Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಎಲ್ಲಾ‌ ಮಾದರಿಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಶಿಖರ್ ಧವನ್ ಅವರನ್ನ ಮಿಸ್ಟರ್ ICC ಅನ್ನೋದೇಕೆ..?

12:45 PM Aug 24, 2024 IST | suddionenews
Advertisement

ಟೀ ಇಂಡಿಯಾದ ದಿಗ್ಗಜ ಬ್ಯಾಟ್ಸ್‌ಮನ್ ಅಂತರಾಷ್ಟ್ರೀಯ ಕ್ರಿಕೆಟ್ ಹಾಗೂ ದೇಶೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಬೆಳ್ಳಂ ಬೆಳಗ್ಗೆಯೇ ಈ ಸುದ್ದಿ ಕ್ರಿಕೆಟ್ ಪ್ರಿಯರ ತಲೆ ಕೆಡಿಸಿತ್ತು. ಶಿಖರ್ ಧವನ್ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದರು. ಶಿಖರ್ ಧವನ್ 38 ವರ್ಷಕ್ಕೆ ನಿವೃತ್ತಿ ಘೋಷಿಸಿದ್ದಾರೆ.

Advertisement

ಶಿಖರ್ ಧವನ್ ಟೀಂ ಇಂಡಿಯಾದಲ್ಲಿ ದೀರ್ಘಕಾಲ ಕಾಣಿಸಿಕೊಂಡಿರಲಿಲ್ಲ. 2018ರಲ್ಲಿ ಕೊನೆಯ ಟೆಸ್ಟ್, 2022ರಲ್ಲಿ ಕೊನೆಯ ODI ಮತ್ತು 2021ರಲ್ಲಿ ಕೊನೆಯ T20 ಅಂತರಾಷ್ಟ್ರೀಯ ಪಂದ್ಯವನ್ನ ಆಡಿದ್ದರು. ಶಿಖರ್ ಧವನ್ ಇನ್ಮುಂದೆ ಐಪಿಎಲ್ ನಲ್ಲಿಯೂ ಆಡಲ್ಲ. ಎಲ್ಲಾ ಮಾದರಿಯ ಕ್ರಿಕೆಟ್ ಗೂ ಗುಡ್ ಬೈ ಹೇಳಿದ್ದಾರೆ. ಇದೇ ವೇಳೆ ಬಿಸಿಸಿಐ ಹಾಗೂ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಧವನ್ ಅವರನ್ನು ಮಿಸ್ಟರ್ ಐಸಿಸಿ ಅನ್ನೋದೇಕೆ ಗೊತ್ತಾ..? 2013ರಲ್ಲಿ ನಡೆದ ICC ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತಕ್ಕೆ ಹೆಚ್ಚಿನ ರನ್‌ಗಳ ಕಾಣಿಕೆ ನೀಡಿದ್ದಾರೆ. 2015ರಲ್ಲಿ ICC ODI ಕಪ್ ನಲ್ಲಿ ಭಾರತಕ್ಕಾಗಿ ಹೆಚ್ಚಿನ ರನ್ ಗಳ ಕಾಣಿಕೆಯನ್ನು ನೀಡಿದ್ದಾರೆ. 2017ರಲ್ಲಿ ICC ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತಕ್ಕಾಗಿ ಹೆಚ್ಚಿನ ರನ್ ತಂದಿದ್ದಾರೆ. ಏಷ್ಯಾ ಕಪ್ 2018ರಲ್ಲಿಯೂ ಭಾರತಕ್ಕಾಗಿ ಹೆಚ್ಚಿನ ರನ್ ತಂದವರು. ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಒಟ್ಟು 10,867 ರನ್ ಗಳನ್ನು ಬಾರಿಸಿದ್ದಾರೆ. ICC ODI ಪಂದ್ಯಾವಳಿಗಳಲ್ಲಿ ಶಿಖರ್ ಧವನ್ ಅದ್ಭುತ ರೆಕಾರ್ಡ್ ಮಾಡಿದ್ದಾರೆ. ಇತ್ತೀಚೆಗೆ ಟೀಂ ಇಂಡಿಯಾದಲ್ಲಿ ಹೆಚ್ಚು ಕಾಣಿಸಿಕೊಳ್ಳದೆ ಇರುವ ಶಿಖರ್ ಧವನ್, ಇಂದು ಎಲ್ಲಾ ರೀತಿಯ ಪಂದ್ಯಗಳಿಗೂ ನಿವೃತ್ತಿ ಘೋಷಿಸಿದ್ದಾರೆ.

Advertisement

Advertisement
Tags :
all forms of cricketbengaluruchitradurgacricketGOODBYEShikhar Dhawansuddionesuddione newsಕ್ರಿಕೆಟ್ಗುಡ್ ಬೈಚಿತ್ರದುರ್ಗಬೆಂಗಳೂರುಮಿಸ್ಟರ್ ICCಶಿಖರ್ ಧವನ್‌ಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article