Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

'ಸಲಾರ್'.. ಒಂದೇ ಗಂಟೆಯಲ್ಲಿ ಬುಕ್ ಆದ ಟಿಕೆಟ್ ಎಷ್ಟು, ಕಲೆಕ್ಷನ್ ಆದ ಕೋಟಿಯೆಷ್ಟು..?

02:17 PM Dec 22, 2023 IST | suddionenews
Advertisement

 

Advertisement

ಕೆಜಿಎಫ್ ಸರಣಿ ಸಿನಿಮಾಗಳ ಬಳಿಕ ಇಡೀ ದೇಶ ಕಾತುರದಿಂದ ಕಾಯುತ್ತಿದ್ದಂತ ಸಿನಿಮಾ 'ಸಲಾರ್'. ಪ್ರಶಾಂತ್ ನೀಲ್ ನಿರ್ದೇಶನಕ್ಕೆ ಮಾರು ಹೋಗಿದ್ದ ಸಿನಿ ಅಭಿಮಾನಿಗಳು ಸಲಾರ್ ಗಾಗಿ ಕಾದು ಕುಳಿತಿದ್ದರು. ಕಡೆಗೂ ಸಿನಿಮಾ ರಿಲೀಸ್ ಆಗಿದೆ. ಇಂದು ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಸಿನಿಮಾ ತೆರೆಗೆ ಬಂದಿದ್ದು, ಎಲ್ಲರಿಂದ ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಕಲೆಕ್ಷನ್ ವಿಚಾರಕ್ಕೂ ಸೌಂಡ್ ಮಾಡುತ್ತಿದೆ.

ಹರಿದಾಡುತ್ತಿರುವ ಮಾಹಿತಿ ಪ್ರಕಾರ ಒಂದೇ ದಿನಕ್ಕೆ ಸುಮಾರು 48 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ. ಪ್ರಭಾಸ್ ಫ್ಯಾನ್ಸ್ ಅಂತು ಸಲಾರ್ ದರ್ಶನ ಮಾಡಿ ಸಿಕ್ಕಾಪಟ್ಟೆ ಖುಷಿಪಟ್ಟಿದ್ದಾರೆ. ಥಿಯೇಟರ್ ನಲ್ಲಿಯೇ ಕುಣಿದು ಕುಪ್ಪಳಿಸಿದ್ದಾರೆ. ಈ ಮೂಲಕ ನಿರೀಕ್ಷಿತ ಸಲಾರ್ ಸಿನಿಮಾ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದೆ.

Advertisement

ಸಲಾರ್ ಸಿನಿಮಾ ಅದೆಷ್ಟು ಕ್ರೇಜ್ ಕ್ರಿಯೇಟ್ ಮಾಡಿತ್ತು ಎಂದರೆ, ಅಡ್ವಾನ್ಸ್ ಟಿಕೆಟ್ ಕೂಡ ಬುಕ್ಕಿಂಗ್ ಕೂಡ ಹೆಚ್ಚಾಗಿತ್ತು. ಬುಕ್ ಮೈ ಶೋ ಮಾಹಿತಿ ಪ್ರಕಾರ ಅದರಲ್ಲಿಯೇ ಒಂದು ಒಂದು ಗಂಟೆಗೆ ಸುಮಾರು 50 ಸಾವಿರ ಟಿಕೆಟ್ ಬುಕ್ಕಿಂಗ್ ಆಗಿದೆಯಂತೆ. ಇಂದು ರಿಲೀಸ್ ಆಗಿರುವ ಸಲಾರ್, ವೀಕೆಂಡ್ ನಲ್ಲಿ ಇನ್ನು ಹೆಚ್ಚಿನ ಡಿಮ್ಯಾಂಡ್ ಕ್ರಿಯೆಟ್ ಮಾಡಿಕೊಳ್ಳುವುದರಲ್ಲಿ ಅನುಮಾನವಿಲ್ಲ.

Advertisement
Tags :
bengalurucollectedSalaarsuddioneಕಲೆಕ್ಷನ್ಟಿಕೆಟ್ಬೆಂಗಳೂರುಸಲಾರ್ಸುದ್ದಿಒನ್
Advertisement
Next Article