ಗೌತಮ್ ಗಂಭೀರ್ ಗೆ ಶಾಕ್ : ಟೀಂ ಇಂಡಿಯಾ ಕೋಚ್ ಗೆ ಹರ್ಭಜನ್ ಸಿಂಗ್ ಅರ್ಜಿ
ಟೀ ಇಂಡಿಯಾ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಕಾಲಾವಧಿ ಟಿ20 ವಿಶ್ವಕಪ್ ತನಕ ಮಾತ್ರ ಇದೆ. ಅಷ್ಟರ ಒಳಗೆ ಹೊಸ ಟೀಂ ಇಂಡಿಯಾ ಕೋಚ್ ಅನ್ನು ಆಯ್ಕೆ ಮಾಡಬೇಕಾಗಿದೆ. ಅದಕ್ಕಾಗಿ ಬಿಸಿಸಿಐ ಅರ್ಜಿಯನ್ನು ಆಹ್ವಾನ ಮಾಡಿದೆ. ರಾಹುಲ್ ದ್ರಾವಿಡ್ ಕೂಡ ಈ ಸ್ಥಾನಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಜೈ ಶಾ ಹೇಳಿದ್ದರು. ಇದರ ನಡುವೆಯೂ ಗೌತಮ್ ಗಂಭೀರ್ ಮುಖ್ಯ ಕೋಚ್ ಆಗುತ್ತಾರೆಂದು ಹೇಳಲಾಗಿತ್ತು. ಆದರೆ ಈಗ ಅದು ಕಷ್ಟ ಸಾಧ್ಯ ಎನ್ನಲಾಗುತ್ತಿದೆ.
ಗೌತಮ್ ಗಂಭೀರ್ ಆಯ್ಕೆ ಬಹುತೇಕ ಕನ್ಫರ್ಮ್ ಆಗಿತ್ತು. ಮತ್ತೆ ಕನ್ನಡಿಗರನ್ನೇ ಆಯ್ಕೆ ಮಾಡಿದ್ದ ಬಿಸಿಸಿಐ ಬಗ್ಗೆ ಎಲ್ಲರೂ ಖುಷಿ ಪಟ್ಟಿದ್ದರು. ಈಗಾಗಲೇ ಗೌತಮ್ ಗಂಭೀರ್ ಜೊತೆಗೆ ನಾವೂ ಮಾತನಾಡಿದ್ದು, ದೇಶಕ್ಕಾಗಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿತ್ತು. ಇನ್ನೇನು ಟೀಂ ಇಂಡಿಯಾದ ಹೆಡ್ ಕೋಚ್ ಆಗಿ ಗೌತಮ್ ಗಂಭೀರ್ ಹೆಸರು ಘೋಷಿಸಬೇಕು ಎಂಬುದರ ಬೆನ್ನಲ್ಲೇ ಶಾಕಿಂಗ್ ಸುದ್ದಿಯೊಂದು ಹೊರ ಬಿದ್ದಿದೆ.
ಟೀಂ ಇಂಡಿಯಾ ಹೆಡ್ ಕೋಚ್ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನ ಮಾಡಿತ್ತು. ಅದರಂತೆ ಹೆಡ್ ಕೋಚ್ ಸ್ಥಾನಕ್ಕೆ ಹರ್ಭಜನ್ ಸಿಂಗ್ ಕೂಡ ಅರ್ಜಿ ಹಾಕಿದ್ದಾರೆ. ಟೀಂ ಇಂಡಿಯಾ ಹೆಡ್ ಕೋಚ್ ರೇಸ್ ನಲ್ಲಿ ಈಗ ಮಾಜಿ ಕ್ರಿಕೆಟರ್ ಹರ್ಭಜನ್ ಸಿಂಗ್ ಕೂಡ ಇರುವುದು, ಗೌತಮದ ಗಂಭೀರ್ ಗೆ ಶಾಕ್ ಆಗಿದೆ. ಟೀಂ ಇಂಡಿಯಾ ಕೋಚ್ ಆಗುವುದಕ್ಕೆ ಒಂದಷ್ಟು ಷರತ್ತುಗಳನ್ನು ಬಿಸಿಸಿಐ ವಿಧಿಸಿತ್ತು. ಈಗ ಆ ಎಲ್ಲಾ ಷರತ್ತುಗಳನ್ನು ಗಮನಿಸಿ ಹುದ್ದೆ ನೀಡಬೇಕಿದೆ. ಆದರೆ ಗೌತಮ್ ಗಂಭೀರ್ ಹೆಸರು ಫೈನಲ್ ಅನ್ನೋದನ್ನ ಈಗ ಹೇಳುವುದು ಕಷ್ಟ.