Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚುನಾವಣೆಯಿಂದ ದೂರ ಉಳಿದಿರುವ ಈಶ್ವರಪ್ಪ ಮಗನ ಭವಿಷ್ಯಕ್ಕಾಗಿ ಓಡಾಟ : ದೆಹಲಿಯಿಂದ ಬಂದ್ಮೇಲೆ ಏನಂದ್ರು..?

07:21 PM Jan 13, 2024 IST | suddionenews
Advertisement

ಬೆಂಗಳೂರು: ಲೋಕಸಭಾ ಚುನಾವಣೆ ಸನಿಹವಾಗುತ್ತಿದೆ. ಈಗಾಗಲೇ ಭರ್ಜರಿ ತಯಾರಿಗಳನ್ನು ಮಾಡಿಕೊಳ್ಳುವುದರ ಜೊತೆಗೆ, ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಇದೀಗ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಕೂಡ ತಮ್ಮ ಮಗನ ಟಿಕೆಟ್ ಗಾಗಿ ಹೈಕಮಾಂಡ್ ಬಳಿ ಮನವಿ ಮಾಡುತ್ತಿದ್ದಾರೆ. ಈ ಸಂಬಂಧ ನಿನ್ನೆಯೆಲ್ಲಾ ದೆಹಲಿಗೆ ಹೋಗಿ, ಅಮಿತ್ ಶಾ ಅವರನ್ನು ಭೇಟಿಯಾಗಿ ಬಂದಿದ್ದಾರೆ.

Advertisement

ದೆಹಲಿ ಭೇಟಿ ಬಗ್ಗೆ ಇಂದು ಮಾತನಾಡಿರುವ ಕೆ ಎಸ್ ಈಶ್ವರಪ್ಪ ಅವರು, ದೆಹಲಿಯಲ್ಲಿ ಹೈಕಮಾಂಡ್ ಭೇಟಿ ಫಲಪ್ರದವಾಗಿದೆ. ರಾಜ್ಯದ ಕೆಲವು ವಿಚಾರಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಗಮನಕ್ಕೆ ತಂದಿದ್ದೇನೆ. ಪುತ್ರ ಕಾಂತೇಶ್ ಗೆ ಹಾವೇರಿ ಲೋಕಸಭಾ ಟಿಕೆಟ್ ಕೇಳೊದ್ದೇನೆ. ಟಿಕೆಟ್ ತೀರ್ಮಾನ ಮಾಡುವುದಕ್ಕೆ ಪಾರ್ಲಿಮೆಂಟರಿ ಬೋರ್ಡ್ ಇದೆ, ಚುನಾವಣಾ ಸಮಿತಿ ಇದೆ. ಟಿಕೆಟ್ ಕೊಡುವುದು ಬಿಡುವುದು ಅವರ ತೀರ್ಮಾನ. ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾನು ಬದ್ಧನಾಗುದ್ದೇನೆ. ಪಕ್ಷ ಯಾರಿಗೆ ಟಿಕೆಟ್ ಕೊಟ್ಟರು ಅವರ ಪರವಾಗಿ ನಾನು ಕೆಲಸ ಮಾಡುತ್ತೇನೆ ಎಂದಿದ್ದಾರೆ.

 

Advertisement

ಇದೇ ವೇಳೆ ಸಿಎಂ ಸಿದ್ದರಾಮಯ್ಯ ಬಗ್ಗೆ ಮಾತನಾಡಿದ್ದು, ರಾಮ ಮಂದಿರ ಬರೀ ಸಿದ್ದರಾಮಯ್ಯ ಭಾವನೆಗಳು ಅಲ್ಕ, ಇಡೀ ದೇಶದ ಹಿಂದೂಗಳ ಭಾವನೆಗಳು. ರಾಮ ನಮ್ಮ ದೇವರು. ಸಿದ್ದರಾಮಯ್ಯ ಕೂಡ ರಾಮನ ಭಕ್ತರೆ. ನಾನು ಈ ಬಗ್ಗೆ ಟೀಕೆ ಮಾಡಲ್ಲ. ಸಿದ್ದರಾಮಯ್ಯ ಅವರು ರಾಮಮಂದಿರಕ್ಕೆ ಹೋಗುತ್ತಾರೆ ಎಂದರೆ ನಾನು ಸಂತೋಷದಿಂದ ಸ್ವಾಗತ ಮಾಡುತ್ತೇನೆ. ಸಿದ್ದರಾಮಯ್ಯ ಹೇಳಿದ ರೀತಿಯಲ್ಲಿ ಇತರೆ ಕೈ ನಾಯಕರು ರಾಮಮಂದಿರಕ್ಕೆ ಹೋಗಲಿ ಎಂದಿದ್ದಾರೆ.

Advertisement
Tags :
bangaloreDelhiK s eshwarappaಈಶ್ವರಪ್ಪಚುನಾವಣೆದೂರ ಉಳಿದದೆಹಲಿಬೆಂಗಳೂರುಮಗನ ಭವಿಷ್ಯ
Advertisement
Next Article