For the best experience, open
https://m.suddione.com
on your mobile browser.
Advertisement

ಸರ್ಕಾರದಿಂದ ಮದ್ಯಪ್ರಿಯರಿಗೆ ಶಾಕ್ ಮೇಲೆ ಶಾಕ್ : ಈಗ ಬಿಯರ್ ಬೆಲೆ ಎಷ್ಟಿದೆ ಗೊತ್ತಾ..?

05:03 PM Jul 30, 2024 IST | suddionenews
ಸರ್ಕಾರದಿಂದ ಮದ್ಯಪ್ರಿಯರಿಗೆ ಶಾಕ್ ಮೇಲೆ ಶಾಕ್   ಈಗ ಬಿಯರ್ ಬೆಲೆ ಎಷ್ಟಿದೆ ಗೊತ್ತಾ
Advertisement

ಬೆಂಗಳೂರು: ಬಿಯರ್ ಪ್ರಿಯರಿಗೆ ಮತ್ತೆ ಶಾಕ್ ಆಗಿದೆ. ಬೆಲೆಯಲ್ಲಿ ಸರ್ಕಾರ ಮತ್ತೆ ಹೆಚ್ಚಳ ಮಾಡಿದೆ. ಫೆಬ್ರವರಿಯಲ್ಲಷ್ಟೇ ಬೆಲೆ ಏರಿಕೆ ಮಾಡಿತ್ತು. ಇದರಿಂದ ಬಿಯರ್ ಪ್ರಿಯರು ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ಹದಿನೇಳು ತಿಂಗಳಲ್ಲಿ ಇದು ಐದನೇ ಸಲ ಏರಿಕೆಯಾಗುತ್ತಿದೆ. ಕಚ್ಚಾ ವಸ್ತುಗಳ ದರ ಏರಿಕೆಯ ನೆಪವೊಡ್ಡಿ ದರ ಏರಿಕೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

ಎಲ್ಲಾ ಬ್ರ್ಯಾಂಡ್ ಗಳ ಬಿಯರ್ ದರ ಪ್ರತಿ ಬಾಟೆಲ್ ಗೆ 10ರಿಂದ 20 ರೂಪಾಯಿ ಆಗಿದೆ. ಕಳೆದ ಫೆಬ್ರವರಿ ತಿಂಗಳಲ್ಲಿ 10 ರೂಪಾಯಿ ಏರಿಕೆ ಮಾಡಲಾಗಿತ್ತು. ಏರಿಕೆಯಾಗುತ್ತಲೇ ಬರುತ್ತಿದ್ದು, ಈಗ ಒಂದು ಬಿಯರ್ ಬಾಟೆಲ್ 50-60 ರೂಪಾಯಿ ಹೆಚ್ಚಳವಾದಂತೆ ಆಗಿದೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮದ್ಯಪ್ರಿಯರಿಗೆ ಶಾಕ್ ಮೇಲೆ ಶಾಕ್ ನೀಡುತ್ತಿದೆ. ಕಳೆದ ಒಂದು ತಿಂಗಳ ಹಿಂದಷ್ಟೇ ಬಿಯರ್ ಕಂಪನಿಗಳು ಬೆಲೆ ಏರಿಕೆ ಮಾಡಿಕೊಂಡಿದ್ದವು. ಕೆಲವು ಕಂಪನಿಗಳ ಬಿಯರ್ ದರ ಕಳೆದ ಗುರುವಾರದಿಂದಾನೇ ಏರಿಕೆಯಾಗಿದೆ. ಇನ್ನು ಕೆಲವು ಕಂಪನಿಗಳ ಪರಿಷ್ಕೃತ ದರ ಮಂಗಳವಾರ ಅಥವಾ ಬುಧವಾರದಿಂದ ಜಾರಿಯಾಗಲಿದೆ‌. ಎಲ್ಲಾ ಬ್ರ್ಯಾಂಡ್ ಗಳ ಬಿಯರ್ ಬೆಲೆ ಪ್ರತಿ ಬಾಟೆಲ್ ಗೆ 10-20 ರೂಪಾಯಿ ಹೆಚ್ಚಳವಾಗಿದೆ. ರಾಜ್ಯ ಸರ್ಕಾರ ಮದ್ಯದ ಮೇಲಿನ ಬೆಲೆ ಹಾಗೂ ವಾಣಿಜ್ಯ ವಾಹನಗಳ ಮೇಲಿನ ಸಾರಿಗೆ ಸೆಸ್ ಅನ್ನು ಏರಿಕೆ ಮಾಡಿತ್ತು. ಈಗ ಮತ್ತೆ ಬಿಯರ್ ಬೆಲೆಯಲ್ಲಿ ಏರಿಕೆ ಮಾಡಿರುವುದು ಮದ್ಯಪಾನ ಪ್ರಿಯರ ಹಾರ್ಟ್ ಬ್ರೇಕ್ ಮಾಡಿದೆ. ಹೀಗೆ ಹತ್ತಿಪ್ಪತ್ತು ಜಾಸ್ತಿ ಮಾಡುತ್ತಾ ಹೋದರೆ ಹೇಗೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.

Advertisement

Tags :
Advertisement