಸೀತಕ್ಕ ನಡೆದು ಬಂದ ದಾರಿ : ಧನಸಾರಿ ಅನಸೂಯಾ ಜುಲೈ 9, 1971 ರಂದು ಮುಲುಗು ಜಿಲ್ಲೆಯ ಜಗ್ಗಣ್ಣಪೇಟೆ ಗ್ರಾಮದ ಬುಡಕಟ್ಟು ಕೋಯಾ ಬುಡಕಟ್ಟು ಕುಟುಂಬದಲ್ಲಿ ಜನಿಸಿದರು. ಹತ್ತನೇ ತರಗತಿ ಓದುತ್ತಿದ್ದಾಗ ಸೀತಕ್ಕ ಕಾಡಿನ ಹಾದಿ ಹಿಡಿದಳು.  ಅರಾಜಕತೆ, ಆರ್ಥಿಕ ಶೋಷಣೆ ಮತ್ತು ಜಾತಿ ತಾರತಮ್ಯದಿಂದ ನರಕವನ್ನು ನೋಡುತ್ತಿದ್ದ ಸಮಯದಲ್ಲಿ, ಫೂಲನ್ ದೇವಿ ಅವರ ಬರಹಗಳು ಆಕೆಯ ಮೇಲೆ ಬಹಳ ಪ್ರಭಾವ ಬೀರಿದವು. 

ಇವೆಲ್ಲವನ್ನೂ ಎದುರಿಸಲು ಕಾಡೇ ಸರಿ,  ಬಂದೂಕಿನ ಗುಂಡುಗಳಿಂದಲೇ ಅರಾಜಕತಾವಾದಿಗಳ ಆಟವನ್ನು ಮಟ್ಟ ಹಾಕಬಹುದೆಂದು ನಂಬಿದ್ದಳು.. 1988ರಲ್ಲಿ ಅನಸೂಯ ನಕ್ಸಲ್ ಪಕ್ಷ ಸೇರಿ, ಅನಸೂಯ ಸೀತಕ್ಕಳಾಗಿ, ಮಹಿಳಾ ನಕ್ಸಲೈಟ್ ಆದರು.

ವಾರಂಗಲ್ ಜಿಲ್ಲೆಯ ಜನಶಕ್ತಿ ಸಶಸ್ತ್ರ ಹೋರಾಟದಲ್ಲಿ ನಾಯಕಿಯಾಗಿ ಪ್ರಮುಖ ಪಾತ್ರ ವಹಿಸಿದರು. ಸೀತಕ್ಕ ಸುಮಾರು 15 ವರ್ಷಗಳ ಕಾಲ ಕಾಡಿನಲ್ಲಿ ಮಹಿಳಾ ನಕ್ಸಲೈಟ್‌ ಆಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು. ಆ ಹಂತದಲ್ಲಿ ಸೀತಕ್ಕ ನಕ್ಸಲ್ ನಾಯಕನನ್ನು ಮದುವೆಯಾದರು.
ಅವರಿಗೆ ಒಬ್ಬ ಮಗನೂ ಇದ್ದಾನೆ. ಆ ನಂತರ ಟಿಡಿಪಿ ಆಡಳಿತದಲ್ಲಿ ನಂದಮೂರಿ ತಾರಕ ರಾಮರಾವ್ (NTR) ನೀಡಿದ ಕರೆಯಿಂದ ನಕ್ಸಲೀಯರು ಕಾಡಿನ ಹಾದಿ ತೊರೆದು ಜನರೊಂದಿಗೆ ಬೆರೆತು ಹೋದರು.

ಅನ್ಯಾಯದ ವಿರುದ್ಧ ಹೋರಾಡಲು ಕಾನೂನನ್ನು ಕರಗತ ಮಾಡಿಕೊಳ್ಳಬೇಕು ಎಂದು ಸೀತಕ್ಕ ಯೋಚಿಸಿದರು. ಅದಕ್ಕೆ 2001ರಲ್ಲಿ ಸೀತಕ್ಕ ಎಲ್ ಎಲ್ ಬಿ ಪದವಿ ಪಡೆದರು. ನಂತರ ಸಾರ್ವಜನಿಕ ನೀತಿ ಮತ್ತು ಆಡಳಿತದಲ್ಲಿ ಸೀತಕ್ಕನ ಆಸಕ್ತಿ ಹೆಚ್ಚಾಯಿತು.  ಸಾಮಾಜಿಕ ಸೇವೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ ಅವರು ಜನಪ್ರಿಯ ನಾಯಕಿಯಾಗಿ ಬೆಳೆದರು. ಆಕೆ ಮಾಡುತ್ತಿರುವ ಕೆಲಸ ಹಾಗೂ ಜನರಲ್ಲಿ ಆಕೆಗಿರುವ ಪ್ರಭಾವವನ್ನು ಕಂಡು ಅಂದಿನ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಸೀತಕ್ಕ ಅವರನ್ನು ಟಿಡಿಪಿಗೆ ಆಹ್ವಾನಿಸಿದ್ದರು.

2004ರ ಚುನಾವಣೆಯಲ್ಲೂ ಮುಳುಗು ಕ್ಷೇತ್ರದಿಂದ ಟಿಕೆಟ್ ನೀಡಲಾಗಿತ್ತು. ಪ್ರಥಮ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದ ಸೀತಕ್ಕ ಕಾಂಗ್ರೆಸ್ ಅಭ್ಯರ್ಥಿ ಪೊದೆಂ ವೀರಯ್ಯ ವಿರುದ್ಧ ಸೋಲು ಕಂಡಿದ್ದರು. ಆದರೂ ನಿರಾಶರಾಗದೆ ಮತ್ತೆ 2009ರ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಅದೇ  ಮುಳಗು ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧಿಸಿ ಪೊದೆಂ ವೀರಯ್ಯ ವಿರುದ್ಧ ಗೆದ್ದು ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು.

