For the best experience, open
https://m.suddione.com
on your mobile browser.
Advertisement

ಆಘಾಕಾರಿ ಸುದ್ದಿ : ಭೀಕರ ಅಪಘಾತದಲ್ಲಿ ಬಲಗಾಲು ಕಳೆದುಕೊಂಡ ಪಾರ್ವತಮ್ಮ ರಾಜ್‍ಕುಮಾರ್ ಸಂಬಂಧಿ ; ನಟ ಸೂರಜ್

03:02 PM Jun 25, 2023 IST | suddionenews
ಆಘಾಕಾರಿ ಸುದ್ದಿ   ಭೀಕರ ಅಪಘಾತದಲ್ಲಿ ಬಲಗಾಲು ಕಳೆದುಕೊಂಡ ಪಾರ್ವತಮ್ಮ ರಾಜ್‍ಕುಮಾರ್ ಸಂಬಂಧಿ   ನಟ ಸೂರಜ್
Advertisement

Advertisement

ಮೈಸೂರು: ಬುಲೆಟ್ ಗಾಡಿಗೆ ಟಿಪ್ಪರ್ ಲಾರಿ ಗುದ್ದಿದ ಪರಿಣಾಮ ನಟ ಸೂರಜ್ ಬಲಗಾಲು ಕಳೆದುಕೊಂಡಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಹಿರಿಕಾಟಿ ಗೇಟ್ ಬಳಿ ಈ ಘಟನೆ ನಡೆದಿದೆ. ಸೂರಜ್ ದಿವಂಗತ ಪಾರ್ವತಮ್ಮ ರಾಜ್‍ಕುಮಾರ್ ಅವರ ತಮ್ಮನ ಮಗ ಎನ್ನಲಾಗುತ್ತಿದೆ.

Advertisement

ಮೈಸೂರಿನ ಅಪೋಲೋ ಆಸ್ಪತ್ರೆಗೆ ಸೂರಜ್ ನನ್ನು ದಾಖಲಿಸಿದ್ದು, ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಮೊಣಕಲಿನವರೆಗೂ ಕಾಲು ತೆಗೆಯಲೇಬೇಕಾದ ಪರಿಸ್ಥಿತಿ ಉಂಟಾಗಿತ್ತು. ಹೀಗಾಗಿ ಬಲಗಾಲನ್ನು ತೆಗೆದಿದ್ದಾರೆ. ಅಪಘಾತದ ಪರಿಣಾಮ ಸೂರಜ್ ಸಂಚರಿಸುತ್ತಿದ್ದ ಬುಲೆಟ್ ನಜ್ಜು ಗುಜ್ಜಾಗಿದೆ.

Advertisement

ಸೂರಜ್ ಆರೋಗ್ಯ ವಿಚಾರಿಸಲು ನಟ ಶಿವಣ್ಣ ಮೈಸೂರಿಗೆ ಬಂದಿದ್ದಾರೆ ಎನ್ನಲಾಗಿದೆ. ರಾಜಕುಮಾರ್ ಸಂಬಂಧಿ ಮಾತ್ರವಲ್ಲದೇ ‘ಭಗವಾನ್ ಶ್ರೀ ಕೃಷ್ಣ ಪರಮಾತ್ಮ’ ಚಿತ್ರದಲ್ಲಿ ಸೂರಜ್ ನಟಿಸಿ, ಯುವನಟರಾಗಿ ಗುರುತಿಸಿಕೊಂಡಿದ್ದರು. ಡಿಸೆಂಬರ್ ತಿಂಗಳಲ್ಲಿ ತಮ್ಮ ಹೊಸ ಸಿನಿಮಾ ಲಾಂಚ್ ಮಾಡಲು ಓಡಾಡುತ್ತಿದ್ದರು.

Tags :
Advertisement