Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಹೆಸರಲ್ಲಷ್ಟೇ ಧರ್ಮ ಇರೋದು.. ಸಂಘದಲ್ಲಿ ಬಡವರಿಂದ ಬಡ್ಡಿ ವಸೂಲಿ ಮಾಡೋದಷ್ಟೇ : ಧರ್ಮಸ್ಥಳ ಸಂಘದ ಬಗ್ಗೆ ಶಾಸಕ ಆಕ್ರೋಶ..!

02:20 PM Sep 17, 2024 IST | suddionenews
Advertisement

ಮಂಡ್ಯ: ಗ್ರಾಮೀಣ ಭಾಗದಲ್ಲಿ ಸಾಲ ಸೌಲಭ್ಯದ ಯೋಜನೆಯಲ್ಲಿ ಧರ್ಮಸ್ಥಳ ಸಂಘ ಹೆಚ್ಚು ಆಕ್ಟೀವ್ ಆಗಿದೆ. ವಾರದ ಸಾಲವನ್ನು ಗ್ರಾಮೀಣ ಭಾಗದ ಜನ ಹೆಚ್ಚಾಗಿಯೇ ತೆಗೆದುಕೊಂಡಿದ್ದಾರೆ. ಆದರೆ ಸಾಕಷ್ಟು ಆರೋಪಗಳು ಈ ಸಂಘದ ಮೇಲೆ ಇದ್ದು, ಬಡ್ಡಿ ಜಾಸ್ತಿ ಎಂಬ ಮಾತಿದೆ. ಇದೀಗ ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ ಕೂಡ ಈ ಬಗ್ಗೆ ಮಾತನಾಡಿ, ಆಕ್ರೋಶ ಹೊರಹಾಕಿದ್ದಾರೆ.

Advertisement

ಮಂಡ್ಯದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನರೇಂದ್ರ ಸ್ವಾಮಿ, ಧರ್ಮಸ್ಥಳ ಸಂಘದಲ್ಲು ಧರ್ಮದ ಕೆಲಸವೇ ಇಲ್ಲ. ಕೊಟ್ಟ ಸಾಲಕ್ಕೆ ಬಡವರಿಂದ ಶೇಕಡ 40ರಷ್ಟು ಬಡ್ಡಿ ವಸೂಲಿ ಮಾಡುತ್ತಾರೆ. ಧರ್ಮಸ್ಥಳ ಸಂಘಕ್ಕೆ ವರ್ಷಕ್ಕೆ ನೀವೂ ಕಟ್ಟುತ್ತಿರುವ ಬಡ್ಡಿ ಎಷ್ಟು. ನಿಮಗೆ ಯಾರಿಗೂ ಗೊತ್ತಿಲ್ಲ ಧರ್ಮಸ್ಥಳದ ಸಂಘದ ಬಗ್ಗೆ. ಮಂಜುನಾಥ್ ಸ್ವಾಮಿ ಅಂದುಕೊಂಡು ಬಿಟ್ಟಿದ್ದೀರ ನೀವು. ಸಂಘದ ಹೆಸರು ಧರ್ಮಸ್ಥಳದ್ದು. ಆದರೆ ಅಲ್ಲಿ ಧರ್ಮದ ಕೆಲಸ ಒಂದು ನಡೆಯುತ್ತಿಲ್ಲ. ನೀವೂ ಕಷ್ಟಪಟ್ಟು ಕೂಲಿನಾಲಿ ಮಾಡಿ, ವಾರದ ದುಡ್ಡು ಕಟ್ಟಿ, ಚೀಟಿ ಮಾಡುತ್ತೀರಿ. ಅರ್ಜೆಂಟ್ ಆಗಿ ಹತ್ತಿಪ್ಪತ್ತು ಸಾವಿರ ಹಣ ಸಿಗಬಹುದು. ಹತ್ತಿಪ್ಪತ್ತು ಸಾವಿರಕ್ಕೆ ವರ್ಷಕ್ಕೆ ಎಷ್ಟು ಬಡ್ಡಿ ಕಟ್ಟುತ್ತಾ ಇದ್ದೀಯಾ ಅಂತ ಗೊತ್ತಾ..?

ಈ ಪಿಡಗನ್ನು ತಪ್ಪಿಸಬೇಕು, ಒಂದು ಮನೆಯ ಬದುಕು ಉಳಿಯಬೇಕು ಅಂದ್ರೆ, ಒಂದು ತಾಯಿಗೆ ಜವಾಬ್ದಾರಿಯಾಗಿ ನಿಲ್ಲೋಣಾ ಅಂತ 2 ಸಾವಿರ ರೂಪಾಯಿ ಕೊಡ್ತಾ ಇರೋದು. ನಮ್ಮ ಎದುರಾಳಿ ಪಕ್ಷದವರು ಏನೇನೋ ಮಾತನಾಡುತ್ತಾರೆ ಎಂದು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಅನುಕೂಲತೆಯ ಬಗ್ಗೆ ನೆರೆದಿದ್ದ ಜನತೆಗೆ ತಿಳಿಸಿಕೊಟ್ಟಿದ್ದಾರೆ.

Advertisement

Advertisement
Tags :
bengaluruchitradurgaDharmasthala SanghMLA outragedreligionsuddionesuddione newsಚಿತ್ರದುರ್ಗಧರ್ಮಧರ್ಮಸ್ಥಳ ಸಂಘಬೆಂಗಳೂರುಶಾಸಕ ಆಕ್ರೋಶಸಂಘಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article