For the best experience, open
https://m.suddione.com
on your mobile browser.
Advertisement

ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್ ಹಾಗೂ ರೇವಣ್ಣರಿಗೆ ನೋಟೀಸ್ ನೀಡಿದ ಎಸ್ಐಟಿ..!

08:40 PM Apr 30, 2024 IST | suddionenews
ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್ ಹಾಗೂ ರೇವಣ್ಣರಿಗೆ ನೋಟೀಸ್ ನೀಡಿದ ಎಸ್ಐಟಿ
Advertisement

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಸ್ಐಟಿ ತನಿಖೆ ನಡೆಸುತ್ತಿದೆ. ವಿಡಿಯೋದಲ್ಲಿ ಗುರುತು ಸಿಕ್ಕವರನ್ನು ಕರೆಸಿ , ವಿಚಾರಣೆ ನಡೆಸುತ್ತಿದ್ದಾರೆ. ರಾಜಕೀಯ ನಾಯಕರ ಕೆಸೆರೆಚಾಟದ ನಡುವೆ ತನಿಖೆ ತೀವ್ರಗೊಂಡಿದೆ. ಎಡಿಜಿಪಿ ಬಿಜಯ್ ಕುಮಾರ್ ಸಿಂಗ್ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ. ಇದೀಗ ಈ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣ ಸಂಬಂಧ ತಂದೆ-ಮಗನಿಗೆ ಎಸ್ಐಟಿ ಅಧಿಕಾರಿಗಳು ನೋಟೀಸ್ ನೀಡಿದ್ದಾರೆ.

Advertisement
Advertisement

ವಿಡಿಯೋದಲ್ಲಿ ಇರುವ ಸಂತ್ರಸ್ತೆಯರನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಲಾಗಿದೆ. ವಿಚಾರಣೆಯಲ್ಲಿ ಸಂತ್ರಸ್ತೆಯರು ಹಲವು ಮಾಹಿತಿ ನೀಡಲಾಗಿದೆ ಎನ್ನಲಾಗಿದೆ. ಎಸ್ಪಿ ಸೀಮಾ ಲಾಟ್ಕರ್ ಮುಂದೆ ಮಾಹಿತಿ ನೀಡಲಾಗಿದೆ ಎನ್ನಲಾಗಿದೆ. ಸಂತ್ರಸ್ತೆಯ ಮಾಹಿತಿ ದಾಖಲಿಸಿಕೊಂಡಿರುವ ಎಸ್ಐಟಿ ಅಧಿಕಾರಿಗಳು ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಇಬ್ಬರಿಗೂ ನೋಟೀಸ್ ನೀಡಲಾಗಿದೆ. ಇಬ್ಬರು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ.

Advertisement

ಇನ್ನು ಪೆನ್ ಡ್ರೈವ್ ಇದ್ದದ್ದು ಪ್ರಜ್ಚಲ್ ರೇವಣ್ಣ ಕಾರು ಡ್ರೈವರ್ ಬಳಿ. ಹೀಗಾಗಿ ಡ್ರೈವರ್ ಕಾರ್ತಿಕ್ ನನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಕಾರ್ತಿಕ್ ಹೇಳಿದ ಮಾಹಿತಿಯನ್ನು ದಾಖಲಿಸಿಕೊಂಡಿದ್ದಾರೆ.

Advertisement

ಇನ್ನು ಬೆಳಗ್ಗೆಯಿಂದ ಬಿಜೆಪಿ ನಾಯಕ, ವಕೀಲ ದೇವರಾಜೇಗೌಡ, ಕಾರ್ತಿಕ್ ಮೇಲೆಯೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು. ಕಾರ್ತಿಕ್ ಈ ಪೆನ್ ಡ್ರೈವ್ ಅನ್ನು ಕಾಂಗ್ರೆಸ್ ನಾಯಕರಿಗೂ ಹಂಚಿರುವುದಾಗಿ ಹೇಳಿದ್ದ. ರಾಜಕೀಯವಾಗಿ ಯಾವಾಗ ಬಳಸಬೇಕೋ ಆಗ ಬಳಸುತ್ತೇನೆ ಎಂದಿದ್ದ ಎಂದಿದ್ದರು‌. ಈ ವಿಚಾರ ವೈರಲ್ ಆಗುತ್ತಿದ್ದ ಕಾರ್ತಿಕ್ ವಿಡಿಯೋ ರಿಲೀಸ್ ಮಾಡಿ, ಆ ಪೆನ್ ಡ್ರೈವ್ ಅನ್ನು ದೇವರಾಜೇಗೌಡ ಒಬ್ಬರಿಗೆ ಕೊಟ್ಟಿದ್ದಿದ್ದು. ಅವರು ಏತಕ್ಕೆ ಬಳಸಿದರೋ ಗೊತ್ತಿಲ್ಲ ಎಂದು ಉಲ್ಟಾ ಹೊಡೆದಿದ್ದರು.

Advertisement
Tags :
Advertisement