For the best experience, open
https://m.suddione.com
on your mobile browser.
Advertisement

ಏನು ಇಲ್ಲ ಎಂದವರಿಗೆ ಹನುಮಂತು ಎಂಥಾ ಆಟ ತೋರಿಸಿದ್ರು ನೋಡಿ : 2ನೇ ಸಲ ಕ್ಯಾಪ್ಟನ್.. ಮನೆ ಮಂದಿ ಶಾಕ್..!

08:01 PM Oct 30, 2024 IST | suddionenews
ಏನು ಇಲ್ಲ ಎಂದವರಿಗೆ ಹನುಮಂತು ಎಂಥಾ ಆಟ ತೋರಿಸಿದ್ರು ನೋಡಿ   2ನೇ ಸಲ ಕ್ಯಾಪ್ಟನ್   ಮನೆ ಮಂದಿ ಶಾಕ್
Advertisement

ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಕುರಿಗಾರ್ ಹನುಮಂತು ಬಂದಿರೋದು ನಿಮ್ಗೆಲ್ಲಾ ಗೊತ್ತೆ‌ ಇದೆ. ಪಕ್ಕಾ ಉತ್ತರ ಕರ್ನಾಟದ ಗ್ರಾಮೀಣ ಭಾಗದ ಪ್ರತಿಭೆಯೇ ಸರಿ. ಬಿಗ್ ಬಾಸ್ ಮನೆಯಲ್ಲೂ ಸದಾ ಪಕ್ಕ ಉತ್ತರ ಕರ್ನಾಟಕ ಭಾಷೆಯನ್ನೇ ಮಾತನಾಡುತ್ತಾ, ಎಲ್ಲರನ್ನು ನಕ್ಕಿ ನಲಿಸುತ್ತಾರೆ. ಅದರಲ್ಲೂ ಧನರಾಜ್ ಹಾಗೂ ಹನುಮಂತು ಬೆಸ್ಟ್ ಫ್ರೆಂಡ್ಸ್. ಇಬ್ಬರು ಸೇರಿದ್ರೆ ಒಂದೊಳ್ಳೆ ಕಾಮಿಡಿ ಮಾಡ್ತಾ ಇರ್ತಾರೆ. ಇವರಿಬ್ಬರ ಕಾಂಬಿನೇಷನ್ ಸದ್ಯಕ್ಕೆ ವರ್ಕ್ ಆಗ್ತಾ ಇದೆ.

Advertisement

ಆದರೆ ಹನುಮಂತುನನ್ನು ಮನೆಯಲ್ಲಿ ಎಲ್ಲರೂ ಕಡೆಗಣಿಸುತ್ತಾರೆ. ಹನುಮಂತು ಏನೇನು ಅಲ್ಲ ಎನ್ನುತ್ತಾರೆ. ಬರೀ ಹಾಡೋಳೇದು ಬಿಟ್ರೆ ಏನು ಬರಲ್ಲ ಅನ್ನೋ ತೀರ್ಮಾನಕ್ಕೆ ಬಂದಿದ್ದರು. ಆದರೆ ಆ ಎಲ್ಲಾ ಮಾತುಗಳನ್ನು ಮೀರಿ ಹನುಮಂತು ಇಂದು ಮತ್ತೆ ಕ್ಯಾಪ್ಟನ್ ಆಗಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆಯೊಳಗೆ ಬಂದ ಹನುಮಂತುಗೆ ಬಿಗ್ ಬಾಸ್ ಕಡೆಯಿಂದಾನೇ ಕ್ಯಾಪ್ಟನ್ ಆಗುವ ಅವಕಾಶ ಸಿಕ್ಕಿತ್ತು. ಆಗಲೂ ಮನೆ ಮಂದಿ ಬೇಸರ ಮಾಡಿಕೊಂಡಿದ್ದರು. ಇದೀಗ ಟಾಸ್ಕ್ ಗೆಲ್ಲುವ ಮೂಲಕ ಹನುಮಂತು ಕ್ಯಾಪ್ಟನ್ ಆಗಿದ್ದಾರೆ.

Advertisement

ಬಲೆಯೊಳಗೆ ಹೋಗಿ ಬಾಕ್ಸ್ ಎತ್ತಿಕೊಂಡು ಬರುವ ಆಟದಲ್ಲಿ ಹನುಮಂತು ಗೆದ್ದಿದ್ದು, ಎರಡನೇ ಸಲ ಕ್ಯಾಪ್ಟನ್ ಆಗುವಲ್ಲಿ ಯಶಸ್ವಿಯಾಗಿದ್ದಾರೆ. ಸ್ನೇಹಿತ ಕ್ಯಾಪ್ಟನ್ ಆಗಿದ್ದನ್ನು ಕಂಡು ಧನರಾಜ್ ಫುಲ್ ಖುಷಿಯಾಗಿದ್ದಾರೆ. ಅದೇ ಖುಷಿಯಲ್ಲಿ ಹೆಗಲ ಮೇಲೆ ಹೊತ್ತುಕೊಂಡು ಮನೆಯಲ್ಲೆಲ್ಲಾ ಓಡಾಡಿದ್ದಾರೆ. ಈ ವಾರ ಬಿಗ್ ಬಾಸ್ ಮನೆಯಲ್ಲಿರುವ ಮಂದಿ ಬಗ್ಗೆ ಒಂದಷ್ಟು ಅರ್ಥ ಮಾಡಿಕೊಂಡಿರುವ ಹನುಮಂತು ಯಾವ ರೀತಿ ಕ್ಯಾಪ್ಟನ್ಸಿಯನ್ನು ನಿಭಾಯಿಸುತ್ತಾರೆ ನೋಡಬೇಕಿದೆ.

Advertisement

Advertisement
Advertisement
Tags :
Advertisement