ಶಿವಣ್ಣ ಸರ್ಜರಿ ಯಶಸ್ವಿ : ಅಭಿಮಾನಿಗಳಿಗೆ ಖುಷಿ
ದೊಡ್ಮನೆ ಕುಡಿ, ಹ್ಯಾಟ್ರಿಕ್ ಹೀರೋ ಶಿವ ರಾಜ್‍ಕುಮಾರ್ ಅಭಿಮಾನಿಗಳಿಗೆ ಇಂದು ಸಂತಸದ ಸುದ್ದಿ. ಮಾಡಿದ ಅಷ್ಟು ಪೂಜೆ, ಪುನಸ್ಕಾರದ ಫಲ ಸಿಕ್ಕಂತಾಗಿದೆ. ಶಿವಣ್ಣ ಅವರಿಗೆ ನಡೆದ ಸರ್ಜರಿ ಯಶಸ್ವಿಯಾಗಿದೆ. ಈ ಬಗ್ಗೆ ಸರ್ಜರಿ ಮಾಡಿದ ವೈದ್ಯರೇ ಮಾಹಿತಿ ನೀಡಿದ್ದಾರೆ.
ಶಿವ ರಾಜ್‍ಕುಮಾರ್ ಅವರಿಗೆ ಹಲವು ದಿನಗಳಿಂದ ಅನಾರೋಗ್ಯ ಕಾಡುತ್ತಿತ್ತು. ಆದರೂ ಸಿನಿಮಾಗಳಿಗೆ 100% ನೀಡುತ್ತಿದ್ದರು. ಸರ್ಜರಿ ಆಗಬೇಕಿದ್ದ ಕಾರಣ ಅಮೆರಿಕಾಗೆ ತೆರಳಿದ್ದಾರೆ. ನಿನ್ನೆ ಶಿವಣ್ಣನಿಗೆ ಸರ್ಜರಿಯ ದಿನ. ಹೀಗಾಗಿ ಅಭಿಮಾನಿಗಳೆಲ್ಲಾ ದೇವಸ್ಥಾನಗಳಿಗೆ ಹೋಗಿ, ವಿಶೇಷ ಪೂಜೆ ಮಾಡಿಸಿ, ಉರುಳು ಸೇವೆ ಮಾಡಿ, ಅನ್ನದಾನವನ್ನು ಮಾಡಿದ್ದರು. ಅದರ ಪ್ರತಿಫಲದಿಂದ ಇಂದು ಶಿವಣ್ಣನಿಗೆ ಸರ್ಜರಿ ಯಶಸ್ವಿಯಾಗಿದೆ.
ಸರ್ಜರಿಗೂ ಮುನ್ನ ಶಿವರಾಜ್‍ಕುಮಾರ್ ಅವರು ವಿಡಿಯೋ ಮೂಲಕ ಅಭಿಮಾನಿಗಳೊಂದಿಗೆ ಮಾತನಾಡಿ, ನಾನು ಬೇಗ ಗುಣಮುಖರಾಗುತ್ತೇನೆ ಎಂದಿದ್ದರು. ಇದೀಗ ಸರ್ಜರಿ ಮಾಡಿದ ವೈದ್ಯರು ಮಾತನಾಡಿ, 'ದೇವರ ಆಶೀರ್ವಾದ ಹಾಗೂ ಎಲ್ಲರ ಹಾರೈಕೆಯಿಂದ ಸರ್ಜರಿ ಯಶಸ್ವಿಯಾಗಿದೆ. ಶಸ್ತ್ರ ಚಿಕಿತ್ಸೆಗೆ ಶಿವ ರಾಜ್‍ಕುಮಾರ್ ಅವರು ಉತ್ತಮವಾಗಿ ಸ್ಪಂದಿಸಿದ್ದಾರೆ. ಶಸ್ತ್ರ ಚಿಕಿತ್ಸೆಯ ನಂತರ ಅವರ ಆರೋಗ್ಯ ಸ್ಥಿರವಾಗಿದೆ. ಆದಷ್ಟು ಬೇಗ ಚೇತರಿಸಿಕೊಳ್ಳುವ ನಿರೀಕ್ಚೆಯಲ್ಲುದ್ದೇವೆ ಎಂದು ತಿಳಿಸಿದ್ದಾರೆ.
ಇನ್ನು ಶಿವಣ್ಣ ಒಂದು ತಿಂಗಳ ಕಾಲ ಅಮೆರಿಕಾ ಆಸ್ಪತ್ರೆಯಲ್ಲಿಯೇ ವಿಶ್ರಾಂತಿ ಪಡೆಯಲಿದ್ದಾರೆ. ಬಳಿಕ ಅಮೆರಿಕಾದಿಂದ ವಾಪಸ್ ಬರಲಿದ್ದಾರೆ. ವೈದ್ಯರು ಮಾಡಿದ ಈ ವಿಡಿಯೋದಿಂದ ಅಭಿಮಾನಿಗಳಂತು ಫುಲ್ ಖುಷಿ ಆಗಿದ್ದಾರೆ. ಹೆಚ್ಚಿನ ವಿಶ್ರಾಂತಿ ಪಡೆದು ಆದಷ್ಟು ಬೇಗ ಇಂಡಿಯಾಗೆ ಬರಲಿ ಎಂದು ಹಾರೈಸುತ್ತಿದ್ದಾರೆ. ಇನ್ನು ಶಿವಣ್ಣ ಹಲವು ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಆ ಎಲ್ಲದರಲ್ಲೂ ಅಭಿನಯಿಸಲಿದ್ದಾರೆ.