For the best experience, open
https://m.suddione.com
on your mobile browser.
Advertisement

ಶಾರುಖ್‌ ಖಾನ್ ನಟನೆಯ 'ಡಂಕಿ'ಗೆ ಸಿಕ್ತಿದೆ ಫುಲ್ ಮಾರ್ಕ್ಸ್ : ಹೇಗಿದೆ ಸಿನಿಮಾ..?

09:19 PM Dec 21, 2023 IST | suddionenews
ಶಾರುಖ್‌ ಖಾನ್ ನಟನೆಯ  ಡಂಕಿ ಗೆ ಸಿಕ್ತಿದೆ ಫುಲ್ ಮಾರ್ಕ್ಸ್   ಹೇಗಿದೆ ಸಿನಿಮಾ
Advertisement

Advertisement
Advertisement

ಇಂದು ಶಾರುಖ್ ಖಾನ್ ನಟನೆಯ 'ಡಂಕಿ' ಸಿನಿಮಾ ರಿಲೀಸ್ ಆಗಿದೆ. ಬಾಲಿವುಡ್ ಬಾದ್ ಶಾ ಇದೇ ವರ್ಷ ಅದಾಗಲೇ ಎರಡು ಬ್ಲಾಕ್ ಬಸ್ಟರ್ ಹಿಟ್ ನೀಡಿದ್ದಾರೆ. 'ಜವಾನ್' ಮತ್ತು 'ಪಠಾಣ್' ಸಿನಿಮಾ ಮೂಲಕ. ಸೋಲಿನ ಸುಳಿಯಲ್ಲಿದ್ದ ಶಾರುಖ್ ಖಾನ್ ಗೆ ಒಳ್ಳೆಯ ಬ್ರೇಕ್ ನೀಡಿದ್ದು ಇದೇ ವರ್ಷ. ಇದೀಗ ವರ್ಷದ ಕೊನೆಯಲ್ಲಿ ರಿಲೀಸ್ ಆದ 'ಡಂಕಿ' ಕೂಡ ಎಲ್ಲರ ಗಮನ ಸೆಳೆಯುತ್ತಿದೆ.

Advertisement

'ಡಂಕಿ' ಸಿನಿಮಾದಲ್ಲಿ ಪಂಜಾಬ್ ಪ್ರಾಂತ್ಯವನ್ನು ಪ್ರಮುಖವಾಗಿ ತೆಗೆದುಕೊಳ್ಳಲಾಗಿದೆ. ಮೂವರು ವ್ಯಕ್ತಿಗಳು ಲಂಡನ್ ಗೆ ಹೋಗಬೇಕೆಂಬ ಆಸೆಯಿಂದ ಇರುತ್ತಾರೆ. ಆದರೆ ಹಲವು ಸಮಸ್ಯೆಗಳು ಅವರಿಗೆ ಇರುತ್ತವೆ. ಆ ಸಮಸ್ಯೆಗಳನ್ನೆಲ್ಲ ಬಗೆಹರಿಸಿ ಶಾರುಖ್ ಖಾನ್, ಅವರನ್ನೆಲ್ಲ ಲಂಡನ್ ಗೆ ಹೇಗೆ ಕಳುಹಿಸುತ್ತಾನೆ ಎಂಬುದೇ ಸಿನಿಮಾ. ಆರಂಭ ಕೊಂಚ ನಿಧಾನವಾಗಿದೆ. ಕಥೆ ತೆರೆದುಕೊಳ್ಳುವುದಕ್ಕೆ ಸಮಯ ಹಿಡಿಯುತ್ತದೆ. ಜೊತೆಗೆ ಕಳ್ಳ ಮಾರ್ಗದ ಮೂಲಕ ಲಂಡನ್‌ಗೆ ತಲುಪುವ ಹಾದಿಯಲ್ಲಿ ಒಂದಷ್ಟು ಲಾಜಿಕ್ ಇಲ್ಲದ ದೃಶ್ಯಗಳಿವೆ.

Advertisement
Advertisement

ರಾಜ್‌ಕುಮಾರ್ ಹಿರಾನಿ, ಅಭಿಜಾತ್ ಜೋಷಿ, ಕನ್ನಿಕಾ ದಿಲ್ಲೋನ್ ಅವರ ಬರವಣಿಗೆ ಸಿನಿಮಾ ಪ್ರಿಯರನ್ನು ಸೆಳೆಯುತ್ತದೆ. ಅಮನ್ ಪಂತ್ ಅವರ ಹಿನ್ನೆಲೆ ಸಂಗೀತ, ಛಾಯಾಗ್ರಹಣ, ಕಲಾವಿದರ ನಟನೆ ಎಲ್ಲವೂ ಸೊಗಸಾಗಿದೆ. ಭಾವುಕ ದೃಶ್ಯಗಳು ನಿಜಕ್ಕೂ ಪ್ರೇಕ್ಷಕರ ಕಣ್ಣು ಒದ್ದೆ ಮಾಡುತ್ತವೆ. ಕಥೆಯಲ್ಲಿನ ಟ್ವಿಸ್ಟ್‌ಗಳು ಚೆನ್ನಾಗಿವೆ. ತಾಪ್ಸೀ ಪನ್ನು , ವಿಕ್ರಮ್ ಕೊಚ್ಚರ್, ಅನಿಲ್ ಗ್ರೋವರ್‌ ಅದ್ಭುತವಾಗಿ ನಟಿಸಿದ್ದಾರೆ. ಸಿನಿಮಾದ ಚಿತ್ರಕಥೆಯ ವೇಗ ಹೆಚ್ಚಿಸುವಲ್ಲಿ ವಿಕ್ಕಿ ಕೌಶಲ್‌ ಪಾತ್ರ ಸಹಕಾರಿಯಾಗಿದೆ. ಸಿನಿಮಾ ನೋಡಿದವರು ಶಾರೂಖ್ ಖಾನ್ ಗೆ ಬಹುಪರಾಕ್ ಹಾಕುತ್ತಿದ್ದಾರೆ.

Advertisement
Tags :
Advertisement