ರಾಮಲಲ್ಲಾ ಮೂರ್ತಿಗೆ ನಾಳೆ ದೃಷ್ಟಿ ನೀಡುವ ಶಾಸ್ತ್ರ : ದೃಷ್ಟಿ ಏರುಪೇರಾದರೆ ದೇಶಕ್ಕೆ, ಕುಟುಂಬಕ್ಕೆ ಪೆಟ್ಟು : ಶಿಲ್ಪಿಯ ಮಾವ ಹೇಳಿದ್ದೇನು..?
ಮೈಸೂರು: ಇಡೀ ವಿಶ್ವದ ಹಿಂದೂಗಳು ಕಾಯುತ್ತಿರುವಂತ ಸುಧಿನಕ್ಕೆ ಕ್ಷಣಗಣನೆ ಶುರುವಾಗಿದೆ. ರಾಮಲಲ್ಲಾ ಮೂರ್ತಿಯನ್ನು ಕಣ್ತುಂಬಿಕೊಳ್ಳಲು ಕೆಲವೇ ಗಂಟೆಗಳು ಬಾಕಿ. ನಾಳೆ ಬಾಲ ರಾಮನಿಗೆ ನಾಳೆ ಪ್ರಾಣ ಪ್ರತಿಷ್ಠಾಪನೆಯಾಗಲಿದೆ. ಈ ವೇಳೆ ದೃಷ್ಟಿ ನೀಡುವ ಶಾಸ್ತ್ರವೂ ನಡೆಯಲಿದೆ. ಈ ವೇಳೆ ಶಿಲ್ಪಿ ಅರುಣ್ ಯೋಗಿರಾಜ್ ಬಹಳ ಎಚ್ಚರದಿಂದ ಇರಬೇಕಾಗುತ್ತದೆ. ಹೀಗಾಗಿ ಎಲ್ಲರ ಚಿತ್ತ ಅರುಣ್ ಯೋಗಿರಾಜ್ ಅತ್ತ ನೆಟ್ಟಿದೆ.
ಬಾಲ ರಾಮನಿಗೆ ದೃಷ್ಟಿ ನೀಡುವಾಗ ಬಹಳ ಎಚ್ಚರದಿಂದ ಇರಬೇಕಾಗುತ್ತದೆ. ಸ್ವಲ್ಪವೂ ಏರುಪೇರಾಗಬಾರದು. ಈ ಬಗ್ಗೆ ಅರುಣ್ ಯೋಗಿರಾಜ್ ಮಾವ ಪ್ರೋ. ಲಕ್ಷ್ಮೀ ನಾರಾಯಣ್ ಮಾತನಾಡಿದ್ದಾರೆ. ಕಣ್ಣು ದೃಷ್ಟಿ ನೀಡುವಾಗ ಬಹಳ ಎಚ್ಚರದಿಂದ ಇರಬೇಕಾಗುತ್ತದೆ. ಮೂರ್ತಿಯ ಕಣ್ಣು ಕೆಳಕ್ಕೆ ಇಳಿದರೆ ಶಿಲ್ಪಿ ಹಾಗೂ ಅವರ ಕುಟುಂಬಕ್ಕೆ ಅಪಾಯವಿದೆ. ಮೂರ್ತಿಯ ಕಣ್ಣು ಮೇಲಕ್ಕೆ ಹೋದರೆ ದೇಶಕ್ಕೆ ಕೆಡುಕಾಗಲಿದೆ. ಹೀಗಾಗಿ ದೃಷ್ಟಿ ನೇರವಾಗಿ ಬೀಳುವಂತೆ ಎಚ್ಚರವಹಿಸಿ ದೃಷ್ಟಿ ಇಡಬೇಕಾಗುತ್ತದೆ ಎಂದಿದ್ದಾರೆ.
ಇದೇ ವೇಳೆ ಬಾಲರಾಮನ ಮೂರ್ತಿ ವೈರಲ್ ಆಗಿರುವ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದು, ಬಾಲರಾಮನ ಮೂರ್ತಿಯ ಫೋಟೋ ವೈರಲ್ ಆಗಿದ್ದು ಕುಟುಂಬದವರಿಗೇನೆ ಆತಂಕವಿದೆ. ಈ ಫೋಟೋವನ್ನು ಪ್ರಧಾನಿ ಮೋದಿ ಅವರು ಬಿಡುಗಡೆ ಮಾಡಬೇಕಿತ್ತು. ಆದರೆ ಅದಕ್ಕೂ ಮೊದಲೇ ಬಿಡುಗಡೆಯಾಗಿದ್ದು ಬೇಸರ ತಂದಿದೆ. ಮೂರ್ತಿಯ ಕಣ್ಣು ಇನ್ನು ತೆರೆದಿಲ್ಲ. ನಾಳೆ ಕಣ್ಣು ತೆರೆದ ಮೂರ್ತಿಯನ್ನು ಇಡೀ ಜಗತ್ತು ನೋಡಲಿದೆ ಎಂದಿದ್ದಾರೆ.
ಅಯೋಧ್ಯೆಯಲ್ಲಿ ಈಗಾಗಲೇ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಪ್ರಧಾನಿ ಮೋದಿ ಅವರು ರಾಮ ಮಂದಿರ ಉದ್ಘಾಟನೆ ಮಾಡಿ, ರಾಮಲಲ್ಲಾ ಮೂರ್ತಿಯ ಪೂಜೆ ಮಾಡಲು, ಕಠಿಣ ವ್ರತ ಮಾಡುತ್ತಿದ್ದಾರೆ. ನಾಳೆ ಇಷ್ಟು ವರ್ಷಗಳ ಕಾದ ಕನಸು ನನಸಾಗಲಿದೆ.