ವಾಹನ ಸವಾರರೆ ಸೆಪ್ಟೆಂಬರ್ 15 ಲಾಸ್ಟ್ ಡೇಟ್ : HSRP ಅಳವಡಿಸಿಕೊಳ್ಳದಿದ್ರೆ ದಂಡ ಗ್ಯಾರಂಟಿ..!
ಬೆಂಗಳೂರು: ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್ ಒಂದು ಸಿಕ್ಕಿದೆ. ತಮ್ಮ ಗಾಡಿಗಳಿಗೆ HSRP ಪ್ಲೇಟ್ ಅಳವಡಿಕೆಗೆ ಇನ್ನಷ್ಟು ಸಮಯ ಸಿಗಬಹುದೇನೋ ಅಂತ ಕಾಯುತ್ತಾ ಇದ್ರು. ಆದ್ರೆ ಈಗ ಅದಕ್ಕೆ ಎಕ್ಸ್ ಕ್ಯೂಸ್ ಸಿಗುವ ಸಾಧ್ಯತೆ ಕಡಿಮೆಯಾಗಿದೆ. ರಿಲೀಫ್ ಕೊಡುವ ಲೆಕ್ಕಚಾರದಲ್ಲಿ ಸಾರಿಗೆ ಇಲಾಖೆ ಇಲ್ಲ. ಡೆಡ್ ಲೈನ್ ನೀಡಿದ್ದು, ಸೆಪ್ಟೆಂಬರ್ 15ರ ಒಳಗೆ ಅಳವಡಿಕೆ ಮಾಡಿಕೊಳ್ಳದೆ ಹೋದರೆ ಭಾರೀ ಪ್ರಮಾಣದ ದಂಡ ಕಟ್ಟಬೇಕಾಗುತ್ತದೆ. ಹೆಚ್ಎಸ್ಆರ್ಪಿ ನಂಬರ್ ಅಳವಡಿಸಿಕೊಳ್ಳದೆ ಇರುವವರಿಗೆ ಸಾರಿಗೆ ಇಲಾಖೆ ಎಚ್ಚರಿಕೆಯನ್ನು ನೀಡಿದೆ.
ಸೆಪ್ಟೆಂಬರ್ 15ರ ನಂತರ ಪರೀಕ್ಷೆ ಮಾಡಲಾಗುತ್ತದೆ. ಒಂದು ವೇಳೆ ನಿಮ್ಮ ಗಾಡಿಗಳಲ್ಲಿ ಹೆಚ್ಎಸ್ಆರ್ಪಿ ಪ್ಲೇಟ್ ಗಳು ಇಲ್ಲದೆ ಇದ್ದರೆ ದಂಡ ಬೀಳೋದು ಗ್ಯಾರಂಟಿಯಾಗಿದೆ. ನಿಮ್ಮ ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಅಳವಡಿಕೆಗೆ ಇನ್ನು ಐದು ಅಷ್ಟೇ ಕಾಲಾವಕಾಶವಿದೆ. ಅಷ್ಟರೊಳಗೆ ಹೆಚ್ಎಸ್ಆರ್ಪಿ ಪ್ಲೇಟ್ ಅನ್ನು ನಿಮ್ಮ ಗಾಡಿಗಳಿಗೆ ಹಾಕಿಸಿಕೊಳ್ಳಿ. ಇಲ್ಲವಾದರೆ ದಂಡ ಕಟ್ಟುವುದಕ್ಕೆ ರೆಡಿಯಾಗಿರಿ.
2019 ಏಪ್ರಿಲ್ 1ಕ್ಕಿಂತ ಮೊದಲು ನೋಂದಣಿಯಾದ ಗಾಡಿಗಳಿಗೆ ಈ ನಿಯಮ ಅನ್ವಯಿಸುತ್ತದೆ. ಆ ಗಾಡಿ ಮಾಲೀಕರು ಪ್ಲೇಟ್ ಅನ್ನು ಹಾಕಿಸಲೇಬೇಕಾಗಿದೆ. ಇಲ್ಲಿಯವರೆಗೂ ಕೇವಲ 50 ಲಕ್ಷ ವಾಹನ ಸವಾರರು ಮಾತ್ರ ಹೆಚ್ಎಸ್ಆರ್ಪಿ ಪ್ಲೇಟ್ ಅನ್ನು ಅಳವಡಿಕೆ ಮಾಡಿದ್ದಾರೆ. ಇನ್ನೂ 1.4 ಕೋಟಿ ವಾಹನ ಸವಾರರು ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅನ್ನು ಹಾಕಿಸಿಕೊಳ್ಳಬೇಕಿದೆ. ಈಗಾಗಲೇ ಪ್ಲೇಟ್ ಅಳವಡಿಕೆಗೆ ಗಡುವು ನೀಡಲಾಗಿತ್ತು. ಆದರೆ ಇನ್ಮುಂದೆ ಅವಧಿ ವಿಸ್ತರಣೆ ಮಾಡಲ್ಲ ಎಂಬುದನ್ನು ಇಲಾಖೆ ಸ್ಪಷ್ಟಪಡಿಸಿದೆ. ಹೀಗಾಗಿ ಇನ್ನೈದು ದಿನದಲ್ಲಿ ಹಾಕಿಸಿಕೊಳ್ಳಬೇಕಾದ ಟೆನ್ಶನ್ ವಾಹನ ಸವಾರರದ್ದಾಗಿದೆ.