For the best experience, open
https://m.suddione.com
on your mobile browser.
Advertisement

ಕೆಕೆಆರ್ ತಂಡದಲ್ಲೇ ಉಳಿದ ರಿಂಕು ಸಿಂಗ್ ಈ ಬಾರಿ ಕೋಟಿ ಸಂಭಾವನೆ..!

04:11 PM Nov 01, 2024 IST | suddionenews
ಕೆಕೆಆರ್ ತಂಡದಲ್ಲೇ ಉಳಿದ ರಿಂಕು ಸಿಂಗ್ ಈ ಬಾರಿ ಕೋಟಿ ಸಂಭಾವನೆ
Advertisement

ಐಪಿಎಲ್ 2025ರ ಬಗ್ಗೆ ಕುತೂಹಲ ಹೆಚ್ಚಾಗಿದೆ. ಈಗಾಗಲೇ ಸಾಕಷ್ಟು ಚರ್ಚೆಗಳು ಶುರುವಾಗಿದೆ. ಅದರಲ್ಲೂ ಹರಾಜಿನ ಪ್ರಕ್ರಿಯೆಗೆ ಲೆಕ್ಕಾಚಾರವೂ ಆರಂಭವಾಗಿದೆ. ಅದಕ್ಕೂ ಮುನ್ನ ಫ್ರಾಂಚೈಸಿಗಳು ಮೊದಲೇ ಆಟಗಾರರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಉಳಿಸಿಕೊಂಡ ಆಟಗಾರರ ಹೆಸರನ್ನು ಘೋಷಿಸುತ್ತಿವೆ.

Advertisement

ಕೆಕೆಆರ್ ಸದ್ಯ ಆರು ಆಟಗಾರರನ್ನು ಉಳಿಸಿಕೊಂಡಿದ್ದು, ಅದರಲ್ಲೂ ಬಹುಮುಖ್ಯವಾಗಿ ರಿಂಕು ಸಿಂಗ್ ಅವರನ್ನು ಉಳಿಸಿಕೊಂಡಿದೆ. ಕಳೆದ ಆವೃತ್ತಿಯಲ್ಲಿ ರಿಂಕು ಸಿಂಗ್ ಲಕ್ಷದ ಲೆಕ್ಕದಲ್ಲಿ ಸಂಭಾವನೆಯನ್ನು ಪಡೆಯುತ್ತಿದ್ದರು. ಆದರೆ ಕೆಕೆಆರ್ ನಲ್ಲಿ ರಿಂಕು ಸಿಂಗ್ ಅವರನ್ನು ಉಳಿಸಿಕೊಳ್ಳಬೇಕು ಅಂದ್ರೆ ಖರ್ಚು ಹೆಚ್ಚಾಗಲಿದೆ. ಕೋಟಿ ಲೆಕ್ಕದಲ್ಲಿಯೇ ಸಂಭಾವನೆಯನ್ನು ನೀಡಬೇಕಾಗಿದೆ. ಕಳೆದ ಆವೃತ್ತಿಯಲ್ಲಿ ಕೇವಲ 55 ಲಕ್ಷ ಪಡೆದಿದ್ದರು. ಆದರೆ ಈ ಆವೃತ್ತಿಯಲ್ಲಿ ರಿಂಕು ಸಿಂಗ್ ಅವರಿಗೆ ಬರೋಬ್ಬರಿ 13 ಕೋಟಿ ರೂಪಾಯಿ ಹಣ ನೀಡಲು ಫ್ರಾಂಚೈಸಿಯೇ ಮುಂದಾಗಿದೆ.

Advertisement

2018ರಿಂದಾನೂ ರಿಂಕು ಸಿಂಗ್ ಕೆಕೆಆರ್ ಜೊತೆಗೆ ಆಡುತ್ತಿದ್ದಾರೆ. 2023ರ ಸೀಸನ್ ನಲ್ಲಿ ಸತತವಾಗಿ ಗುಜರಾತ್ ವಿರುದ್ಧ ಐದು ಸಿಕ್ಸರ್ ಗಳನ್ನು ಬಾರಿಸುವ ಮೂಲಕ ಫ್ಯಾಂಚೈಸಿಯ ಗೆಲುವಿಗೆ ಕಾರಣವಾಗಿದ್ದರು. ಕೆಕೆಆರ್ ಪರ 45 ಪಂದ್ಯಗಳನ್ನು ಆಡಿರುವ ರಿಂಕು 143.34 ಸ್ಟ್ರೈಕ್ ರೇಟ್ ನಲ್ಲಿ 893 ರನ್ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಅರ್ಧಶತಕಗಳು ಸೇರಿವೆ. ಇದರಲ್ಲಿ ರಿಂಕು ಸಿಂಗ್ ತಂಡದ ಮಾಲೀಕ ಶಾರುಖ್ ಖಾನ್ ಅವರ ನೆಚ್ಚಿನ ಆಟಗಾರನೂ ಆಗಿದ್ದಾರೆ. ಉಳಿದಂತೆ ಅಂಡ್ರೆ ರಸೆಲ್, ಸುನಿಲ್ ನರೈನ್, ವರುಣ್ ಚಕ್ರವರ್ತಿ, ರಮಣದೀಪ್ ಸಿಂಗ್ , ಹರ್ಷಿತ್ ರಾಣಾ ಅವರನ್ನು ಕೆಕೆಆರ್ ಮುಂದಿನ ಐಪಿಎಲ್ ಗೆ ಉಳಿಸಿಕೊಂಡಿದೆ.

Advertisement

Advertisement
Advertisement
Tags :
Advertisement