Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಶಿವಮೊಗ್ಗ ಗಲಾಟೆ : ಬಾಣಂತಿ, ಹಸುಗೂಸು ಸಹಾಯಕ್ಕೆ ಬಾರದ ಜನ..!

11:43 AM Oct 03, 2023 IST | suddionenews
Advertisement

 

Advertisement

ಶಿವಮೊಗ್ಗ: ಈದ್ ಮಿಲಾದ್ ಆಚರಣೆ ವೇಳೆ ನಡೆದ ಗಲಭೆಗೆ ಶಿವಮೊಗ್ಗದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಸದ್ಯಕ್ಕೆ ಶಿವಮೊಗ್ಗವನ್ನು ಹತೋಟಿಗೆ ತಂದಿದ್ದಾರೆ. ನಿಶ್ಯಬ್ದವಾಗಿದೆ. ಆದರೆ ಅಂದು ಮೆರವಣಿಗೆ ವೇಳೆ ಬಾಣಂತಿಯ ಮನೆಯ ಮೇಲೂ ದಾಳಿ ನಡೆದಿದೆ‌. ಕೆಲವೊಂದು ಮನೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಬಾಣಂತಿಯ ಮನೆಯೂ ಒಂದು ಎನ್ನಲಾಗಿದೆ.

 

Advertisement

ರಾಗಿಗುಡ್ಡದಲ್ಲಿ ಒಂದು ಹಸುಗೂಸು, ಬಾಣಂತಿ ಇರುವ ಮನೆಯ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ. ಈ ವೇಳೆ ಬಾಣಂತಿಯ ಮನೆಯವರು ಗಾಬರಿಯಾಗಿದ್ದರಂತೆ. ಕಿಟಕಿ, ಗಾಜುಗಳನ್ನು ಒಡೆದು ಹಾಕಿದ್ದ ಮುಷ್ಕರ್ಮಿಗಳು, ಒಳಗೆ ನುಗ್ಗುವುದಕ್ಕೂ ಪ್ರಯತ್ನ ಪಟ್ಟಿದ್ದರಂತೆ. ಹೀಗಾಗಿ ಮನೆಯೊಳಗೆ ಇದ್ದವರು ಗಾಬರಿಯಾಗಿದ್ದರಂತೆ. ಅಂದು ಇಡೀ ಶಿವಮೊಗ್ಗದಲ್ಲಿಯೇ ಗಲಭೆಯ ವಾತಾವರಣ ನಿರ್ಮಾಣವಾಗಿತ್ತು. ಹಲವರಿಗೆ ಗಂಭೀರ ಗಾಯವೂ ಆಗಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಂದಿನ ಭಯದ ಬಗ್ಗೆ ವ್ಯಕ್ತಿಯೊಬ್ಬರು ಹೇಳಿಕೊಂಡಿದ್ದು, ನಮ್ಮ‌ ಅಕ್ಕಪಕ್ಕದಲ್ಲಿ ಅನ್ಯಕೋಮಿನ ಜನ ಇದ್ದರು. ನಮಗೆ ತೀರಾ ಪರಿಚಯಸ್ಥರೇ. ಆದರೆ ಅಂದು ನಮ್ಮ ಸಹಾಯಕ್ಕೆ ಬರಲಿಲ್ಲ. ಅಲ್ಲದೆ ಅಂದು ಅವರ ಮನೆ ಮೇಲೆ ಯಾವುದೇ ರೀತಿಯ ದಾಳಿ ಮಾಡದೆ ನಮಗೆ ಮಾತ್ರ ತೊಂದರೆ ಕೊಟ್ಟಿದ್ದಾರೆ. ಒಂದು ತಿಂಗಳ ಮಗು ಮನೆಯಲ್ಲಿತ್ತು. ಕಫ ಕಟ್ಟಿಕೊಂಡರು ಕೂಡ ಅದಕ್ಕೆ ಆಸ್ಪತ್ರೆಗೆಂದು ಹೊರಗೆ ಕರೆದುಕೊಂಡು ಹೋಗುವುದಕ್ಕೂ ಭಯವಾಗುತ್ತಿತ್ತು ಎಂದಿದ್ದಾರೆ.

ಶಿವಮೊಗ್ಗದ ಗಲಭೆಗೆ ಸಂಬಂಧಿಸಿದಂತೆ ಹಲವರು ಗಾಯಗೊಂಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಾಜಿ ಸಚಿವ ಈಶ್ವರಪ್ಪ ಆಸ್ಪತ್ರೆಗೆ ಭೇಟಿ ನೀಡಿ, ಅವರ ಆರೋಗ್ಯ ವಿಚಾರಿಸಿಕೊಂಡು ಬಂದಿದ್ದಾರೆ. ಈ ವೇಳೆ ಗಲಭೆಕೋರರ ಬಗ್ಗೆ ಆಕ್ರೋಶವನ್ನು ಹೊರ ಹಾಕಿದ್ದರು.

Advertisement
Tags :
Shivamoggasuddioneಗಲಾಟೆಬಾಣಂತಿಶಿವಮೊಗ್ಗಸಹಾಯಸುದ್ದಿಒನ್ಹಸುಗೂಸು
Advertisement
Next Article