Shobitha Death Update: ಗಂಡನಿಗೂ ಗೊತ್ತಿಲ್ಲ ನಟಿಯ ಸಾವಿನ ಮಾಹಿತಿ..!
ಬ್ರಹ್ಮಗಂಟು ಸೀರಿಯಲ್ ನಲ್ಲಿ ಪಿಂಕಿ ಪಾತ್ರದ ಮೂಲಕ ನೆಗೆಟಿವ್ ರೋಲ್ ನಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ನಟಿ ಶೋಭಿತಾ ಶಿವಣ್ಣ ನಿನ್ನೆ ಹೆಣವಾಗಿ ಕಾಣಿಸಿಕೊಂಡಿದ್ದಾರೆ. ಹೈದ್ರಬಾದ್ ನಲ್ಲಿ ಹೆಣವಾಗಿ ಬಿದ್ದಿದ್ದಾರೆ. ಇಂದು ಸಕಲೇಶಪುರಕ್ಕೆ ಮೃತದೇಹವನ್ನು ರವಾನೆ ಮಾಡಲಾಗಿದೆ. ಆದರೆ ಶೋಭಿತಾ ಸಾವನ್ನಪ್ಪಿರುವ ವಿಚಾರ ಅವರ ಪತಿ ಸುಧೀರ್ ಅವರಿಗೂ ಗೊತ್ತಿಲ್ಲ. ಈ ಬಗ್ಗೆ ಅವರ ಸಂಬಂಧಿ ವಿಜಯ್ ಎಂಬುವವರು ಮಾತಾಡಿದ್ದಾರೆ.
ನಟಿ ಶೋಭಿತಾ ಶಿವಣ್ಣ ಅವರು ರಾತ್ರಿ ತಮ್ಮ ಕುಟುಂಬದ ಜೊತೆಗೆ ಮಾತನಾಡಿದರು. ರಾತ್ತಿ ಗಂಡ ಹೆಂಡತಿ ಇಬ್ಬರು ಕೂಡ ಒಟ್ಟಿಗೆ ಕೂತು ಊಟ ಮಾಡಿದರು. ಆದರೆ ಸುಧೀರ್ ಹಾಗೂ ಶೋಭಿತಾ ಬೇರೆ ಬೇರೆ ರೂಮಿನಲ್ಲಿದ್ದರು. ಆಫೀಸ್ ಕೆಲಸ ಮಾಡುತ್ತಲೆ ಸುಧೀರ್ ಹಾಗೇ ನಿದ್ದೆಗೆ ಜಾರಿದ್ದರು. ಅತ್ತ ಶೋಭೀತಾ ರಾತ್ರಿ ತಮ್ಮ ಸಹೋದರಿ ಬಳಿ ಫೋನಿನಲ್ಲಿ ಮಾತನಾಡಿದ್ದರು. ಸುಧೀರ್ ಗಮನಕ್ಕೆ ಕೂಡ ಅದು ಬಂದಿತ್ತು. ಅವರ ಪಾಡಿಗೆ ಅವರು ಮಲಗಿದ್ದರು.
ಆದರೆ ಬೆಳಗ್ಗೆ 8 ಗಂಟೆಗೆ ಕೆಲಸದಾಕೆ ಬಂದು ಶೋಭಿತಾ ರೂಮಿನ ಬಾಗಿಲು ಬಡಿದರು, ಅರ್ಧ ಗಂಟೆ ಆದರೂ ಬರಲಿಲ್ಲ. ಬಾಗಿಲು ತೆಗೆಯುವುದಕ್ಕೆ ಸುಧೀರ್ ಪ್ರಯತ್ನಿಸಿದರು ಪ್ರಯೋಜನವಾಗಿಲ್ಲ. ಅಪಾರ್ಟ್ಮೆಂಟ್ ನಲ್ಲಿಯೇ ಇದ್ದ ಸ್ನೇಹಿತರು, ಸಂಬಂಧಿಕರಿಗೂ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಾರೆ. ಬಳಿಕ ರೂಮಿನ ಬಾಗಿಲು ತೆಗೆದು ನೋಡಿದರೆ ಶೋಭಿತಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಶೋಭಿತಾ ಸಾಯುವಂತದ್ದು ಏನಾಗಿತ್ತು ಎಂಬುದು ಪತಿ ಸುಧೀರ್ ಅವರಿಗೂ ತಿಳಿದಿಲ್ಲ ಎಂದು ಸ್ನೇಹಿತ ವಿಜಯ್ ತಿಳಿಸಿದ್ದಾರೆ.