ರೇಷ್ಮೇ ಸೀರೆಗಳನ್ನು ಮಾಮೂಲಿಯಂತೆ ಇಸ್ತ್ರಿ ಮಾಡುವಂತಿಲ್ಲ.. ಈ ಟಿಪ್ಸ್ ನೋಡಿ, ಸೀರೆ ಕಾಪಾಡಿಕೊಳ್ಳಿ
ಇಸ್ತ್ರಿ ಮಾಡುವುದರಿಂದ ಬಟ್ಟೆ ಹೊಸದರಂತೆ ಹೊಳೆಯುತ್ತದೆ. ಅದಕ್ಕಾಗಿಯೇ ರೇಷ್ಮೆ ಸೀರೆಯನ್ನು ಸದಾ ಹೊಸತಾಗಿ ಕಾಣುವಂತೆ ಮಾಡಲು ಕೆಲವೊಂದು ಸಲಹೆಗಳನ್ನು ಪಾಲಿಸಬೇಕು. ಅದರಲ್ಲಿ ಇಸ್ತ್ರಿಯೂ ಒಂದು. ಮನೆಯಲ್ಲಿ ಇಸ್ತ್ರಿ ಮಾಡಲು ಕೆಲವು ಸಲಹೆಗಳನ್ನು ಅನುಸರಿಸಬೇಕು. ಇದು ರೇಷ್ಮೆ ಸೀರೆಗಳನ್ನು ಸದಾ ಹೊಸದರಂತೆ ಕಾಣುವಂತೆ ಮಾಡುತ್ತದೆ.
ರೇಷ್ಮೆ ಸೀರೆಗಳನ್ನು ಖರೀದಿಸುವ ಮೊದಲು, ಅವುಗಳ ಬಗ್ಗೆ ಕೇಳಿ ತಿಳಿದುಕೊಳ್ಳಿ. ನೀವು ಕೊಳ್ಳುವ ಸೀರೆಗಳನ್ನು ಇಸ್ತ್ರಿ ಮಾಡಬಹುದಾ ಅಥವಾ ಇಲ್ಲವೋ ಎಂದು ಕೇಳಿ ತಿಳಿದುಕೊಳ್ಳಿ. ಒಂದು ವೇಳೆ ಅದರ ಮೇಲೆ ಲೇಬಲ್ ಇದ್ದರೆ ಅದನ್ನು ಪರಿಶೀಲಿಸಿ. ಇದರಿಂದ ಸೀರೆಗಳು ಹಾಳಾಗದಂತೆ ನೋಡಿಕೊಳ್ಳಬಹುದು.
ಯಾವುದೇ ರೇಷ್ಮೆ ಸೀರೆಗಳನ್ನು ಇಸ್ತ್ರಿ ಮಾಡುವಾಗ, ಅದರ ಮೇಲೆ ಹತ್ತಿ ಬಟ್ಟೆಯನ್ನು ಇರಿಸಿ ಮತ್ತು ಅವುಗಳ ಮೇಲೆ ಇಸ್ತ್ರಿ ಮಾಡಿ. ಆಗ ಸೀರೆಗಳನ್ನೂ ಯಾವುದೇ ತೊಂದರೆಯಿಲ್ಲದೆ ಚೆನ್ನಾಗಿ ಇಸ್ತ್ರಿ ಮಾಡಲಾಗುತ್ತದೆ.
ಅದೇ ರೀತಿ ಈ ಸೀರೆಯನ್ನು ಇಸ್ತ್ರಿ ಮಾಡುವಾಗ ಐರನ್ ಬಾಕ್ಸ್ ನಲ್ಲಿ ಸೀರೆಗಳಿಗನುಗುಣವಾಗಿ ಸೆಟ್ಟಿಂಗ್ ನಲ್ಲಿ ಆಯ್ಕೆ ಮಾಡಿಕೊಳ್ಳಬೇಕು. silk ಸೀರೆಗಳಿಗಾಗಿ ಮಾಡಲು ಸೂಚಿಸಿರುವ Silk ಬಟನ್ ಆಯ್ಕೆ ಮಾಡಿಕೊಂಡು ಇಸ್ತ್ರಿ ಮಾಡುವುದು ಸೂಕ್ತ.
ಸೀರೆಗಳನ್ನು ಯಾವಾಗಲೂ ಬಾರ್ಡರ್‌ನಿಂದ ಮೊದಲು ಇಸ್ತ್ರಿ ಮಾಡಬೇಕು. ನಂತರ ಸೀರೆಯ ಮಧ್ಯಭಾಗವನ್ನು ಇಸ್ತ್ರಿ ಮಾಡಿ. ಹೀಗೆ ಮಾಡುವುದರಿಂದ ಸೀರೆ ಚೆನ್ನಾಗಿ ಸುಕ್ಕುಗಳಿಲ್ಲದೆ ಮೂಡುತ್ತದೆ. ಇಸ್ತ್ರಿ ಪೆಟ್ಟಿಗೆಯನ್ನು ಹೆಚ್ಚು ಕಾಲ ಒಂದೇ ಹತ್ತಿರ ಇಡಬೇಡಿ. ಸೀರೆಯ ಅಂಚನ್ನು ಮಡಚಿ ಯಾವುದೇ ರೀತಿಯ ಸುಕ್ಕುಗಳಿಲ್ಲದೆ ಇಸ್ತ್ರಿ ಮಾಡಿ.
ಇಸ್ತ್ರಿ ಮಾಡಿದ ನಂತರ ಸೀರೆಯನ್ನು ಮಡಚಬೇಡಿ. ಅದನ್ನು ಹ್ಯಾಂಗರ್ ಗೆ ನೇತು ಹಾಕಿ. ಅಲ್ಲದೆ, ಅದನ್ನು ಬೀರುವಾದಲ್ಲಿ ಇಡಬೇಡಿ. ಇಟ್ಟರೆ ಸೀರೆ ಸುಕ್ಕಾಗುವ ಸಾಧ್ಯತೆ ಇದೆ.
ಅದೇ ರೀತಿ ಪ್ಲಾಸ್ಟಿಕ್ ಕವರ್ ನಲ್ಲಿ ಮಡಚಿ ಇಡಬೇಡಿ. ಇದು ತೇವಾಂಶಕ್ಕೆ ಕಾರಣವಾಗುತ್ತದೆ.