Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಅಮೆರಿಕಾಗೆ ಚಿಕಿತ್ಸೆಗೆ ತೆರಳುವ ಮುನ್ನ ತಿರುಪತಿಯಲ್ಲಿ ಮುಡಿ ಕೊಟ್ಟ ಶಿವಣ್ಣ..!

02:03 PM Dec 07, 2024 IST | suddionenews
Advertisement

ಶಿವಣ್ಣನಿಗೆ ಅನಾರೋಗ್ಯ ಕಾಡುತ್ತಿರುವುದು, ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದನ್ನು ಶಿವಣ್ಣನೇ ಈಗಾಗಲೇ ತಿಳಿಸಿದ್ದಾರೆ. ಅದಕ್ಕೆ ಚಿಕಿತ್ಸೆಯೊಂದು ಆಗಬೇಕಿದೆ. ಅಮೆರಿಕಾಗೆ ಹೋಗಬೇಕು ಎಂಬುದನ್ನು ಹೇಳಿದ್ದಾರೆ. ಇದೀಗ ಅಮೆರಿಕಾಗೆ ತೆರಳುವ ಮುನ್ನ ದೇವರ ದರ್ಶನ ಮಾಡಿದ್ದಾರೆ. ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟಿದ್ದಾರೆ.

Advertisement

ಶಿವಣ್ಣರಿಗೆ ಹೇಳಿ ಕೇಳಿ ದೇವರ ಮೇಲೆ ಅಪಾರ ಭಕ್ತಿ ಇದೆ. ಅದರಲ್ಲೂ ಗುರು ರಾಘವೇಂದ್ರ ಸ್ವಾಮಿಗಳ ಮೇಲೆ ಜಾಸ್ತಿ ಭಕ್ತಿ. ಶಿವಣ್ಣ ಕುಟುಂಬಸ್ಥರು ಹಾಗೂ ಸ್ನೇಹಿತರ ಜೊತೆಗೆ ತಿರುಪತಿ ತಮ್ಮಪ್ಪನ ದರ್ಶನವನ್ನು ಮಾಡಿದ್ದಾರೆ. ಶಿವಣ್ಣ, ಗೀತಕ್ಕ ಸೇರಿದಂತೆ ಆಪ್ತ ಗೆಳೆಯರು ದೇವರಿಗೆ ಮುಡಿ ಕೊಟ್ಟಿದ್ದಾರೆ. ಶಿವಣ್ಣ ಇದೇ ತಿಂಗಳು ಚಿಕಿತ್ಸೆಗೆಂದು ಅಮೆರಿಕಾಗೆ ತೆರಳುತ್ತಿದ್ದಾರೆ. ಹೀಗಾಗಿ ದೇವಸ್ಥಾನಗಳಿಗೂ ಭೇಟಿ ನೀಡಿದ್ದಾರೆ.

ಇನ್ನು ಇತ್ತೀಚೆಗಷ್ಟೇ ಶಿವಣ್ಣ ತಮ್ಮದೇ ಹೋಂ ಬ್ಯಾನರ್ ನಲ್ಲಿ ಅಭಿನಯಿಸಿದ್ದ ಭೈರತಿ ರಣಗಲ್ ಸಿನಿಮಾ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲೂ ಚಿಂದಿ ಉಡಾಯಿತ್ತು. ಶಿವಣ್ಣನ ಸಿ‌ನಿಮಾ ಕ್ರೇಜ್ ಕೂಡ ಹುಟ್ಟು ಹಾಕಿತ್ತು. ರಣಗಲ್ ರೀತಿಯೇ ಡಾಲಿ ಕೂಡ ಬಟ್ಟೆ ಹಾಕಿ ಬಂದಿದ್ದರು. ಹೆಣ್ಣು ಮಕ್ಕಳು ಕೂಡ ರಣಗಲ್ ರೀತಿಯೇ ಬಟ್ಟೆ ಹಾಕಿ ಬಂದಿದ್ದರು. ಅಷ್ಟು ಕ್ರೇಜ್ ಹುಟ್ಟು ಹಾಕಿದ್ದ ಸಿನಿಮಾ ಭೈರತಿ ರಣಗಲ್.

Advertisement

ಶಿವಣ್ಣ ಇಂಡಸ್ಟ್ರಿಯ ಬ್ಯುಸಿಯೆಸ್ಟ್ ನಟ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಅವರ ಬತ್ತಳಿಕೆಯಲ್ಲಿ ಸಾಕಷ್ಟು ಸಿನಿಮಾಗಳಿದ್ದು, ಸದ್ಯಕ್ಕೆ ಅನಾರೋಗ್ಯದ ಕಾರಣ ಹಿಂದೇಟು ಹಾಕಿದ್ದಾರೆ. ಹೊಸ ಸಿನಿಮಾಗಳಿಗೆ ಸ್ವಲ್ಪ ತಡೆ ನೀಡಿದ್ದು, ವೇತರಿಕೆಯ ಬಳಿಕ ಮತ್ತೆ ಆಕ್ಟೀವ್ ಆಗಲಿದ್ದಾರೆ. ಹೀಗಾಗಿಯೇ ಅವರ ಅಭಿಮಾನಿ ಬಳಗ ಕೂಡ ಬೇಗ ಹುಷಾರಾಗಿ ಶಿವಣ್ಣ ಅಂತಿದ್ದಾರೆ.

Advertisement
Tags :
bengaluruchitradurgakannadaKannadaNewsshivaraj kumarsuddionesuddionenewstirupatiTirupati Americaಅಮೆರಿಕಾಕನ್ನಡಕನ್ನಡವಾರ್ತೆಕನ್ನಡಸುದ್ದಿಚಿತ್ರದುರ್ಗತಿರುಪತಿನಟ ಶಿವರಾಜ್ ಕುಮಾರ್ಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article