ರೇಣುಕಾಸ್ವಾಮಿ ಕೊಲೆ ಪ್ರಕರಣ: ಮೂವರಿಗೆ ಜಾಮೀನು ಮಂಜೂರು..!
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹದಿನೇಳು ಮಂದಿ ಜೈಲು ಸೇರಿದ್ದರು. ಕೊಲೆ ಆರೋಪದಲ್ಲಿ ಪೊಲೀಸರ ಕೈಗೆ ತಗಲಾಕಿಕೊಂಡು ನೂರಕ್ಕೂ ಹೆಚ್ಚು ದಿನಗಳೇ ಕಳೆದಿವೆ. ಚಾರ್ಜ್ ಶೀಟ್ ಸಲ್ಲಿಕೆಯ ಬಳಿಕ ಒಬ್ಬೊಬ್ಬರೇ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ. ಅದರಲ್ಲಿ ಮೊದಲ ಬಾರಿಗೆ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದೆ ಪವಿತ್ರಾ ಗೌಡ. ಆದರೆ ಕೋರ್ಟ್ ಅವರಿಗೆ ಜಾಮೀನು ನೀಡಲಿಲ್ಲ. ಚಾರ್ಜ್ ಶೀಟ್ ಸಲ್ಲಿಕೆಗೂ ಮುನ್ನವೇ ಜಾಮೀನಿಗೆ ಅರ್ಜಿ ಹಾಕಿದ್ದರು ಪವಿತ್ರಾ ಗೌಡ.
ಕಳೆದ ಶನಿವಾರವಷ್ಟೇ ನಟ ದರ್ಶನ್ ಕೂಡ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆದರೆ ಇಂದಿಗೆ ವಿಚಾರಣೆಯನ್ನು ಕೋರ್ಟ್ ಮುಂದೂಡಿಕೆ ಮಾಡಿತ್ತು. ಇದರ ನಡುವೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೂವರಿಗೆ ಕೋರ್ಟ್ ಇಂದು ಜಾಮೀನು ನೀಡಿದೆ. ದರ್ಶನ್ ಅಂಡ್ ಗ್ಯಾಂಗ್ ಅಲ್ಲಿ ಮೂವರು ಬಿಡುಗಡೆಯಾಗಿದ್ದಾರೆ. ಸಿಸಿಹೆಚ್ 57ನೇ ನ್ಯಾಯಾಲಯವು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. A15 ಕಾರ್ತಿಕ್, A16 ಕೇಶವ್ ಮೂರ್ತಿ, A17 ನಿಖಿಲ್ ಗೆ ಜಾಮೀನು ಸಿಕ್ಕಿದೆ.
ಈ ಮೂವರು ಕೊಲೆಯಲ್ಲಿ ಭಾಗಿಯಾದ ಉಲ್ಲೇಖ ಚಾರ್ಜ್ ಶೀಟ್ ನಲ್ಲಿ ಇಲ್ಲ. ರೇಣುಕಾಸ್ವಾಮಿ ಕೇಸಲ್ಲಿ ಕೇಶವ ಮೂರ್ತಿ, ಐದು ಲಕ್ಷ ಹಣ ಪಡೆದು ಮೃತದೇಹ ಸಾಗಿಸುವುದರಲ್ಲಿ ಭಾಗಿಯಾಗಿದ್ದ. ಹಾಗೇ ಪೊಲೀಸರ ಮುಂದೆ ಸರಂಡರ್ ಆಗಿದ್ದರು. ಕಾರ್ತಿಕ್, ಪಟ್ಟಣಗೆರೆ ಶೆಡ್ ನಲ್ಲಿ ಕೆಲಸ ಮಾಡುತ್ತಿದ್ದ. ಮೃತದೇಹ ಸಾಗಿಸಲು ಸಹಾಯ ಮಾಡಿದ್ದ ಹಾಗೂ ಪೊಲೀಸರ ಮುಮನದೆ ಸೆರಂಡರ್ ಆಗಿದ್ದ. ನಿಖಿಲ್ ಕೂಡ ಮೃತದೇಹ ಸಾಗಿಸಲು ಐದು ಲಕ್ಷ ಹಣ ಪಡೆದು, ಪೊಲೀಸರ ಮುಂದೆ ಸರಂಡರ್ ಆಗಿದ್ದ. ಹೀಗಾಗಿ ಈ ಮೂವರಿಗೆ ಜಾಮೀನು ಸಿಕ್ಕಿದೆ.