Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಎಕ್ಸಿಟ್ ಪೋಲ್ ನಲ್ಲಿ ಕಾಂಗ್ರೆಸ್ ಗೆ ಶಾಕ್ : ಎಷ್ಟು ಸೀಟು ಬರಲಿದೆ ರಾಜ್ಯದಲ್ಲಿ..?

09:02 PM Jun 01, 2024 IST | suddionenews
Advertisement

ಲೋಕಸಭಾ ಚುನಾವಣೆ ಮುಗಿದಿದ್ದು, ಫಲಿತಾಂಶಕ್ಕಾಗಿ ದೇಶದ ಜನತೆ ಕಾಯುತ್ತಿದ್ದಾರೆ. ಅದಕ್ಕೂ ಮುನ್ನ ಎಕ್ಸಿಟ್ ಪೋಲ್ ಸಾಕಷ್ಟು ಕುತೂಹಲವನ್ನು ಉಂಟು ಮಾಡುತ್ತದೆ. ಕೆಲವೊಮ್ಮೆ ಎಕ್ಸಿಟ್ ಪೋಲ್ ನಿಜವಾಗಿದೆ, ಇನ್ನು ಕೆಲವೊಮ್ಮೆ ಸಂಪೂರ್ಣ ಸತ್ಯವಾಗಿಲ್ಲ. ಈ ಬಾರಿಯೂ ಎಕ್ಸಿಟ್ ಪೋಲ್ ವರದಿ ರಿಲೀಸ್ ಆಗಿದ್ದು, ಕಾಂಗ್ರೆಸ್ ಗೆ ಶಾಕ್ ನೀಡಿದೆ.

Advertisement

ಇಂಡಿಯಾ ಟುಡೇ ರಿಲೀಸ್ ಮಾಡಿರುವ ವರದಿ ಪ್ರಕಾರ: ಬಿಜೆಪಿ - 20-22 ಸೀಟು ತನ್ನದಾಗಿಸಿಕೊಳ್ಳಲಿದೆ. ಕಾಂಗ್ರೆಸ್-3-5 ಸೀಟು ಗೆಲ್ಲಲಿದೆ. ಜೆಡಿಎಸ್ - 2-3 ಸೀಟು ಗೆಲ್ಲಲಿದೆ ಎನ್ನಲಾಗಿದೆ.

ಇನ್ನು ಸಿ ವೋಟರ್ ಸಮೀಕ್ಷೆಯ ಪ್ರಕಾರ, ಬಿಜೆಪಿ - 21-22 ಸೀಟು, ಕಾಂಗ್ರೆಸ್ - 3-5, ಜೆಡಿಎಸ್ -1-3 ಸೀಟು ಗೆಲ್ಲಲಿದೆಯಂತೆ.

Advertisement

ಇಂಡಿಯಾ ಟಿವಿ ಸಮೀಕ್ಷೆಯ ಪ್ರಕಾರ ಬಿಜೆಪಿ : 18-22 ಸೀಟು, ಕಾಂಗ್ರೆಸ್ : 4-8 ಸೀಟು, ಜೆಡಿಎಸ್ : 2 ಸೀಟು ಗೆಲ್ಲಲಿದೆ ಎನ್ನಲಾಗುತ್ತಿದೆ.

ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ದಿನಗಣನೇ ಶುರುವಾಗಿದೆ. ಇನ್ನೆರಡು ದಿನ ಕಳೆದರೆ ಫಲಿತಾಂಶದ ಟೆನ್ಶನ್ ಶುರುವಾಗಲಿದೆ. ಜೂನ್ 4 ಅಂದ್ರೆ ಮಂಗಳವಾರ ಲೋಕಸಭಾ ಚುನಾವಣೆಯ ಫಲಿತಾಂಶ ಹೊರ ಬರಲಿದೆ. ನರೇಂದ್ರ ಮೋದಿಯವರೇ ಹ್ಯಾಟ್ರಿಕ್ ಹೊಡೆಯುತ್ತಾರಾ..? ಮತದಾರ ಪ್ರಭುಗಳು ಮತ್ತೆ ಮೋದಿಗೆ ಜೈ ಎಂದಿದ್ದಾರಾ..? ಎಂಬ ಪ್ರಶ್ನೆಗಳಿಗೆಲ್ಲಾ ಉತ್ತರ ಸಿಗಲಿದೆ. ಇದರ ಜೊತೆಗೆ ಬಿಜೆಪಿ ಸೋಲಿಸಲು ಕಾಂಗ್ರೆಸ್ ಜೊತೆಗೆ ಮಿತ್ರ ಪಕ್ಷಗಳು ಒಂದಾಗಿದ್ದವು. ಆ ಫಲಿತಾಂಶದ ವಿಚಾರವೂ ಹೊರ ಬೀಳಲಿದೆ. ಇನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಹದಿನೈದು ಸೀಟುಗಳನ್ನಾದರೂ ಪಡೆಯಲಿದೆ ಎಂಬ ಮಾತುಗಳು ಕೇಳಿ ಬಂದಿತ್ತು. ಈಗ ಎಕ್ಸಿಟ್ ಪೋಲ್ ವರದಿ ಬೇರೆಯದ್ದನ್ನೇ ಹೇಳುತ್ತಿದೆ. ಜೂನ್ 4ಕ್ಕೆ ಇದಕ್ಕೆಲ್ಲ ಉತ್ತರ ಸಿಗಲಿದೆ.

Advertisement
Tags :
bengaluruchitradurgaCongressexit pollexit poll updatesLatest newsShock for Congresssuddionesuddione newsಎಕ್ಸಿಟ್ ಪೋಲ್ಕಾಂಗ್ರೆಸ್ಚಿತ್ರದುರ್ಗಬೆಂಗಳೂರುಶಾಕ್ಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article