For the best experience, open
https://m.suddione.com
on your mobile browser.
Advertisement

ಪದವಿ ವಿದ್ಯಾರ್ಥಿಗಳಿಗೆ ಶಾಕ್.. ಕಾಲೇಜು ಶುಲ್ಕದಲ್ಲಿ ಶೇ.10 ಹೆಚ್ಚಳ

06:32 PM Jan 03, 2024 IST | suddionenews
ಪದವಿ ವಿದ್ಯಾರ್ಥಿಗಳಿಗೆ ಶಾಕ್   ಕಾಲೇಜು ಶುಲ್ಕದಲ್ಲಿ ಶೇ 10 ಹೆಚ್ಚಳ
Advertisement

ಬೆಂಗಳೂರು: ಪದವಿ ಶುಲ್ಕವನ್ನು ಶೇಕಡ 10 ರಷ್ಟು ಏರಿಕೆ ಮಾಡುವುದಕ್ಕೆ ಸರ್ಕಾರ ನಿರ್ಧಾರ ಮಾಡಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪದವಿ ಕೋರ್ಸ್ ಗಳ ಶುಲ್ಕವನ್ನು ಹೆಚ್ಚಳ ಮಾಡುವುದಕ್ಕೆ ನಿರ್ಧಾರ ಮಾಡಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರ ಮೇಲೆ ಹೊರೆ ಹೆಚ್ಚಳವಾಗಲಿದೆ.

Advertisement

2024-25ರ ಶೈಕ್ಷಣಿಕ ವರ್ಷದಲ್ಲಿ ಕಾಲೇಜು ಹಾಗೂ ವಿವಿಗಳ ಶುಲ್ಕವನ್ನು ಹೆಚ್ಚಳ ಮಾಡಲು ನಿರ್ಧರಿಸಿದೆ. ಕನಿಷ್ಠ ಶೇಕಡ 10 ರಷ್ಟು ಶುಲ್ಕ ಹೆಚ್ಚಿಸಲು ನಿರ್ಧರಿಸಲಾಗಿದೆ. ಬಿಎ, ಬಿಕಾಂ, ಬಿಎಸ್ಸಿ ಸೇರಿದಂತೆ ಅನೇಕ ಪದವುಗೆ ಶುಲ್ಕ ಹೆಚ್ಚಳ ಮಾಡಲು ನಿರ್ಧರಿಸಿದೆ. ಕಳೆದ ವರ್ಷಕ್ಕಿಂತ ಶೇಕಡ 10ರಷ್ಟು ಏರಿಕೆ ಮಾಡಲು ನಿರ್ಧಾರ ಮಾಡಲಾಗಿದೆ. ಶುಲ್ಕ ಏರಿಕೆ ಮಾಡುವುದಕ್ಕೆ ಉನ್ನತ ಶಿಕ್ಷಣ ಸಚುವಾಲಯ ಅನುಮತಿ ನೀಡಿದೆ.

ಶುಲ್ಕ 10% ಹೆಚ್ಚಳಕ್ಕೆ ಮಾತ್ರ ಅನುಮತಿ ಸಿಕ್ಕಿದೆ. ಕೆಲವೊಂದು ಕಡೆ ಶುಲ್ಕ ಹೆಚ್ಚಳದ ದೂರುಗಳು ಕೂಡ ಹೆಚ್ಚಾಗುತ್ತಿದೆ‌. ಯಾಕಂದ್ರೆ ಸರ್ಕಾರ ಅನುಮತಿ ಕೊಟ್ಟಾಕ್ಷಣ ಎಷ್ಟೋ ಕಾಲೇಜುಗಳು ಮನಬಂದಂತೆ ಶುಲ್ಕ ಹೆಚ್ಚಳವನ್ನು ಮಾಡಿ ಬಿಡುತ್ತದೆ. ಈ ರೀತಿಯ ದೂರುಗಳು ದಾಖಲಾಗುತ್ತಿವೆ.

Advertisement

Tags :
Advertisement