Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಡೇವಿಡ್ ವಾರ್ನರ್ ವಿದಾಯಕ್ಕೆ ರಿಕಿ ಪಾಂಟಿಂಗ್ ಭಾವುಕ..!

09:09 PM Jun 25, 2024 IST | suddionenews
Advertisement

ಟಿ20 ವಿಶ್ವಕಪ್ ನಲ್ಲಿ ಕಪ್ ಗೆಲ್ಲುವಲ್ಲಿ ಆಸ್ಟ್ರೇಲಿಯಾ ವಿಫಲವಾಗಿದೆ. ಈ ನೋವಿನಲ್ಲಿ ಇರುವಾಗಲೇ ಆಸ್ಟ್ರೇಲಿಯಾಗೆ ಮತ್ತೊಂದು ಆಘಾತಕಾರಿ ಸುದ್ದಿ ಸಿಕ್ಕಿದೆ. ಆಸ್ಟ್ರೇಲಿಯಾ ತಂಡದ ಸ್ಪೋಟಕ ಆಟಗಾರ, ಲೆಜೆಂಡರಿ ಕ್ರಿಕೆಟರ್ ಡೇವಿಡ್ ವಾರ್ನರ್ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ. ಇಂದು ಅಂತರಾಷ್ಟ್ರೀಯ ಕ್ರಿಕೆಟ್ ಗೆ ಇಂದು ವಿದಾಯ ಘೋಷಿಸಿದ್ದಾರೆ. ಡೇವಿಡ್ ವಾರ್ನರ್ ಕ್ರಿಸ್ ಗೆ ಇಳಿದರೆ ದೈತ್ಯ ಆಟಗಾರನಾಗಿ ಎಲ್ಲರಿಗೂ ಕಾಣಿಸುತ್ತಿದ್ದರು. ಆದರೆ ಇಂದಿನ ವಿದಾಯ ಎಲ್ಲರಿಗೂ ಶಾಕಿಂಗ್ ಎನಿಸಿದೆ.

Advertisement

ಇನ್ನು ಡೇವಿಡ್ ವಾರ್ನರ್ ವಿದಾಯ ಆಸ್ಟ್ರೇಲಿಯಾದ ಮಾಜಿ ಆಟಗಾರ ರಿಕಿ ಪಾಂಟಿಂಗ್ ಗೆ ಬೇಸರ ತರಿಸಿದೆ. ಈ ಕುರಿತು ಭಾವುಕರಾಗಿ ಮಾತನಾಡಿದ್ದಾರೆ. ನಾನು ಮತ್ತೊಬ್ಬ ವಾರ್ನರ್ ಅನ್ನು ಹುಡುಕುವುದು ಸುಲಭದ ಕೆಲಸವಲ್ಲ. ಡೇವಿಡ್ ವಾರ್ನರ್ ನಿವೃತ್ತಿ ಆಸ್ಟ್ರೇಲಿಯಾ ತಂಡದ ಮೇಲೆ ಬಹಳಷ್ಟು ದೊಡ್ಡ ಪರಿಣಾಮವನ್ನು ಬೀರಲಿದೆ ಎಂದಿದ್ದಾರೆ.

 

Advertisement

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 383 ಪಂದ್ಯಗಳನ್ನು ಆಡಿದ್ದ ಡೇವಿಡ್ ವಾರ್ನರ್ ಅವರು 18995 ರನ್, 49 ಶತಕ, 98 ಅರ್ಧ ಶತಕವನ್ನು ಸಿಡಿಸಿದ್ದಾರೆ. ಡೇವಿಡ್ ವಾರ್ನರ್ ಅವರು 2024 ಜನವರಿಯಲ್ಲೇ ಒನ್ ಡೇ ಮತ್ತು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದರು. 2024ರ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಸಾಧನೆ ಮಾಡಿ ಆಸ್ಟ್ರೇಲಿಯಾ ತಂಡಕ್ಕೆ ಮತ್ತೊಮ್ಮೆ ಚಾಂಪಿಯನ್ ಆಗುವ ಮಹದಾಸೆಯಲ್ಲಿದ್ದರು. ಟಿ20 ವಿಶ್ವಕಪ್‌ನಲ್ಲಿ ಗೆದ್ದು ಗೆಲುವಿನೊಂದಿಗೆ ವಿದಾಯ ಹೇಳಲು ಡೇವಿಡ್ ವಾರ್ನರ್ ಬಯಸಿದ್ದರು. ಆದರೆ ಅದು ಸಾಧ್ಯವಾಗಲೇ ಇಲ್ಲ. ಟಿ20 ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ಸೋಲು ಕಂಡಿದೆ.

Advertisement
Tags :
bengaluruchitradurgaDavid WarnerRicky Pontingsuddionesuddione newsಚಿತ್ರದುರ್ಗಡೇವಿಡ್ ವಾರ್ನರ್ಬೆಂಗಳೂರುರಿಕಿ ಪಾಂಟಿಂಗ್ಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article