ರಾಜ್ಯಪಾಲ ಥಾವರ್ ಚಂದ್ ಗೆ ಏಕಾಏಕಿ ಭದ್ರತೆ ಹೆಚ್ಚಳ : ಕಾರಣವೇನು..?
ಬೆಂಗಳೂರು: ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಇದ್ದಕ್ಕಿದ್ದ ಹಾಗೇ ಭದ್ರತೆ ಹೆಚ್ಚಳವಾಗಿದೆ. ರಾಜ್ಯ ಪೊಲೀಸ್ ಇಲಾಖೆ ರಾಜ್ಯಪಾಲರಿಗೆ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಥಾವರ್ ಚಂದ್ ಅವರು ಇಷ್ಟು ದಿನ ಬುಲೆಟ್ ಕಾರಿನಲ್ಲಿ ಓಡಾಡುತ್ತಿದ್ದರು. ಆದರೆ ಭದ್ರತೆ ಹೆಚ್ಚಾದಾಗಿನಿಂದ ಬುಲೆಟ್ ಪ್ರೂಫ್ ಕಾರಿನಲ್ಲಿ ಓಡಾಡುತ್ತಿದ್ದಾರೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಬುಲೆಟ್ ಪ್ರೂಫ್ ಕಾರಿನಲ್ಲಿಯೇ ಬಂದಿದ್ದಾರೆ. ರಾಜ್ಯಪಾಲರಿಗೆ ಇದ್ದಕ್ಕಿದ್ದ ಹಾಗೇ ಭದ್ರತೆ ಹೆಚ್ಚಳ ಮಾಡಿರುವ ಬಗ್ಗೆ ಎಲ್ಲಿಯೂ ಅಧಿಕೃತ ಮಾಹಿತಿ ಇಲ್ಲ. ಆದರೆ ಎಲ್ಲಾ ಕಡೆಗೂ ಬುಲೆಟ್ ಪ್ರೂಫ್ ಕಾರಿನಲ್ಲಿಯೇ ಓಡಾಟ ನಡೆಸುತ್ತಿದ್ದಾರೆ. ಸದ್ಯ ಎಲ್ಲಾ ರೀತಿಯ ಭದ್ರತೆಯನ್ನು ರಾಜ್ಯಪಾಲರಿಗೆ ಒದಗಿಸಲಾಗಿದೆ.
ಇತ್ತಿಚೆಗೆ ರಾಜ್ಯ ಸರ್ಕಾರ ವರ್ಸಸ್ ರಾಜ್ಯಪಾಲರು ಎಂಬಂತೆ ಆಗಿದೆ. ಸಿಎಂ ಸಿದ್ದರಾಮಯ್ಯ ವಿಚಾರದಲ್ಲಿ ಮೂಡಾ ಹ್ರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ನೀಡಿದ್ದಾರೆ. ಹೀಗಾಗಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಸೇರಿದಂತೆ ಕಾಂಗ್ರೆಸ್ ನಾಯಕರು ರಾಜ್ಯಪಾಲರ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ರಾಜಭವನ ಬಿಜೆಪಿ ನಾಯಕರ ಕೇಂದ್ರವಾಗಿದೆ ಎಂದೇ ಕಿಡಿಕಾರಿದ್ದಾರೆ. ಇನ್ನು ಸಿದ್ದರಾಮಯ್ಯ ಅವರು ರಾಜ್ಯಪಾಲರ ನಡೆ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು. ಸದ್ಯ ಕಾನೂನು ಹೋರಾಟದಲ್ಲಿ ಸಿದ್ದರಾಮಯ್ಯ ಅವರಿಗೇನೆ ತಾತ್ಕಾಲಿಕ ಜಯ ಸಿಕ್ಕಿದೆ. ಈ ತಿಂಗಳ ಕೊನೆ ಎಂದರೆ ಆಗಸ್ಟ್ 29ಕ್ಕೆ ಹೈಕೋರ್ಟ್ ನಲ್ಲಿ ಮತ್ತೆ ಅರ್ಜಿ ವಿಚಾರಣೆ ನಡೆಯಲಿದೆ. ಬಳಿಕ ಸಿದ್ದರಾಮಯ್ಯ ಅವರ ಪ್ರಕರಣದಲ್ಲಿ ಯಾವ ರೀತಿಯ ತೀರ್ಮಾನ ಹೊರ ಬೀಳಲಿದೆ ಎಂಬುದನ್ನು ನೋಡಬೇಕಿದೆ.