2022ರಿಂದ ಸುಸ್ತಾಗಿದ್ದರು.. 2023ಕ್ಕೆ ಸಂಪೂರ್ಣ ಸುಸ್ತಾಗಿದ್ದರು : ತಾಯಿ ನೆನೆದು ಭಾವುಕರಾದ ವಿನೋದ್ ರಾಜ್
ನೆಲಮಂಗಲ: 85 ವರ್ಷದ ಹಿರಿಯ ನಟಿ ಲೀಲಾವತಿ ಅವರು ವಯೋಸಹಜ ಕಾಯಿಲೆಯಿಂದ ನಿನ್ನೆ ನಿಧನರಾಗಿದ್ದಾರೆ. ಅವರ ಪಾರ್ಥೀವ ಶರೀರವನ್ನು ಸೋಲದೇವನಹಳ್ಳಿಯ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ಮಧ್ಯಾಹ್ನದ ತನಕ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಬಳಿಕ ಅವರ ತೋಟದ ಮನೆಯಲ್ಲಿಯೇ ಅಂತ್ಯ ಸಂಸ್ಕಾರ ನೆರವೇರಲಿದೆ.
ವಿನೋದ್ ರಾಜ್ ಅವರಿಗೆ ತಾಯಿ ಮೇಲೆ ಅದೆಷ್ಟು ಪ್ರೀತಿ, ಗೌರವ ಎಂಬುದನ್ನು ಬಾಯಿ ಬಿಟ್ಟು ಹೇಳುವ ಹಂಗಿಲ್ಲ. ಅದನ್ನ ಇಡೀ ರಾಜ್ಯವೇ ನೋಡಿದೆ. ತಾಯಿಗಾಗಿ ಸೋಲದೇವನಹಳ್ಳಿಯಲ್ಲಿಯೇ ಜೀವನ ಮುಂದುವರೆಸಿದ್ದಾರೆ. ತಾಯಿಯ ಜೊತೆಗೆ ಸದಾ ಇರುತ್ತಿದ್ದರು. ಈಗ ಪ್ರೀತಿಯ ತಾಯಿಯನ್ನು ಕಳೆದುಕೊಂಡು ದುಃಖದಲ್ಲಿದ್ದಾರೆ. ಈ ನೋವಿನಲ್ಲಿ ತಾಯಿಯ ಬಗ್ಗೆ ಮಾತನಾಡಿದ್ದಾರೆ.
'2022ರಲ್ಲಿಯೇ ಸುಸ್ತಾಗಿದ್ದರು. 2023ಕ್ಕೆ ಸಂಪೂರ್ಣವಾಗಿ ಸುಸ್ತಾಗಿ ಬಿಟ್ಟರು. ತಮ್ಮ ಜೀವವನ್ನು ಪಶು ಆಸ್ಪತ್ರೆಗಾಗಿ ಮುಡಿಪಾಗಿಟ್ಟಿದ್ದರು. ಹದಿನೈದು ದಿನ ಆಮೇಲೆ ಹೊರಟೆ ಬಿಟ್ಟರು. ಅವರ ಜೀವನ ಸಂತೃಪ್ತಿಯೊಂದಿಗೆ ಹೊರಟಿದ್ದಾರೆ. ಉಳಿದ ಜವಬ್ದಾರಿಯನ್ನು ನನ್ನ ಕೈಯಲ್ಲಿ ಕೊಟ್ಟಿದ್ದಾರೆ. ಅವೆಲ್ಲವನ್ನು ಈಗ ನಾನು ನೆರವೇರಿಸುತ್ತೇನೆ. ಕೊನೆ ಘಳಿಗೆಯಲ್ಲಿ ಬಾಯಿಗೆ ನೀರು ಬಿಟ್ಟೆ, ಜುಡೀತಾ ಕುಡೀತಾನೆ ಪ್ರಾಣ ಬಿಟ್ಟರು. ತಾಯಿ ಶ್ರೇಷ್ಠಾ ಜೀವ. ಆ ಸ್ಥಾನವನ್ನು ಯಾರಿಂದಾನು ತುಂಬುವುದಕ್ಕೆ ಆಗಲ್ಲ ಎಂದು ಕಣ್ಣೀರು ಹಾಕಿದ್ದಾರೆ.
ನಟಿ ಲೀಲಾವತಿ ಅವರ ಅಂತಿಮ ದರ್ಶನಕ್ಕೆ ಸ್ಯಾಂಡಲ್ ವುಡ್ ತಾರೆಯರೆಲ್ಲ ಆಗಮಿಸಿದ್ದಾರೆ. ಅಂತಿಮ ದರ್ಶನ ಪಡೆದು ಅವರೊಂದಿಗಿನ ನಂಟಿನ ಬಗ್ಗೆ ಮನಬಿಚ್ಚಿ ಮಾತನಾಡುತ್ತಿದ್ದಾರಡ. ಅವರ ಜೊತೆಗಿನ ಒಡನಾಟದ ಬಗ್ಗೆ ಹಂಚಿಕೊಂಡಿದ್ದಾರೆ.