For the best experience, open
https://m.suddione.com
on your mobile browser.
Advertisement

ಹೆಣ್ಣು ಅಂದ್ರೆ ಕ್ಷಮಯಾಧರಿತ್ರಿ ಅಂತಾರೆ ಆದ್ರೆ.. ಪವಿತ್ರಾ ಗೌಡ ವಿರುದ್ಧ ರೇಣುಕಾಸ್ವಾಮಿ ಚಿಕ್ಕಪ್ಪ ಕಿಡಿ..!

12:04 PM Sep 05, 2024 IST | suddionenews
ಹೆಣ್ಣು ಅಂದ್ರೆ ಕ್ಷಮಯಾಧರಿತ್ರಿ ಅಂತಾರೆ ಆದ್ರೆ   ಪವಿತ್ರಾ ಗೌಡ ವಿರುದ್ಧ ರೇಣುಕಾಸ್ವಾಮಿ ಚಿಕ್ಕಪ್ಪ ಕಿಡಿ
Advertisement

Advertisement
Advertisement

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 05 : ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆತಂದ ದರ್ಶನ್ ಅಂಡ್ ಗ್ಯಾಂಗ್ ಪಟ್ಟಣಗೆರೆ ಶೆಡ್ ನಲ್ಲಿ ಹಿಂಸಿಸಿದ್ದು ಮಾತ್ರ ಭಯನಾಕವಾಗಿತ್ತು. ಮೂಳೆ‌ ಮುರಿದರು, ಅಂಗಾಂಗ ಡ್ಯಾಮೇಜ್ ಮಾಡಿದರು, ರಕ್ತದ ಮಡುವಿನಲ್ಲಿ ಬಿದ್ದಿದ್ದರು ಬಿಡದೆ ಕೊಂದರು ಎಂಬುದನ್ನು ಇಷ್ಟು ದಿನ ಮಾತಲ್ಲಿ ಕೇಳುತ್ತಿದ್ದೆವು. ಆದರೆ ಅದರ ಫೋಟೋಗಳು ಈಗ ರಿವೀಲ್ ಆಗುತ್ತಿವೆ. ಮಗನ ಕೊನೆಯ ಕ್ಷಣದ ಹಿಂಸೆಯ ಫೋಟೋಗಳನ್ನು ಕಂಡು ರೇಣುಕಾಸ್ವಾಮಿ ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ. ಇದೀಗ ಅವರ ಚಿಕ್ಕಪ್ಪ ಷಡಕ್ಷರಯ್ಯ ಮಾತನಾಡಿದ್ದು, ಪವಿತ್ರಾ ಗೌಡ ವಿರುದ್ಧ ಕೆಂಡಕಾರಿದ್ದಾರೆ.

ದರ್ಶನ್ ಅಂಡ್ ಗ್ಯಾಂಗ್ ಮಾಡಿದ ಕೃತ್ಯ ಭಯಾನಕವಾದುದು, ಅದನ್ನು ನೋಡಲೂ ಆಗಲಿಲ್ಲ, ಅದನ್ನು ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತೆ ಮೃತ ರೇಣುಕಾ ಸ್ವಾಮಿ ಚಿಕ್ಕಪ್ಪ ಷಡಕ್ಷರಯ್ಯ ಆಕ್ರೋಶ ಹೊರ ಹಾಕಿದ್ದಾರೆ. ಗ್ಯಾಂಗ್ ತಂಡದವರು ಭಯಾನಕವಾದ ಕ್ರೌರ್ಯ ಮೆರೆದಿದ್ದಾರೆ. ಬೇಡಿಕೊಂಡ್ರೂ, ಕೇಳಿಕೊಂಡ್ರೂ ಬಿಟ್ಟಿಲ್ಲ, ಅಸ್ಲೀಲ ಮೆಸೇಜ್ ಕಳಿಸಿದ್ದು ತಪ್ಪು, ಆದ್ರೆ ಅದಕ್ಕೆ ಇಂಥ ಶಿಕ್ಷೆಯಾ ಎಂದು ಪ್ರಶ್ನಿಸಿದರು. ಹೀಗೆ ಮೆಸೇಜ್ ಕಳಿಸಿದ್ರೆ ಕೊಲೆ ಅನ್ನೋದಾದ್ರೆ ಪ್ರತಿ ದಿನ ಎಷ್ಟು ಕೊಲೆ ಆಗಬೇಕು.

Advertisement

ಪವಿತ್ರಾ ಗೌಡ ತನ್ನ ಚಪ್ಪಲಿಯಲ್ಲಿ ಹೊಡೆದಿದ್ದಾಳೆ. ಹೆಣ್ಣು ಅಂದ್ರೆ ಕ್ಷಮಯಾಧರಿತ್ರಿ ಅಂತಾರೆ ಆದ್ರೆ ಇಷ್ಟು ಕ್ರೌರ್ಯ ಯಾಕೆ ಅಂತಾ ಗೊತ್ತಾಗಲಿಲ್ಲ, ಹೆಣ್ಣು ಎಂಬ ಪಧ ಅರ್ಥವೇ ಪವಿತ್ರಾಗೌಡ ಗೆ ಗೊತ್ತಿಲ್ಲ, ರೇಣುಕಾಸ್ವಾಮಿ ತಪ್ಪು ಮಾಡಿದ್ರೆ ನಮಗೆ ಹೇಳಬೇಕಿತ್ತು. ನಾವು ಬುದ್ಧಿ ಹೇಳಿ ಸರಿ ಮಾಡ್ತಿದ್ವಿ, ಆದ್ರೆ ಇಂಥ ಶಿಕ್ಷೆ ನೋಡಿದ್ದು ಮಾತ್ರ ಕ್ರೌರ್ಯ, ಅಶ್ಲೀಲ ಮೆಸೇಜ್ ಕಳಿಸಿದ್ದನ್ನು ನಾನು ಸಮರ್ಥಿಸಿಕೊಳ್ಳಲ್ಲ. ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ರೇಣುಕಾಸ್ವಾಮಿ ಚಿಕ್ಕಪ್ಪ ಷಡಕ್ಷರಯ್ಯ ಆಗ್ರಹಿಸಿದರು.

Advertisement

Tags :
Advertisement