Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಲೋಕಸಭಾ ಚುನಾವಣೆಗೆ ಈಶ್ವರಪ್ಪ ಪ್ರಣಾಳಿಕೆ ಬಿಡುಗಡೆ : ಟ್ವೀಟ್ ಮೂಲಕ ಹೇಳಿದ್ದೇನು..?

01:01 PM Apr 14, 2024 IST | suddionenews
Advertisement

ಶಿವಮೊಗ್ಗ: ಮಗನಿಗೆ ಟಿಕೆಟ್ ಸಿಗದ ಹಿನ್ನೆಲೆ ಕೆ ಎಸ್ ಈಶ್ವರಪ್ಪ ಬಿಜೆಪಿ ವಿರುದ್ಧ ಸಿಡಿದೆದ್ದಿದ್ದಾರೆ. ಶಿವಮೊಗ್ಗದಲ್ಲೆ ಸ್ವತಂತ್ರವಾಗಿ ಸ್ಪರ್ಧೆ ಮಾಡಿದ್ದಾರೆ. ಈಗಾಗಲೇ ನಾಮಪತ್ರ ಕೂಡ ಸಲ್ಲಿಕೆ ಮಾಡಿದ್ದಾರೆ. ಬಿಜೆಪಿ ರಾಜ್ಯ ನಾಯಕರು ಏನೇ ಹೇಳಿದರು ಪ್ರಧಾನಿ ಮೋದಿ ಅವರ ಚಿತ್ರವನ್ನು ಬಿಡದೆ, ಪ್ರಚಾರ ಕಾರ್ಯದಲ್ಲಿ ಅವರ ಬ್ಯಾನರ್, ಅವರ ಫೋಟೋ, ಅವರ ಹೆಸರನ್ನೇ ಬಳಕೆ ಮಾಡಿಕೊಂಡು ವೋಟ್ ಕೇಳುತ್ತಿದ್ದಾರೆ. ಇದರ ನಡುವೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

Advertisement

ಚುನಾವಣೆ ಸಂದರ್ಭದಲ್ಲಿ ಜನರನ್ನು ಸೆಳೆಯುವುದಕ್ಕೆ ಪಕ್ಷಗಳು ಭರವಸೆಯ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಲಾಗುತ್ತದೆ. ಆ ಪ್ರಣಾಳಿಕೆಯಲ್ಲಿ ರೈತರಿಗೆ, ಬಡವರಿಗೆ ಮಹಿಳೆಯರಿಗೆ ಅನುಕೂಲವಾಗುವಂತೆ ಇರುತ್ತದೆ. ಆದರೆ ಈಶ್ವರಪ್ಪ ಅವರು ಬಿಡುಗಡೆ ಮಾಡಿರುವ ಪ್ರಣಾಳಿಕೆ ಯಡಿಯೂರಪ್ಪ ಹಾಗೂ ಕುಟುಂಬಸ್ಥರನ್ನು ಟಾರ್ಗೆಟ್ ಮಾಡಲಾಗಿದೆ.

ಹಿಂದುತ್ವದ ಉಳಿವು, ಪಕ್ಷದ ಶುದ್ಧೀಕರಣ, ಅಪ್ಪ-ಮಕ್ಕಳಿಂದ ರಾಜ್ಯ ಬಿಜೆಪಿಯನ್ನು ಮುಕ್ತಗೊಳಿಸುವುದೇ ನನ್ನ ಚುನಾವಣಾ ಪ್ರಣಾಳಿಕೆ. ರಾಜ್ಯ ಬಿಜೆಪಿಯ ಮಾನ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರೆ, ಅಪಪ್ರಚಾರ ಮಾಡಿ ರಾಷ್ಟ್ರಭಕ್ತರಲ್ಲಿ ಗೊಂದಲ ಮೂಡಿಸುವುದನ್ನು ನಿಲ್ಲಿಸಿ, ನರೇಂದ್ರ ಮೋದಿ, ಅಮಿತ್ ಶಾ ಅಥವಾ ಬೇರೆ ಯಾರೇ ಹೇಳಿದರೂ ನಾನು ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ.

Advertisement

ಕೆ ಎಸ್ ಈಶ್ವರಪ್ಪ ಅವರು ಶಿವಮೊಗ್ಗದಿಂದ ಬಂಡಾಯವೆದ್ದಿದ್ದರು. ಸ್ಪರ್ಧೆಯಿಂದ ಹಿಂದೆ ಸರಿಸುವುದಕ್ಕೆ ಅಮಿತ್ ಶಾ ಅವರು ಈಶ್ವರಪ್ಲ ಅವರಿಗೆ ಕರೆ ನೀಡಿದ್ದರು. ದೆಹಲಿಗೆ ಹೋದಾಗಲೂ ಸಿಕ್ಕಿರಲಿಲ್ಲ. ಹೀಗಾಗಿ ಅಲ್ಲಿಂದಾನೇ ಪಕ್ಷೇತರ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದರು. ಅದರಂತೆ ಈಗ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

Advertisement
Tags :
2024 Lok Sabha election2024 Lok Sabha electionsEshwarappa manifestoks eshwarappaLok Sabha electionShivamoogaಈಶ್ವರಪ್ಪ ಪ್ರಣಾಳಿಕೆ ಬಿಡುಗಡೆಕೆ ಎಸ್ ಈಶ್ವರಪ್ಪಟ್ವೀಟ್ ಲಲೋಕಸಭಾ ಚುನಾವಣೆಶಿವಮೊಗ್ಗ
Advertisement
Next Article