Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ರೇಣುಕಾಸ್ವಾಮಿ ಕೊಲೆ ಕೇಸ್ : ನಾಲ್ವರು ತುಮಕೂರು ಜೈಲಿಗೆ ಶಿಫ್ಟ್.. ಯಾಕೆ ಗೊತ್ತಾ..?

05:11 PM Jun 24, 2024 IST | suddionenews
Advertisement

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ದರ್ಶನ್ ಸೇರಿದಂತೆ ಹದಿನೇಳು ಜನ ಜೈಲುಪಾಲಾಗಿದ್ದಾರೆ. ಶನಿವಾರ ನಾಲ್ವರ ಕಸ್ಟಡಿ ಅಂತ್ಯವಾದ ಹಿನ್ನೆಲೆ ಎಲ್ಲರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ. ಇದೀಗ ಹೊಸ ಬೆಳವಣಿಗೆ ಏನು ಅಂದ್ರೆ ಹದಿನೇಳು ಜನ ಆರೋಪಿಗಳಲ್ಲಿ ನಾಲ್ವರನ್ನು ತುಮಕೂರು ಜೈಲಿಗೆ ಶಿಫ್ಟ್ ಮಾಡಲಾಗಿದೆ. ಅದಕ್ಕೆ ಕಾರಣವು ಇದೆಯಂತೆ. ತನಿಖೆ ನಡೆಸುತ್ತಿರುವ ಪೊಲೀಸರು ಕೋರ್ಟ್ ಗೆ ಮನವಿ ಮಾಡಿದ್ದು, ಕೋರ್ಟ್ ಕೂಡ ಅನುಮತಿ ನೀಡಿದೆ.

Advertisement

ರವಿಶಂಕರ್, ಕಾರ್ತಿಕ್, ಕೇಶವ್ ಹಾಗೂ ನಿಖಿಲ್ ಎಂಬುವವರನ್ನು ತುಮಕೂರು ಜೈಲಿಗೆ ಶಿಫ್ಟ್ ಮಾಡಲಾಗಿದೆ. ಇನ್ನುಳಿದ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲೇ ಇದ್ದಾರೆ. ಈ ನಾಲ್ವರ ತನಿಖೆಯಿಂದಾನೇ ದರ್ಶನ್ ಗ್ಯಾಂಗ್ ಸುಲಭವಾಗಿ ಸಿಕ್ಕಿ ಬೀಳುವುದಕ್ಕೆ ಕಾರಣವಾಗಿದೆ. ಹೀಗಾಗಿ ನಾಲ್ವರನ್ನು ಬೇರೆ ಜೈಲಿಗೆ ಕಳುಹಿಸಲಾಗಿದೆ. ಬೇರೆ ಜೈಲಿಗೆ ಕಳುಹಿಸುವುದಕ್ಕೆ ದರ್ಶನ್ ಅಂಡ್ ಗ್ಯಾಂಗ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು.

ತುಮಕೂರು ಜೈಲಿಗೆ ಶಿಫ್ಟ್ ಆದ ಮೂವರು ಆರೋಪಿಗಳು ರೇಣುಕಾಸ್ವಾಮಿ ಕೊಲೆ ಕೇಸಿನ ಸಂಪೂರ್ಣ ಮಾಹಿತಿಯನ್ನು ನೀಡಿದ್ದರು. ಇತ್ತ ಆರೋಪಿಗಳು ಬರೀ ಕೊಲೆಯಷ್ಟೇ ಅಲ್ಲ ಒಳಸಂಚಿನಲ್ಲೂ ಭಾಗಿಯಾಗಿದ್ದರು. ಈಗ ಸಂಪೂರ್ಣ ಮಾಹಿತಿ ಬಿಟ್ಟುಕೊಟ್ಟಿರುವ ಆರೋಪಿಗಳ ಮೇಲೆ ದ್ವೇಷ ಹುಟ್ಟಿಕೊಂಡಿರುತ್ತದೆ. ಒಂದೇ ಜೈಲಿನಲ್ಲಿ ಇದ್ದರೆ ಗಲಾಟೆಗಳು ಆಗುವ ಸಾಧ್ಯತೆಯೂ ಇರುತ್ತದೆ. ಹಲ್ಲೆಯನ್ನು ನಡೆಸಬಹುದೆಂದು ಪೊಲೀಸರು ರಿಟ್ ಅರ್ಜಿಯಲ್ಲಿ ತಿಳಿಸಿದ್ದರು. ಎಸ್ ಪಿ ಪಿ ಅವರು ಪ್ರಕರಣದಲ್ಲಿ ಆಗುವ ಅನಾಹುತಗಳ ಬಗ್ಗೆಯೂ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಹೀಗಾಗಿ ಕೋರ್ಟ್ ಕೂಡ ಆರೋಪಿಗಳನ್ನು ಬೇರೆ ಜೈಲಿಗೆ ಶಿಫ್ಟ್ ಮಾಡಲು ಒಪ್ಪಿದೆ.

Advertisement

Advertisement
Tags :
bengaluruchitradurgaFour shiftedRenukaswamy murder casesuddionesuddione newsTumkur jailಚಿತ್ರದುರ್ಗತುಮಕೂರು ಜೈಲಿಗೆ ಶಿಫ್ಟ್ಬೆಂಗಳೂರುರೇಣುಕಾಸ್ವಾಮಿ ಕೊಲೆ ಕೇಸ್ಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article