Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕಟಕಟೆಯಲ್ಲಿ ರೋಹಿಣಿ ಸಿಂಧೂರಿ vs ರೂಪಾ :  ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ

04:12 PM Jan 13, 2024 IST | suddionenews
Advertisement

Advertisement

 

ಸುದ್ದಿಒನ್ : ಇಬ್ಬರೂ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಇಬ್ಬರಿಗೂ ಉತ್ತಮವಾದ ಭವಿಷ್ಯವಿದೆ. ಸೌಹಾರ್ದಯುತವಾಗಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ. ಹಠಮಾರಿತನದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಒಂದು ತಿಂಗಳೊಳಗೆ ನಿಮ್ಮ ವಿವಾದವನ್ನು ಅಂತ್ಯಗೊಳಿಸಿ” ಎಂದು ಐಎಎಸ್ ರೋಹಿಣಿ ಸಿಂಧೂರಿ, ಐಪಿಎಸ್ ಡಿ. ರೂಪಾ ಅವರಿಗೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ ನೀಡಿದೆ.

Advertisement

ಇಬ್ಬರೂ ಉನ್ನತ ಹುದ್ದೆಯಲ್ಲಿದ್ದು, ಈ ರೀತಿ ಹೊಡೆದಾಡಿಕೊಂಡು, ಒಬ್ಬರನ್ನೊಬ್ಬರು ಪರಸ್ಪರ ನಿಂದಿಸುತ್ತಾ ನೀವು ಸಮಾಜಕ್ಕೆ ಏನು ಸಂದೇಶ ನೀಡುತ್ತಿದ್ದೀರಿ ಎಂದು ನ್ಯಾಯಾಧೀಶರು ಪ್ರಶ್ನಿಸಿದರು. ಇಂತಹ ಬಹಿರಂಗ ಆರೋಪಗಳಿಂದ ಏನು ಉಪಯೋಗವಾಗುವುದಿಲ್ಲ ಎಂದರು.

ಆದರೆ ರೋಹಿಣಿ ಸಿಂಧೂರಿ ಸುಮ್ಮನಾಗದೇ, ಸಾಮಾಜಿಕ ಜಾಲತಾಣಗಳಲ್ಲಿ ತನಗೆ ಅವಹೇಳನ ಮಾಡುವ ಪೋಸ್ಟ್‌ಗಳನ್ನು ಅಳಿಸಿ ಹಾಕಿದರೆ ಸಾಲದು, ತನಗೆ ತೊಂದರೆ ಕೊಟ್ಟಿದ್ದಕ್ಕೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ನ್ಯಾಯಮೂರ್ತಿ ಓಕಾ ಪ್ರಕರಣದ ವಿಚಾರಣೆಯನ್ನು ಮಾರ್ಚ್15ಕ್ಕೆ ಮುಂದೂಡಿದರು.

ಪ್ರಕರಣದ ಹಿನ್ನೆಲೆ :

ಇತ್ತೀಚೆಗೆ ಕೆಲವು ದಿನಗಳ ಹಿಂದೆ ಈ ಇಬ್ಬರು ಮಹಿಳಾ ನಾಗರಿಕ ಸೇವಾ ಅಧಿಕಾರಿಗಳ ನಡುವೆ ಬಾರೀ ಮಾತಿನ ಚಕಮಕಿ ನಡೆದಿತ್ತು. ಐಎಎಸ್ ರೋಹಿಣಿ ಸಿಂಧೂರಿ ವಿರುದ್ಧ ಐ.ಪಿ.ಎಸ್. ರೂಪಾ ಮುದ್ಗಿಲ್ ಅವರು ಫೇಸ್ ಬುಕ್ ನಲ್ಲಿ ಹಲವಾರು ಪೋಸ್ಟ್ ಗಳನ್ನು ಮಾಡಿ ತೀವ್ರ ಟೀಕೆ ಮಾಡಿದ್ದರು. ರೋಹಿಣಿ ಸಿಂಧೂರಿ ಅವರ ವೈಯಕ್ತಿಕ ಫೋಟೋಗಳನ್ನು ಪೋಸ್ಟ್ ಮಾಡಿ, ಇದು ಅವರು ಮಾಡುತ್ತಿರುವ ಅಕ್ರಮಗಳು ಎಂದು ಹಲವು ಆರೋಪಗಳನ್ನು ಮಾಡಿದ್ದರು. ರೋಹಿಣಿ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸರಕಾರವನ್ನು ಪ್ರಶ್ನಿಸಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರು ಅಧಿಕಾರಿಗಳು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಂಡಿದ್ದರಿಂದ ಈ ವಿಚಾರ ಬಾರೀ ಚರ್ಚೆಗೆ ಗ್ರಾಸವಾಗಿತ್ತು.

ಐಪಿಎಸ್ ಅಧಿಕಾರಿ ರೂಪಾ ಮುದ್ಗಲ್ ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಕ್ಕೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದರು. ರೂಪಾ ಅವರು ಫೋಟೋಗಳನ್ನು ಬಹಿರಂಗಪಡಿಸುವ ಮೂಲಕ ಮತ್ತು ಆಧಾರರಹಿತ ಆರೋಪಗಳನ್ನು ಮಾಡುವ ಮೂಲಕ ತಮ್ಮ ವಿರುದ್ಧ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು. ಸದಾ ಸುದ್ದಿಯಲ್ಲಿರಬೇಕೆಂದು ರೂಪಾ ಹೀಗೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದ್ದರು. ರೂಪಾ ಅವರು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದಾರೆ. ಅವರು ಚಿಕಿತ್ಸೆ ಪಡೆಯಲಿ ಎಂದು ವ್ಯಂಗ್ಯವಾಡಿದ್ದರು. ಈ ಆರೋಪ ಪ್ರತ್ಯಾರೋಪದಿಂದ ಬೇಸತ್ತಿದ್ದ ರೋಹಿಣಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.

Advertisement
Tags :
Important NoticeNewdelhiRohini SindhuriRupasuddioneSupreme Courtಕಟಕಟೆಡಿ ರೂಪಾನವದೆಹಲಿಮಹತ್ವದ ಸೂಚನೆರೋಹಿಣಿ ಸಿಂಧೂರಿಸುದ್ದಿಒನ್ಸುಪ್ರೀಂ ಕೋರ್ಟ್
Advertisement
Next Article