ಸಂಪಾಯಿತಲೇ ಪರಾಕ್ : ಮೈಲಾರ ಕಾರ್ಣಿಕದ ಅರ್ಥ ಏನು ?
09:08 PM Feb 26, 2024 IST | suddionenews
Advertisement
ವಿಜಯನಗರ: ಮೈಲಾರ ಕಾರ್ಣಿಕಗೆ ಸಾಕಷ್ಟು ಮಹತ್ವವಿದೆ. ಇದೀಗ ಇಂದು ಕೂಡ ಮೈಲಾರ ಕಾರ್ಣಿಕ ನುಡಿದಿದೆ. ಇದನ್ನು ಕೇಳಿದ ಜನ ಸಂತಸಗೊಂಡಿದ್ದಾರೆ. ಸಂಪಾಯಿತಲೇ ಪರಾಕ್ ಎಂದು ಭವಿಷ್ಯ ನುಡಿದಿದೆ.
ಇಂದು (ಸೋಮವಾರ) ಸಂಜೆ ಲಕ್ಷಾಂತರ ಭಕ್ತರ ನಡುವೆ ಕಾರ್ಣಿಕ ಜರುಗಿದೆ. ವಂಶಪಾರಂಪರ್ಯ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅವರು ಅಶ್ವರೂಢರಾಗಿ ಡೆಂಕನಮರಡಿಗೆ ಆಗಮಿಸಿ, ಕಾರ್ಣಿಕಾ ಸ್ಥಳದಲ್ಲಿ ಪ್ರದಕ್ಷಿಣೆ ಹಾಕಿದರು. ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ಬಿಲ್ಲು ಏರಿದ ಗೊರವಯ್ಯ ಕಾರ್ಣಿಕಾ ನುಡಿದು ಕೆಳಕ್ಕೆ ಜಿಗಿದರು. ಬಳಿಕ ಗೊರವ ಸಮುದಾಯದವರು ಕಂಬಳಿಯಲ್ಲಿ ಸೆರೆ ಹಿಡಿದರು.
Advertisement
ಕಾರ್ಣಿಕಾ ನುಡಿಯಿಂದ ಸಂತಸಗೊಂಡಿದ್ದಾರೆ ಜನ. ಪ್ರಸಕ್ತ ವರ್ಷದ ದೈವ ವಾಣಿಯಲ್ಲಿ ಶುಭಫಲ ಅಡಗಿದೆ. ಈ ವರ್ಷ ಮಳೆ, ಬೆಳೆ ಸಂಪಾಗಿ, ನಾಡು ಸಮೃದ್ದಿಯಾಗಲಿದೆ ಎಂದು ಕಾರ್ಣಿಕಾ ನುಡಿದಿದ್ದಾರೆ. ಕಾರ್ಣಿಕಾ ನುಡಿ ಕೇಳುತ್ತಿದ್ದಂತೆ ನೆರೆದಿದ್ದ ಜನ ಸಂತಸಗೊಂಡಿದ್ದಾರೆ.