For the best experience, open
https://m.suddione.com
on your mobile browser.
Advertisement

ಲೀಲಾವತಿ ಮನೆಗೆ ಶಿವ ರಾಜ್‍ಕುಮಾರ್ ಭೇಟಿ : ಪಾರ್ವತಮ್ಮ ಅವರನ್ನು ನೆನೆದ ಶಿವಣ್ಣ

05:25 PM Nov 28, 2023 IST | suddionenews
ಲೀಲಾವತಿ ಮನೆಗೆ ಶಿವ ರಾಜ್‍ಕುಮಾರ್ ಭೇಟಿ   ಪಾರ್ವತಮ್ಮ ಅವರನ್ನು ನೆನೆದ ಶಿವಣ್ಣ
Advertisement

ಹಿರಿಯ ನಟಿ ಲೀಲಾವತಿ ಅವರ ಆರೋಗ್ಯ ದಿನೇ ದಿನೇ ಕ್ಷೀಣಿಸುತ್ತಾ ಇದೆ. ಹೀಗಾಗಿ ಸ್ಯಾಂಡಲ್ ವುಡ್ ನಟ - ನಟಿಯರೆಲ್ಲಾ ಭೇಟಿ ನೀಡಿ, ಆರೋಗ್ಯ ವಿಚಾರಿಸಿಕೊಂಡು ಬರುತ್ತಿದ್ದಾರೆ. ಮೊನ್ನೆಯೆಲ್ಲಾ ದರ್ಶನ್, ಅರ್ಜುನ್ ಸರ್ಜಾ ಭೇಟಿ ನೀಡಿದ್ದರು‌. ಇಂದು ಹ್ಯಾಟ್ರಿಕ್ ಹೀರೋ ಶಿವ ರಾಜ್‍ಕುಮಾರ್ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದಾರೆ.

Advertisement

ಹಿರಿಯ ನಟಿ ಲೀಲಾವತಿ ಅವರು ತಮ್ಮ ಮಗನ ಜೊತೆಗೆ ಬೆಂಗಳೂರು ಹೊರವಲಯದ ಸೋಲದೇವನಹಳ್ಳಿಯಲ್ಲಿ ವಾಸವಾಗಿದ್ದಾರೆ. ಅಲ್ಲಿನ ಜನರಿಗೆ ಅನುಕೂಲವಾಗುವಂತೆ ಆಸ್ಪತ್ರೆಗಳನ್ನು ಕಟ್ಟಿಸಿ, ಸಮಾಜಸೇವೆ ಮಾಡುತ್ತಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದು, ಇಂದು ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರು ಭೇಟಿ, ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

Advertisement

ಈ ವೇಳೆ ಮಾತನಾಡಿದ ನಟ ಶಿವರಾಜ್ ಕುಮಾರ್, ನನ್ನ ವಾಯ್ಸ್ ಕೇಳಿ ಕಂಡು ಹಿಡಿದರು. ಈ ವಯಸ್ಸಿನಲ್ಲಿ ತಾಳುವಂತ ಶಕ್ತಿ ಅವರಲ್ಲಿ ಇದೆ. ಯೋಗ ಪುರುಷರು ಅವರು. ಒಳ್ಳೆಯ ಮನಸ್ಸು, ಒಳ್ಳೆಯ ಆತ್ಮೀಯತೆ, ಪ್ರೀತಿ, ಆಶೀರ್ವಾದವಿದೆ. ಲೀಲಾವತಿ ಅವರನ್ನು ನೋಡಿದರೆ ನನ್ನ ತಾಯಿ ನೋಡೊದಂತೆಯೇ ಆಗುತ್ತದೆ. ಅವರು ಇನ್ನು ಇರಬೇಕು. ನೋವಾಗುತ್ತದೆ, ಆದರೆ ತಡೆದುಕೊಳ್ಳಬೇಕು ಎಂದು ವಿನೋದ್ ರಾಜ್ ಅವರಿಗೆ ಧೈರ್ಯ ತುಂಬಿದ್ದಾರೆ.

Advertisement

Advertisement
Advertisement
Advertisement
Tags :
Advertisement