ತೆಲಂಗಾಣ ರಾಜ್ಯ ರಚನೆಯಾದ ನಂತರ 2014ರ ಚುನಾವಣೆಯಲ್ಲಿ ಸೀತಕ್ಕ ಮತ್ತೆ ಟಿಡಿಪಿಯಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಆ ಸಮಯದಲ್ಲಿ ತೆಲಂಗಾಣದಲ್ಲಿ ಟಿಡಿಪಿ ದುರ್ಬಲವಾಗುತ್ತಿತ್ತು. ಅಂದಿನ ಪರಿಸ್ಥಿತಿಯಲ್ಲಿ ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಟಿಡಿಪಿಯಿಂದ ಹೊರಬಂದು ಕಾಂಗ್ರೆಸ್ ಗೆ ಸೇರಿದರು.

2018ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಮುಳಗಿನಿಂದ ಮತ್ತೆ ಸ್ಪರ್ಧಿಸಿದ್ದ ಸೀತಕ್ಕ ಭಾರಿ ಬಹುಮತದಿಂದ ಗೆದ್ದಿದ್ದರು. ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯೆಯಾಗಿಯೂ ನೇಮಕಗೊಂಡರು. ಮತ್ತು ಕರೋನಾ ಸಮಯದಲ್ಲಿ, ಅನೇಕ ಬುಡಕಟ್ಟು ಜನಾಂಗದವರಿಗಾಗಿ ಕಾಲ್ನಡಿಗೆಯಲ್ಲಿ ಬೆಟ್ಟ ಗುಡ್ಡಗಳು ದಾಟಿ ಬುಡಕಟ್ಟು ಜನಾಂಗಕ್ಕೆ ಆಸರೆಯಾದರು.

ಸಮಾಜದಲ್ಲಿ ಆಗುತ್ತಿದ್ದ ಅನ್ಯಾಯಗಳನ್ನು ಧೈರ್ಯವಾಗಿ ಎದುರಿಸಿ, ಬಂಧನ, ಕೇಸುಗಳಿಗೆ ಹೆದರದೆ ಜನರಿಗಾಗಿ ಹೋರಾಡಿದರು. ಅವರಿಗೆ ಅಭಿಮಾನಿಗಳು ಇಟ್ಟಿರುವ ಹೆಸರು ತೆಲಂಗಾಣದ ಐರನ್ ಲೇಡಿ. ಹಾಗೂ ಈ ಬಾರಿಯ ಚುನಾವಣೆಯಲ್ಲಿ ಇದೇ ಮುಳಗು ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದರು. ಬಿಆರ್ ಎಸ್ ಅಭ್ಯರ್ಥಿ ಬಡೇ ಜ್ಯೋತಿ ವಿರುದ್ಧ 33,700 ಮತಗಳ ಅಂತರದಿಂದ ಗೆದ್ದು ತಮ್ಮ ಶಕ್ತಿ ಪ್ರದರ್ಶಿಸಿದರು.

ತೆಲಂಗಾಣ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ರೇವಂತ್ ರೆಡ್ಡಿ ಮತ್ತು ಸೀತಕ್ಕ ಅವರಿಗೂ ತೆಲುಗು ದೇಶಂ ಪಕ್ಷದಿಂದಲೇ ಒಡನಾಟವಿತ್ತು. ಅವರ ನಡುವೆ ಮೊದಲಿನಿಂದಲೂ ಅಣ್ಣಾ ತಂಗಿಯ ಬಾಂಧವ್ಯ ಏರ್ಪಟ್ಟಿತ್ತು. ರೇವಂತ್ ರೆಡ್ಡಿ ಕೂಡ ಹಲವು ವೇದಿಕೆಗಳಲ್ಲಿ ಸೀತಕ್ಕನನ್ನು ಸಹೋದರಿ ಎಂದು ಉಲ್ಲೇಖಿಸುತ್ತಿದ್ದರು. ರಾಹುಲ್ ಗಾಂಧಿ ಕೂಡ ಸೀತಕ್ಕನನ್ನು ಸಹೋದರಿ ಎಂದು ಕರೆಯುತ್ತಿದ್ದುದು ಗಮನಾರ್ಹ.

ತೆಲಂಗಾಣ ಚುನಾವಣಾ ಪ್ರಚಾರವೂ ಮುಲುಗು ಜಿಲ್ಲೆಯಿಂದಲೇ ಆರಂಭವಾಗಿತ್ತು. ಸೀತಕ್ಕ ಅವರ ಕ್ಷೇತ್ರವಲ್ಲದೆ ರಾಜ್ಯಾದ್ಯಂತ ಇರುವ ಮಾಸ್ ಫಾಲೋಯಿಂಗ್ ಪಕ್ಷದಲ್ಲಿನ ಬೆಂಬಲ‌ ಇಂದು ಸೀತಕ್ಕನನ್ನು ಮಂತ್ರಿಯನ್ನಾಗಿ ಮಾಡಿದೆ.
ಸಿಎಂ ರೇವಂತ್ ರೆಡ್ಡಿ ಸೀತಕ್ಕನವರಿಗೆ  ಬುಡಕಟ್ಟು ಇಲಾಖೆಯನ್ನು ನೀಡಿದ್ದಾರೆ.

Advertisement
Tags :
Advertisement