Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ವಿರೋಧ ಪಕ್ಷದವರಿಗಿಂತ ಸ್ವಪಕ್ಷದವರಿಂದಾನೇ ಮುಜುಗರ : ಮಾತಾಡದಂತೆ ಎಚ್ಚರಿಕೆ ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್

05:45 PM Oct 21, 2023 IST | suddionenews
Advertisement

 

Advertisement

ಬೆಂಗಳೂರು: ರಾಜ್ಯದಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಉತ್ತಮ ಆಡಳಿತ ನಡೆಸುತ್ತಿದೆ. ಸದ್ಯಕ್ಕೆ ಅವರ‌ಮುಂದಿರುವ ಟಾರ್ಗೆಟ್ ಲೋಕಸಭಾ ಚುನಾವಣೆ. ಇದಕ್ಕಾಗಿ ಈಗಾಗಲೇ ಬಾರೀ ತಯಾರಿಯನ್ನು ನಡೆಸುತ್ತಿದೆ. ಇದಕ್ಕೆ ವಿರುದ್ಧವಾಗಿ‌ ಬಿಜೆಪಿ ಕೂಡ ಪಣ ತೊಟ್ಟಿದೆ. ಕಾಂಗ್ರೆಸ್ ಸೋಲಿಸಿ, ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಪ್ರತಿಷ್ಠೆ. ಹೀಗಾಗಿ ಆಡಳಿತ ಪಕ್ಷದ ಜುಟ್ಟು ಹಿಡಿಯಲು ಇರುವ ದಾರಿಯನ್ನ ಸ್ವಪಕ್ಷದವರೇ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಡಿಕೆ ಶಿವಕುಮಾರ್ ಎಚ್ಚರಿಕೆಯನ್ನು ರವಾನಿಸಿದ್ದಾರೆ.ಪಲ

ಇತ್ತಿಚೆಗೆ ಸತೀಶ್ ಜಾರಕಿಹೊಳಿ ಪಕ್ಷದ ಬಗ್ಗೆ ಮಾತನಾಡಿದ್ದರು. ಕಾಂಪ್ರೂಮೈಸ್ ಆಗಿದ್ದೇನೆ. ಅದು ನನ್ನ ದೌರ್ಬಲ್ಯ ಅಲ್ಲ ಎಂದು ಡಿಕೆಶಿ ವಿರುದ್ಧ ಹರಿಹಾಯ್ದಿದ್ದರು. ಇನ್ನು ಲಕ್ಷ್ಮೀ ಹೆಬ್ಬಾಳ್ಕರ್ ಕೂಡ, ಬೆಳಗಾವಿಗೆ ಬಂದ ಡಿಸಿಎಂ ಡಿಕೆ ಶಿವಕುಮಾರ್ ಸ್ವಾಗತಕ್ಕೆ ಶಾಸಕರು ಹೋಗಬೇಕಿತ್ತು. ಆದರೆ ನನ್ನ ಮೌನ ದೌರ್ಬಲ್ಯ ಅಲ್ಲ ಅಂತ ಹೇಳಿದ್ದರು. ಈ ಮೂಲಕ ಕಾಂಗ್ರೆಸ್ ವಿರುದ್ಧ ವಿಪಕ್ಷದವರಿಗಿಂತ ಸ್ವಪಕ್ಷದವರೇ ಮಾತನಾಡುತ್ತಿದ್ದರು.

Advertisement

ಈ ಸಂಬಂಧ ಎಚ್ಚರಿಕೆ ನೀಡಿರುವ ಡಿಕೆ ಶಿವಕುಮಾರ್, ಯಾರೂ ಪಕ್ಷದ ಬಗ್ಗೆ ಮಾತನಾಡಬಾರದು. ಬಹಿರಂಗವಾಗಿ ಹೇಳಿಕೆಗಳನ್ನು ನೀಡಬಾರದು. ಮಾತನಾಡಲು ನಾನು ಮತ್ತು ಸಿದ್ದರಾಮಯ್ಯ ಇದ್ದೇವೆ ಎಂದಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆಗೆ ಹೊಡೆತ ಬೀಳುವುದನ್ನು ತಪ್ಪಿಸಿದ್ದಾರೆ. ಸ್ವಪಕ್ಷದವರೇ ಮಾತನಾಡಿದಾಗ ಪಕ್ಷಕ್ಕೆ ಡ್ಯಾಮೇಜ್ ಆಗುವ ಸಾಧ್ಯವಿದೆ.

Advertisement
Tags :
bengaluruDcm dk shivakumarembarrassedfeaturedopposition partiessuddioneಎಚ್ಚರಿಕೆಡಿಸಿಎಂ ಡಿ.ಕೆ.ಶಿವಕುಮಾರ್ಬೆಂಗಳೂರುಮುಜುಗರವಿರೋಧ ಪಕ್ಷಸುದ್ದಿಒನ್ಸ್ವಪಕ್ಷ
Advertisement
Next Article