For the best experience, open
https://m.suddione.com
on your mobile browser.
Advertisement

NEET-UG ವಿದ್ಯಾರ್ಥಿಗಳಿಗೆ ಶಾಕಿಂಗ್ ನ್ಯೂಸ್ : ಗ್ರೇಸ್ ಅಂಕ ಪಡೆದವರಿಗೆ ಮತ್ತೆ ಪರೀಕ್ಷೆ..!

02:12 PM Jun 13, 2024 IST | suddionenews
neet ug ವಿದ್ಯಾರ್ಥಿಗಳಿಗೆ ಶಾಕಿಂಗ್ ನ್ಯೂಸ್   ಗ್ರೇಸ್ ಅಂಕ ಪಡೆದವರಿಗೆ ಮತ್ತೆ ಪರೀಕ್ಷೆ
Advertisement

NEET-UG ಫಲಿತಾಂಶ ಪ್ರಕಟವಾದ ನಂತರ ರ್ಯಾಂಕ್ ವಿಚಾರದಲ್ಲಿ ಸಾಕಷ್ಟು ವಿವಾದ ಉಂಟಾಗಿತ್ತು. ಈ ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಇಂದು ಕೋರ್ಟ್ ನಲ್ಲಿ ವಿಚಾರಣೆ ನಡೆದಿದ್ದು, ಸುಪ್ರೀಂ ಕೋರ್ಟ್ ಮರುಪರೀಕ್ಷೆಗೆ ಸೂಚನೆ ನೀಡಿದೆ.

Advertisement

ಇಡಿ ಟೆಜ್ ಸಂಸ್ಥೆಯ ಫಿಸಿಕ್ಸ್ ವಲ್ಲಾ ಮುಖ್ಯ ಕಾರ್ಯನಿರ್ವಾಹಕರಾಗಿದ್ದು, ಈ ಸಂಬಂಧ ಅರ್ಜಿ ಸಲ್ಲಿಕೆ ಮಾಡಿದ್ದರು. ಮೂರು ಅರ್ಜಿಗಳು ಸಲ್ಲಿಕೆಯಾಗಿದ್ದವು. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನು ಒಳಗೊಂಡ ಪೀಠವೂ ಇದರ ವಿಚಾರಣೆ ನಡೆಸಿದೆ. ವಿಚಾರಣೆಯಲ್ಲಿ ವಾದ-ಪ್ರತಿವಾದ ಆಲಿಸಿದ ಕೋರ್ಟ್ ವಿದ್ಯಾರ್ಥಿಗಳಿಗೆ ಮಹತ್ವದ ಸಲಹೆ ನೀಡಿದೆ. ಆದರೆ ವಿದ್ಯಾರ್ಥಿಗಳಿಗೆ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದೆ.

ಗ್ರೇಸ್ ಮಾರ್ಕ್ಸ್ ನೀಡಿದ್ದ ಅಂಕಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ್ದು, ಗ್ರೇಸ್ ಅಂಕಗಳನ್ನು ಪಡೆದ 1563 ವಿದ್ಯಾರ್ಥಿಗಳು ಮತ್ತೆ ಪರೀಕ್ಷೆಗೆ ಹಾಜರಾಗಬೇಕೆಂದು ಕೋರ್ಟ್ ಹೇಳಿದೆ. ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವುದು ಸರಿಯಲ್ಲ ಎಂದೇ ಸುಪ್ರೀಂ ಕೋರ್ಟ್ ಹೇಳಿದೆ.

Advertisement

ಹೀಗಾಗಿ NEET-UG 2024ರ ಪರೀಕ್ಷೆಯಲ್ಲಿ ಗ್ರೇಸ್ ಅಂಕಗಳನ್ನು ಪಡೆದ ಅಭ್ಯರ್ಥಿಗಳು ಪುನಃ ಹಾಜರಾಗಬೇಕಾಗುತ್ತದೆ. ಈ ಪರೀಕ್ಚೆಯ ಫಲಿತಾಂಶ ಜೂನ್ 23ರಂದು ಬಿಡುಗಡೆಯಾಗಲಿದೆ. ಇದಾದ ಬಳಿಕ ಕೌನ್ಸೆಲಿಂಗ್ ಪ್ರಕ್ರಿಯೆಯೂ ಶುರುವಾಗಲಿದೆ ಎಂದು ಕೋರ್ಟ್ ತೀರ್ಪು ನೀಡಿದೆ.

ಕಳೆದ ವರ್ಷ NEET ಫಲಿತಾಂಶಗಳಿಗೆ ಹೋಲಿಕೆ ಮಾಡಿದರೆ ಅವರ ನಿರೀಕ್ಷಿತ ರ್ಯಾಂಕ್ ಶ್ರೇಣಿಗಳು ಈಗ 20 ರಿಂದ 25 ಸಾವಿರದಷ್ಟು ಕೆಳಗೆ ಇಳಿದಿದೆ. ಇದರಿಂದಾಗಿ ಅವರು ಬಯಸಿದ ಶಿಕ್ಷಣ ಸಂಸ್ಥೆಯಲ್ಲಿ ಸೀಟು ಸಿಗುತ್ತಿಲ್ಲ.

Advertisement
Tags :
Advertisement