For the best experience, open
https://m.suddione.com
on your mobile browser.
Advertisement

ಸ್ಯಾಂಡಲ್ ವುಡ್ ಹಿರಿಯ ನಟಿ ಹೇಮಾ ಚೌಧರಿ ಸ್ಥಿತಿ ಗಂಭೀರ : ಇದ್ದಕ್ಕಿದ್ದಂತೆ ಏನಾಯ್ತು..?

01:14 PM Dec 20, 2023 IST | suddionenews
ಸ್ಯಾಂಡಲ್ ವುಡ್ ಹಿರಿಯ ನಟಿ ಹೇಮಾ ಚೌಧರಿ ಸ್ಥಿತಿ ಗಂಭೀರ   ಇದ್ದಕ್ಕಿದ್ದಂತೆ ಏನಾಯ್ತು
Advertisement

Advertisement
Advertisement

ಸ್ಯಾಂಡಲ್ ವುಡ್ ಹಿರಿಯ ನಟಿ ಹೇಮಾ ಚೌಧರಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಸ್ಥಿತಿ ಗಂಭೀರವಾಗಿದೆ ಎನ್ನಲಾಗುತ್ತಿದೆ. ಬೆಂಗಳೂರಿನ ಬ್ಯಾಪಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದೇ ಹೇಳಲಾಗುತ್ತಿದೆ.

Advertisement

ನಟಿ ಹೇಮಾ ಚೌಧರಿ ಬ್ರೈನ್ ಹ್ಯಾಮರೇಜ್ ನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದು, ಐಸಿಯೂ ಘಟಕದಲ್ಲಿದ್ದಾರೆ. ಕಳೆದ ಎರಡು ದಿನದ ಹಿಂದಷ್ಟೇ ಬ್ರೈನ್ ಹ್ಯಾಮರೇಜ್ ಇರುವುದು ಗೊತ್ತಾಗಿದೆ. ಸದ್ಯ ಚಿಕಿತ್ಸೆ ಮುಂದುವರೆಸಿದ್ದಾರೆ. ಆದರೆ ಸ್ಥಿತಿ ಗಂಭೀರವಾಗಿದೆ ಎಂದೇ ಹೇಳಲಾಗುತ್ತಿದೆ. ಹೇಮಾ ಚೌಧರಿ ಮಗ, ಐರ್ಲ್ಯಾಂಡ್ ನಲ್ಲಿ ಇದ್ದು, ಅವರ ಬರುವುಕೆಗಾಗಿ ವೈದ್ಯರು ಕಾಯುತ್ತಿದ್ದಾರಂತೆ.

Advertisement
Advertisement

ಹೇಮಾ ಚೌಧರಿ ಸಿನಿಮಾ, ಧಾರಾವಾಹಿಗಳ ಮೂಲಕ ಖಳ ನಟಿಯಾಗಿ ಅಬ್ಬರಿಸಿದ್ದರು. ಸುಮಾರು 180ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಸೇರಿದಂತೆ ತೆಲುಗು, ಮಲಯಾಳಂ, ತಮಿಳು ಸಿನಿಮಾಗಳಲ್ಲೂ ಗುರುತಿಸಿಕೊಂಡಿದ್ದಾರೆ. ಇತ್ತಿಚೆಗಷ್ಟೇ ನಿಧನರಾದ ಲೀಲಾವತಿ ಅವರ ಸಾವಿಗೂ ಹೋಗಿ ಬಂದಿದ್ದರು. ವಿನೋದ್ ರಾಜ್ ಅವರಿಗೆ ಧೈರ್ಯದ ಮಾತುಗಳನ್ನು ಹೇಳಿ ಬಂದಿದ್ದರು. ಅದಕ್ಕೂ ಮುನ್ನ ಲೀಲಾವತಿ ಅವರು ಬದುಕಿದ್ದಾಗಲೂ ಅವರ ಜೊತೆಗೆ ಅಮೂಲ್ಯವಾದ ಸಮಯವನ್ನು ಕಳೆದಿದ್ದರು. ಇಂದು ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.

Advertisement
Tags :
Advertisement