For the best experience, open
https://m.suddione.com
on your mobile browser.
Advertisement

ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿಲ್ಲ.. ಷಡ್ಯಂತ್ರದ ವಾಸನೆ ಬಡಿಯುತ್ತಿದೆ : ದರ್ಶನ್ ಪರ ವಕೀಲರ ವಾದವೇನು..?

08:00 PM Nov 26, 2024 IST | suddionenews
ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿಲ್ಲ   ಷಡ್ಯಂತ್ರದ ವಾಸನೆ ಬಡಿಯುತ್ತಿದೆ   ದರ್ಶನ್ ಪರ ವಕೀಲರ ವಾದವೇನು
Advertisement

ಇಂದು ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್ ನಲ್ಲಿ ನಡೆದಿದೆ. ದರ್ಶನ್ ಜಾಮೀನಿಗೆ ಎಸ್ಪಿಪಿ ಪ್ರಸನ್ನ ಕುಮಾರ್ ಹಾಗೂ ಪೊಲೀಸರು ತಕರಾರು ತೆಗೆದಿದ್ದಾರೆ. ಈ ಸಂಬಂಧ ಇಂದು ದರ್ಶನ್ ಪರ ವಕೀಲರು ಹೈಕೋರ್ಟ್ ನಲ್ಲಿ ವಾದ ಮಂಡಿಸಿದ್ದಾರೆ. ರೇಣುಕಾಸ್ವಾಮಿ ಅಪಹರಣವೇ ಆಗಿಲ್ಲ, ದರ್ಶನ್ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ವಾದ ಮಂಡಿಸಿದ್ದಾರೆ.

Advertisement

ದರ್ಶನ್ ಅವರು ಜೈಲು ಸೇರಿದ ಮೇಲೆ ಬೆನ್ನು ನೋವಿನಿಂದ ಬಳಲುತ್ತಿದ್ದರು. ಇದರ ಆಧಾರದ ಮೇಲೆ ಜಾಮೀನು ಕೂಡ ಪಡೆದರು. ಈಗ ಜಾಮೀನು ಅರ್ಜಿ ವಿಚಾರಣೆ ನಡೆದಿದೆ. ಇಂದು ವಾದ ಮಂಡಿಸಿರುವ ಸಿ.ವಿ.ನಾಗೇಶ್, ದರ್ಶನ್ ಕೇಸಲ್ಲಿ ಷಡ್ಯಂತ್ರದ ವಾಸನೆ ಬಡಿಯುತ್ತಿದೆ. ಶವವನ್ನು ಕೋಲ್ಡ್ ಸ್ಟೋರೇಜ್ ನಲ್ಲಿ ಇಟ್ಟಿದ್ದರಿಂದ ಸಾವಿನ ನಿಖರ ಸಮಯ ತಿಳಿದಿಲ್ಲ. ಶವ ಪರೀಕ್ಷೆಯ ವರದಿ ಒಂದು ತಿಂಗಳ ಬಳಿಕ ಬಂದಿದೆ. ರೇಣುಕಾಸ್ವಾಮಿಯನ್ನು ಯಾರೂ ಕೂಡ ಮೋಸದಿಂದಾಗಲೀ ಬಲವಂತದಿಂದಾಗಲೀ ಕರೆತಂದಿಲ್ಲ. ಮೃತನ ತಂದೆ‌ ಕಾಶೀನಾಥಯ್ಯ ಅವರು ತಮ್ಮ ಹೇಳಿಕೆಯಲ್ಲಿ ಜೂನ್ 8ರಂದು ಎಂದಿನಂತೆ ರೇಣುಕಾಸ್ವಾಮಿ ಕೆಲಸಕ್ಕೆ ಹೋದ ಬಗ್ಗೆ ಉಲ್ಲೇಖವಿದೆ.

ಹಳೆಯ ಸ್ನೇಹಿತರೊಟ್ಟಿಗೆ ಹೋಗುತ್ತೇನೆಂದು ಅವರ ತಾಯಿ ಹೇಳಿರುವಂತೆ ಹೇಳಿಜೆ ನಮೂದಿಸಲಾಗಿದೆ. ಅಂದು ರೇಣುಕಾಸ್ವಾಮಿ ದಿನನಿತ್ಯ ಧರಿಸುವ ಯೂನಿಫಾರ್ಮ್ ಧರಿಸಿರಲಿಲ್ಲ. ಮಧ್ಯಾಹ್ನದ ಊಟಕ್ಕೆ ಬರಲ್ಲವೆಂದು ಕೂಡ ಹೇಳಿದ್ದರೆಂದು ಹೇಳಿಕೆ ದಾಖಲಿಸಲಾಗಿದೆ. ಚಿತ್ರದುರ್ಗದಿಂದ ಬೆಂಗಳೂರಿಗೆ ಬರುವ ದಾರಿಯಲ್ಲಿ ದುರ್ಗಾ ಬಾರ್ ನಲ್ಲಿ ಫೋನ್ ಪೇ ಮಾಡಲಾಗಿದೆ. ಒಂದು ವೇಳೆ ಕಿಡ್ನ್ಯಾಪ್ ಮಾಡಿದ್ದರೆ ಬಾರ್ ಗೆ ಬಂದು ಫೋನ್ ಪೇ ಮಾಡಲು ಸಾಧ್ಯವಾಗುತ್ತಿತ್ತಾ..?ಆದರೆ ಕೊಲೆಯ ಉದ್ದೇಶದಿಂದ ಕಿಡ್ನ್ಯಾಪ್ ಆಗಿಲ್ಲ. ಶವವನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುವುದು ಸಾಕ್ಷ್ಯ ನಾಶವಲ್ಲ ಎಂದು ವಾದ ಮಂಡಿಸಿದ್ದಾರೆ.

Advertisement

Advertisement
Tags :
Advertisement